ರಜಿನಿಕಾಂತ್
ಸಿನಿಮಾ ಸುದ್ದಿ
ರಜನಿ ಅಭಿನಯದ ಕಾಲಾ ಚಿತ್ರ ಫೇಸ್ಬುಕ್ ಲೈವ್; ಓರ್ವನ ಬಂಧನ
ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಾಲಾ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು ಚಿತ್ರವನ್ನು ಫೇಸ್ ಬುಕ್ ಲೈವ್...
ಸಿಂಗಾಪುರ: ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಾಲಾ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು ಚಿತ್ರವನ್ನು ಫೇಸ್ ಬುಕ್ ಲೈವ್ ಮಾಡಿದ್ದ ಯುವಕನೋರ್ವನನ್ನು ಬಂಧಿಸಲಾಗಿದೆ.
ಕಾಲಾ ಚಿತ್ರವನ್ನು ವೀಕ್ಷಿಸುತ್ತಿದ್ದ ವೇಳೆ ಪ್ರವೀಣ್ ಥೇವಾರ್ ಎಂಬಾತ 40 ನಿಮಿಷಗಳ ಕಾಲ ಲೈವ್ ಮಾಡಿದ್ದಾನೆ. ಇದನ್ನು ಗಮನಿಸಿದ ರಜನಿ ಅಭಿಮಾನಿಗಳು ಚಿತ್ರತಂಡವರು ಕೂಡಲೇ ಸಿಂಗಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಹೆಚ್ಚೆತ್ತ ಸಿಂಗಾಪುರ ಪೊಲೀಸರು ಪ್ರವೀಣ್ ಥೇವಾರ್ ನನ್ನು ಬಂಧಿಸಿದ್ದಾರೆ.
ಚಿತ್ರದ ನಿರ್ಮಾಪಕರಾದ ಧನಂಜಯ್ ಅವರು ಟ್ವೀಟರ್ ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಪೈರಸಿ ಮಾಡುವುದು ಆಘಾತಕಾರಿ ಕ್ರಿಯೆ. ಅಸಹ್ಯಕರ ಎಂದು ಬರೆದುಕೊಂಡಿದ್ದಾರೆ.
ಇನ್ನು ಕರ್ನಾಟಕದಲ್ಲಿ ತೀವ್ರ ವಿರೋಧದ ನಡುವೆಯೂ 250 ಚಿತ್ರಮಂದಿರಗಳಲ್ಲಿ ಕಾಲಾ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಕಾಲಾ ಚಿತ್ರ ಪ್ರದರ್ಶನವನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ಮಾಡುತ್ತಿದ್ದು ಚಿತ್ರ ಪ್ರದರ್ಶನಕ್ಕೆ ಕಂಟಕವಾಗಿದೆ.
Shocking act of piracy. Disgusting


