ರೀಮೇಕ್ ಮಾಡುವಾಗ ಸ್ಥಳೀಯ ಚಿತ್ರಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುವುದು ಮುಖ್ಯ:ಕೆ.ಎಂ. ಚೈತನ್ಯ

ಚಿತ್ರ ನಿರ್ದೇಶಕ ಕೆ.ಎಂ. ಚೈತನ್ಯ ತಮಿಳಿನ ಯಶಸ್ವಿ ಚಿತ್ರ ’ಪಿಚ್ಚೆಕಾರನ್’ ಅನ್ನು ಕನ್ನಡಕ್ಕೆ ತರುತ್ತಿದ್ದಾರೆ. ’ಅಮ್ಮ ಐ ಲವ್ ಯು’ ಹೆಸರಿನಲ್ಲಿ ಕನ್ನಡಕ್ಕೆ ಬಂದಿರುವ ಈ ಚಿತ್ರ.....
ಅಮ್ಮ ಐ ಲವ್ ಯು ಚಿತ್ರದ ಒಂದು ದೃಶ್ಯ
ಅಮ್ಮ ಐ ಲವ್ ಯು ಚಿತ್ರದ ಒಂದು ದೃಶ್ಯ
ಬೆಂಗಳೂರು: ಚಿತ್ರ ನಿರ್ದೇಶಕ ಕೆ.ಎಂ. ಚೈತನ್ಯ ತಮಿಳಿನ ಯಶಸ್ವಿ ಚಿತ್ರ ’ಪಿಚ್ಚೆಕಾರನ್’ ಅನ್ನು ಕನ್ನಡಕ್ಕೆ ತರುತ್ತಿದ್ದಾರೆ. ’ಅಮ್ಮ ಐ ಲವ್ ಯು’ ಹೆಸರಿನಲ್ಲಿ ಕನ್ನಡಕ್ಕೆ ಬಂದಿರುವ ಈ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ದ್ವಾರಕೀಶ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ನಿಶಿಬಿಕಾ ನಾಯ್ಡು  ಅಭಿನಯವಿದೆ.
ಎಕ್ಸ್ ಪ್ರೆಸ್ ಜತೆ ಮಾತನಾಡಿದ ಚೈತನ್ಯ, ಚಿರಂಜೀವಿ ಸರ್ಜಾ, ಯೋಗೀಶ್ ದ್ವಾರಕೀಶ್ ಹಾಗೂ ಗುರುಕಿರಣ್ ಜತೆಗಿನ ತಮ್ಮ ಕೆಲಸದ ಅನುಭವ ಹಂಚಿಕೊಂಡಿದ್ದಾರೆ.
ವಿಭಿನ್ನ ಭಾಷೆ, ವಿಭಿನ್ನ ಪಲಿತಾಂಶ
ವಿಜಯ್ ಆಂಥೋನಿ ನಟನೆಯ ಪಿಚ್ಚಕಾರನ್ ನಂತಹಾ ಹಿಟ್ ಚಿತ್ರವನ್ನು ಇನ್ನೊಂದು ಭಾಷೆಯಲ್ಲಿ ತರುವುದಕ್ಕೆ ಧೈರ್ಯ ಅಗತ್ಯವಿದೆ.ಇದಾಗಲೇ ಬೆಳ್ಳಿ ತೆರೆ ಮೇಲೆ ಯಶಸ್ವಿಯಾದ ಕಥೆಯೊಂದನ್ನು ಮತ್ತೆ ಹೊಸತನದೊಡನೆ ಬಿಡುಗಡೆಗೊಳಿಸುವುದು ಸಾಮಾನ್ಯ ಕೆಲಸವಲ್ಲ. ಅಮ್ಮ ಐ ಲವ್ ಯು ನ ಸಂದರ್ಭದಲ್ಲಿ, ಮೂಲ ತಮಿಳು ಕಥೆಯು ಬಹಳ ಶಕ್ತಿಯುತವಾಗಿದ್ದು ನಿರ್ದೇಶಕರ ಮೇಲೆ ಭಾರೀ ಒತ್ತಡ ತರುತ್ತದೆ.ಇದು ಕೇವಲ ಬಾಕ್ಸ್ ಆಪೀಸ್ ಹಿಟ್ ನ ವಿಚಾರವಲ್ಲ, ಚಿತ್ರದ ಮೂಲಕ ಒಂದು ಸಂದೇಶ ರವಾನೆಯಾಗಬೇಕು ಎಂದಾಗ ನಿರ್ದೇಶಕನ ಜವಾಬ್ದಾರಿ ದ್ವಿಗುಣಗೊಳ್ಳುತ್ತದೆ.
"ಮತ್ತೊಂದು ಬಾಷೆಯಲ್ಲಿ ಚಿತ್ರ ತಯಾರಿಸುವಾಗ ಅಲ್ಲಿನ ಸ್ಥಳೀಯ ಭಾಷೆ, ಸನ್ನಿವೇಶಗಳನ್ನು ಸೇರ್ಪಡೆಗೊಳಿಸುವುದು ಮುಖ್ಯ. ಇದು ಕನ್ನಡ ಚಿತ್ರಪ್ರೇಮಿಗಳ ಮನಗೆಲ್ಲುವಂತಾಗಬೇಕು.ಇದು ನಟರು, ಬರಹಗಾರರು, ತಂತ್ರಜ್ಞರಿಗೆ ಸವಾಲಾಗಲಿದೆ.ನಾವು ಹೊಸತನದ ಅನ್ವೇಷಣೆಗೆ ಮುಕ್ತವಾಗಿರಬೇಕು.
ಅಮ್ಮ ಐ ಲವ್ ಯು ಒಂದು ಕೌಟುಂಬಿಕ ಮನರಂಜನಾ ಚಿತ್ರ
ಅಮ್ಮ ಐ ಲವ್ ಯು ಒಂದು ಕುಟುಂಬ ಸಮೇತ ನೋಡಬಹುದಾದ ಚಿತ್ರ ಎನ್ನಲು ನಿರ್ದೇಶಕ ಚೈತನ್ಯ ಅನೇಕ ಕಾರಣ ನೀಡುತ್ತಾರೆ. ಅದ್ಭುತ ದೃಶ್ಯಗಳು, ಭಾವನಾತ್ಮಪ್ರೇಮ ಕಥೆ, - ಪ್ರೇಕ್ಷಕರನ್ನು ಥಿಯೇಟರ್ಗಳಿಗೆ ಕರೆತರುವ ಎಲ್ಲಾ ಅಂಶವನ್ನೂ ಈ ಚಿತ್ರ ಹೊಂದಿದೆ.ಈ ಚಿತ್ರ ಸಂಬಂಧಗಳಿಗೆ ಹೊಸ ಭಾಷ್ಪ ಒದಗಿಸಲಿದೆ.ಇತ್ತೀಚೆಗೆ ವಿದ್ಯಾರ್ಥಿಗಳು, ಯುಪ್ರೇಮಿಗಳಿಗೆ ಮಾತ್ರ ಸೀಮಿತವಾದ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದ್ದು ಇದು ಅಂತಹಾ ಚಿತ್ರಗಳಿಗಿಂತ ಭಿನ್ನವಾಗಿದೆ.
ಚಿರು ಜತೆ ಮೂರನೇ ಚಿತ್ರ
ಆಟಗಾರ, ಆಕೆ ಬಳಿಕ ಚಿರಂಜೀವಿ ಸರ್ಜಾ ಜತೆಗೆ ಚೈತನ್ಯ ಅವರ ಮೂರನೇ ಚಿತ್ರ ಇದಾಗಿದೆ. "ನಾನು ಮೊದಲಿಗೆ ಆಟಗಾರ ಸೆಟ್ ನಲ್ಲಿ ಚಿರುವಿನೊಡನೆ ಕೆಲ್ಸ ಮಾಡಿದ್ದೆ. ಆಗ ನನ್ನ ನಿರ್ದಿಷ್ಟ ಕೋನಗಳ ಬಗ್ಗೆ ಅವರಿಗೆ ತಿಳಿಸಿದ್ದೆ, ಅವರೂ ಒಪಿಗೆ ಸೂಚಿಸಿದ್ದರು.  ನಾನು ಚಿತ್ರ ನಿರ್ದೇಶನ ಮಾಡುವ ವಿಧಾನವನ್ನು ಅವರೂ ಇಷ್ಟಪಟ್ಟಿದ್ದಾರೆ.ಹಾಗಾಗಿ ನಾನು ಆಕೆ ಚಿತ್ರ ತಯಾರಿಸಿದ ಬಳಿಕ ಸಹ ಅವರು ನನ್ನೊಡನೆ ಕೆಲಸ ಮಾಡುವ ಹಂಬಲ ವ್ಯಕ್ತಪಡಿಸಿದ್ದರು. ನನ್ನ ಮತ್ತು ಚಿರು ನಡುವಿನ ಬಾಂಧವ್ಯ ಗಟ್ಟಿಯಾಗಿದೆ. ಅಮ್ಮ ಐ ಲವ್ ಯೂ ಮೂಲಕ ಅದು ಇನ್ನಷ್ಟು ಬೆಳೆದಿದೆ.
ಯೋಗಿ ಮತ್ತು ನಾನು ಒಬ್ಬರಿಗೊಬ್ಬರು ಪೂರಕ
ಯೋಗಿ ಅವರಿಗಿಷ್ಟವಾದ ಚಿತ್ರಗಳಿಗೆ ಹಣ ತೊಡಗಿಸುತ್ತಾರೆ. ಸ್ಪಷ್ಟವಾಗಿ ಹೇಳಬೇಕೆಂದರೆ ಅವರು ತಮ್ಮ ತಂದೆ ದ್ವಾರಕೀಶ್ ಅವರ ಕೌಶಲ್ಯವನ್ನೇ ಪಡೆದಿದ್ದಾರೆ.ಅವರು ಚಿತ್ರದ ಪ್ರತಿಯೊಂದು ಹಂತದಲ್ಲಿ ಸರಿಯಾದ ತಂತ್ರಜ್ಞರನ್ನು ತೆಗೆದುಕೊಳ್ಳುವಂತೆ ಹೇಳಿದ್ದರಲ್ಲದೆ ಸ್ಕ್ರಿಪ್ಟಿಂಗ್ ಮತ್ತು ಮಾರ್ಕೆಟಿಂಗ್ ಸಹ ಉತ್ತಮವಾಗಿರುವಂತೆ ನೋಡಿಕೊಂಡಿದ್ದಾರೆ. ನಿರ್ದೇಶಕರಿಗೆ ಉತ್ತಮ ಬೆಂಬಲ ನೀಡುವ ಯೋಗಿ  ಜೊತೆಗಿನ ಸಹಯೋಗ ಮತ್ತು ಅವರೊಂದಿಗೆ ಕೆಲಸ ಮಾಡುವುದು ನಿಜಕ್ಕೂ ಉತ್ತಮ ಅನುಭವ. ಏಕೆಂದರೆ ಅವರೊಡನೆ ಕೆಲಸ ಮಾಡುವವರು ಸಿನಿಮಾ ವ್ಯವಹಾರದ ಒಳಹೊರಗನ್ನು ಅರಿಯುತ್ತಾರೆ. ನಾನು ಸಿನಿಮಾದ ಸೃಜನಾತ್ಮಕ ಅಂಶವನ್ನು  ಗಮನಿಸಿದರೆಅವರು ವಾಣಿಜ್ಯ ದೃಷ್ಟಿಕೋನವನ್ನು ಹೊಂದ್ದ್ದಾರೆ.ಹೀಗಾಗಿ ನಾವು ಒಬ್ಬರಿಗೊಬ್ಬರು ಪೂರಕವಾಗಿದ್ದೆವು.
'ಗುರುಕಿರಣ್, ಚಿತ್ರರಂಗದ  ಆಸ್ತಿ'
ನಾನು ಚಿಕ್ಕಂದಿನಿಂದ ಗುರುಕಿರಣ್ ಸಂಗೀತ ಕೇಳುತ್ತಾ ಬೆಳೆದವನು. ತನ್ನ ಸಂಗೀತದ ಮೂಲಕ ಕೇವಲ ಸಾಮಾನ್ಯ ವ್ಯಕ್ತಿಯಲ್ಲದೆ ಎಂತಹವರನ್ನೂ ಮೋಡೊ ಮಾಡಬಲ್ಲ ಗುರು ಅವರಿಂದ ಈಚಿನ ಸಂಗೀತ ನಿರ್ದೇಶಕರು ಕಲಿಯಬೇಕಾದದ್ದು ಬಹಳಷ್ಟಿದೆ.ಇದಕ್ಕೂ ಹಿಂದೆ ನಾನು ಆಕೆ ಚಿತ್ರದಲ್ಲಿ ಸಹ ಗುರುವನ್ನೇ ಸಂಗೀತ ನೀಡುವಂತೆ ಕೇಳಿದ್ದೆ. ಇದೀಗ ಅಮ್ಮ... ಗೆ ಸಹ ಸಂಗೀತ ನಿರ್ದೇಶನ ಮಾಡಿದ್ದಾರೆ.ಅವರು  ಕನ್ನಡ ಸಿನಿಮಾರಂಗದ ಆಸ್ತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com