ನಾನು ಸುರಕ್ಷಿತವಾಗಿದ್ದೇನೆ: ಕಾರು ಅಪಘಾತದ ನಂತರ ನಟ ಪುನೀತ್ ಹೇಳಿಕೆ

ನಟ ಸಾರ್ವಭೌಮ' ಸಿನಿಮಾ ಚಿತ್ರೀಕರಣ ಮುಗಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ನಟ ಪುನೀತ್‌ ...
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್
Updated on
ಬೆಂಗಳೂರು: ನಟ ಸಾರ್ವಭೌಮ' ಸಿನಿಮಾ ಚಿತ್ರೀಕರಣ ಮುಗಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ನಟ ಪುನೀತ್‌ ರಾಜ್‌ಕುಮಾರ್‌ ಅವರ ಕಾರು ಗುರುವಾರ ರಾತ್ರಿ ಅಪಘಾತಕ್ಕೊಳಗಾಗಿದ್ದು, ಅದೃಷ್ಟವಶಾತ್‌ ಪುನೀತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಬಳಿ ಕಾರಿನ ಟೈರ್ ಸ್ಪೋಟ ಗೊಂಡು ಪುನೀತ್ ಚಲಿಸುತ್ತಿದ್ದ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. 

ಪುನೀತ್ ರಾಜ್‍ ಕುಮಾರ್ ಹಾಗೂ ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪುನೀತ್ ರಾಜ್‍ ಕುಮಾರ್ ಜೊತೆ ಗನ್ ಮ್ಯಾನ್ ಹಾಗೂ ಕಾರಿನ ಚಾಲಕರಿದ್ದರು. ಈ ಘಟನೆ ನಂತರ ಪುನೀತ್ ಮತ್ತು ಸ್ನೇಹಿತರು ಅದೇ ಮಾರ್ಗದಲ್ಲಿ ಬರುತ್ತಿದ್ದ ಪರಿಚಯಸ್ಥರೊಬ್ಬರ ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದಾರೆ.
ಇನ್ನು ಸದಾಶಿವನಗರದ ಮನೆಗೆ ತಲುಪಿದ ಅಪ್ಪು ತಮ್ಮ ಕಾರು ಅಪಘಾತಕ್ಕೊಳಗಾಗಿದ್ದು ತಾನು ಸುರಕ್ಷಿತವಾಗಿರುವುದಾಗಿ ಫೇಸ್ ಬುಕ್ ನಲ್ಲಿ ಸ್ಟೇಟರ್ ಅಪ್ ಡೇಟ್ ಮಾಡಿದ್ದಾರೆ.
<

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com