ನಾದಬ್ರಹ್ಮ ಹಂಸಲೇಖ ನಿರ್ದೇಶನದ ಐತಿಹಾಸಿಕ ಸಿನಿಮಾಗೆ 'ರಾಜವರ್ಧನ್' ಹೀರೋ

ಒಂದು ಕಡೆ ಸರಿಗಮಪ ಕಾರ್ಯಕ್ರಮದ ಮಹಾಗುರು ಆಗಿರುವ ಸಂಗೀತ ನಿರ್ದೇಶಕ ಹಂಸಲೇಖ ಇನ್ನೊಂದು ಕಡೆ ಸಿನಿಮಾ ನಿರ್ದೇಶನವನ್ನು ...
ರಾಜ್ ವರ್ಧನ್
ರಾಜ್ ವರ್ಧನ್
ಬೆಂಗಳೂರು: ಒಂದು ಕಡೆ ಸರಿಗಮಪ ಕಾರ್ಯಕ್ರಮದ ಮಹಾಗುರು ಆಗಿರುವ ಸಂಗೀತ ನಿರ್ದೇಶಕ ಹಂಸಲೇಖ ಇನ್ನೊಂದು ಕಡೆ ಸಿನಿಮಾ ನಿರ್ದೇಶನವನ್ನು ಕೂಡ ಶುರು ಮಾಡಿದ್ದಾರೆ
ಐತಿಹಾಸಿಕ ಸಿನಿಮಾದತ್ತ ಒಲವು ಹೊಂದಿರುವ  ನಾದಬ್ರಹ್ಮ ಹಂಸಲೇಖ ಸದ್ಯ 'ಗಂಡುಗಲಿ ವೀರ ಮದಕರಿ ನಾಯಕ' ಅಥವಾ 'ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ'  ಸಿನಿಮಾಗಾಗಿ  ಬಿಎಲ್ ವೇಣು ಬರೆದಿರುವ ಪುಸ್ತಕಗಳಿಂದ ಹೆಚ್ಚಿನ ವಿವರಗಳನ್ನು ಕಲೆ ಹಾಕುತ್ತಿದ್ದಾರಂತೆ. 
ಈ ಸಂಬಂಧ ಜೂನ್ 23 ರಂದು  ಅಧಿಕೃತ ಪ್ರಕಟಣೆ ಹೊರಬೀಳಲಿದೆ, ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜ್ ವರ್ದನ್ ಈ ಐತಿಹಾಸಿಕ ಸಿನಿಮಾದ ಹೀರೋ ಆಗಲಿದ್ದಾರೆ. ನೂರೊಂದು ನೆನಪು ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು, ಬಿಚ್ಚುಗತ್ತಿ ಚಿತ್ರದ ಹೀರೋ ಪಾತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. 
ರಾಜ ವರ್ಧನ್ ತಮ್ಮ ಸಿನಿಮಾಗಾಗಿ ಕುದುರೆ ಸವಾರಿ ಕಲಿಯುತ್ತಿದ್ದಾರೆ, ಜೊತೆಗೆ ಫಿಟ್ ನೆಸ್ ಕಡೆ ಕೂಡ ಗಮನ ಹರಿಸಿದ್ದು ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಮೊದಲು ಹಂಸಲೇಖರ ಐತಿಹಾಸಿಕ ಸಿನಿಮಾಗೆ ಹಲವು ಸ್ಟಾರ್ ನಟರ ಹೆಸರು ಕೇಳಿ ಬಂದಿದ್ದವು, ಆದರೆ  ಅವರಿಗೆ ಬೇರೆ ಕಮಿಟ್ ಮೆಂಟ್ ಇದ್ದ ಕಾರಣ ಅವರು ನಟಿಸುತ್ತಿಲ್ಲ,  ಹೀಗಾಗಿ ಹೊಸ ಮುಖ ತರಲು ಹಂಸಲೇಖ ನಿರ್ಧರಿಸಿದ್ದಾರೆ
ಎಲ್ಲವೂ ಅಂದುಕೊಂಡಂತೆ ಆದರೆ ರಾಜ್ ವರ್ಧನ್ ಕೆರಿಯರ್ ಉತ್ತಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ರಾಜವರ್ಧನ್ ಇತ್ತೀಚೆಗಷ್ಟೇ ಫ್ಲೈ ಮತ್ತು ಇರ ಎಂಬ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ, ಆದರೆ ಇನ್ನೂ ಸಿನಿಮ ಬಿಡುಗಡೆಯಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com