'ಕ್ವೀನ್' ಚಿತ್ರದ ಕನ್ನಡ ರೀಮೇಕ್ 'ಬಟರ್ಫ್ಲೈ': ಯೂರೋಪ್ ನಲ್ಲಿ ಚಿತ್ರೀಕರಣ ಅಂತ್ಯ
ಹಿಂದಿಯ ಯಶಸ್ವಿ ಚಿತ್ರ 'ಕ್ವೀನ್'ನ ರಿಮೇಕ್ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಒಟ್ಟಿಗೆ ತಯಾರಾಗುತ್ತಿದ್ದು, ಕೊನೆಯ ಹಂತದ ಶೂಟಿಂಗ್ ನ್ನು ಯುರೋಪ್ ನಲ್ಲಿ ಮುಗಿಸಿದೆ.
ಕಾಜಲ್ ಅಗರ್ವಾಲ್, ತಮನ್ನಾ ಭಾಟಿಯಾ, ಪಾರುಲ್ ಯಾದವ್ ಮತ್ತು ಮಂಜಿಮಾ ಮೋಹನ್ ನಾಯಕಿಯರ ಪಾತ್ರದಲ್ಲಿ ಅಭಿನಯಿಸಿದ್ದು ಇದೇ ಅಕ್ಟೋಬರ್ ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ. ಚಿತ್ರೀಕರಣ ಸೆಟ್ ನ ಫೋಟೋ ಸಿಟಿ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ.
ಪ್ಯಾರಿಸ್ ಪ್ಯಾರಿಸ್, ಬಟರ್ ಫ್ಲೈ,ಜಮ್ ಜಮ್ ಮತ್ತು ದಟ್ ಈಸ್ ಮಹಾಲಕ್ಷ್ಮಿ ಶೀರ್ಷಿಕೆಯಿರುವ ಚಿತ್ರಗಳಿಗೆ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ರಮೇಶ್ ಅರವಿಂದ್, ಮಲಯಾಳಂನಲ್ಲಿ ನೀಲಕಂಠ ಮತ್ತು ತೆಲುಗಿನಲ್ಲಿ ಪ್ರಶಾಂತ್ ವರ್ಮ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅಮಿತ್ ತ್ರಿವೇದಿ ಅವರ ಸಂಗೀತವಿದೆ. ಎಲ್ಲಾ ಹಾಡುಗಳ ಚಿತ್ರೀಕರಣ ಮುಗಿದಿದೆ. ಹಾಡುಗಳಿಗೆ ಕೊರಿಯೊಗ್ರಫಿ ಮಾಡಿದವರು ಬೊಸ್ಕೊ ಸೀಸರ್ ಮತ್ತು ಗಣೇಶ್ ಆಚಾರ್ಯ.ಮನು ಕುಮಾರನ್ ಬಂಡವಾಳ ಹೂಡಿದ್ದಾರೆ.
ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಪ್ರಾಜೆಕ್ಟ್ ಇಷ್ಟೊಂದು ಸುಲಭವಾಗಿ ಅಡೆತಡೆಗಳಿಲ್ಲದೆ ಮುಗಿಯುತ್ತದೆ ಎಂದು ಭಾವಿಸಿರಲಿಲ್ಲ ಎನ್ನುತ್ತಾರೆ ಚಿತ್ರದ ಸಹ ನಿರ್ಮಾಪಕಿಯಾಗಿರುವ ಬಟರ್ ಫ್ಲೈಯ ನಾಯಕಿ ಪಾರುಲ್ ಯಾದವ್.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ