ಲಕ್ಷ್ಮಿ ರೈ
ಸಿನಿಮಾ ಸುದ್ದಿ
'ಝಾನ್ಸಿ' ಚಿತ್ರದಲ್ಲಿ ಐಪಿಎಸ್ ಅಧಿಕಾರಿಯಾಗಿ ಲಕ್ಷ್ಮಿ ರೈ
ಐಪಿಎಸ್ ಅಧಿಕಾರಿ ಪಾತ್ರದ ಮೂಲಕ ನಟಿ ಲಕ್ಷ್ಮಿ ರೈ ಮತ್ತೆ ಸ್ಯಾಂಡಲ್ ವುಡ್ ಗೆ ಬಂದಿದ್ದಾರೆ. 2012ರಲ್ಲಿ ...
ಐಪಿಎಸ್ ಅಧಿಕಾರಿ ಪಾತ್ರದ ಮೂಲಕ ನಟಿ ಲಕ್ಷ್ಮಿ ರೈ ಮತ್ತೆ ಸ್ಯಾಂಡಲ್ ವುಡ್ ಗೆ ಬಂದಿದ್ದಾರೆ. 2012ರಲ್ಲಿ ಬಿಡುಗಡೆಯಾದ ಕಲ್ಪನಾ ಸಿನಿಮಾ ಅವರ ಕೊನೆಯ ಚಿತ್ರವಾಗಿತ್ತು. ಇದೀಗ ಸುಮಾರು 6 ವರ್ಷಗಳ ನಂತರ ಪಿವಿಎಸ್ ಗುರುಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ನಟಿಸಲು ಬಂದಿದ್ದಾರೆ. ಮರ್ಯಾದ ರಾಮಣ್ಣ, ಯಾರಿಗೆ ಬೇಡ ದುಡ್ಡು, ಕುಸುಮ ಮೊದಲಾದ ಚಿತ್ರ ನಿರ್ದೇಶಿಸಿದ್ದ ಗುರುಪ್ರಸಾದ್ ಜಾನ್ಸಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಜಾನ್ಸಿ ಚಿತ್ರದಲ್ಲಿ ನಟಿ ಲಕ್ಷ್ಮಿ ರೈಯದ್ದು ಸಮಕಾಲೀನ ಪಾತ್ರವಾಗಿದೆ. ಅವರೊಬ್ಬ ಯೋಧೆಯ ಪಾತ್ರದಲ್ಲಿ ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಡುತ್ತಾರೆ. ಚಿತ್ರದಲ್ಲಿ ಪ್ರೀತಿ ಮತ್ತು ಹೋರಾಟದ ಭಾವನೆಗಳು ಕೂಡ ಇರುತ್ತವೆ ಎನ್ನುತ್ತಾರೆ ನಿರ್ದೇಶಕರು.
ರಾಜೇಶ್ ಕುಮಾರ್ ನಿರ್ಮಾಣದ ಚಿತ್ರ ಆಗಸ್ಟ್ 29ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ