ದಿಗಂತ್ 'ಕಥೆಯೊಂದು ಶುರುವಾಗಿದೆ' ಟ್ರೇಲರ್ ಗೆ ಪ್ರೇಕ್ಷಕ ಫಿದಾ, ಯೂಟ್ಯೂಬ್ ನಲ್ಲಿ 4.5 ಲಕ್ಷ ಜನ ವೀಕ್ಷಣೆ

ಕಳೆದ ನಾಲ್ಕು ದಿನಗಳ ಹಿಂದೆ ನಟ ದಿಗಂತ್ ಅಭಿನಯದ ’ಕಥೆಯೊಂದು ಶುರುವಾಗಿದೆ’ ಚಿತ್ರದ ಟ್ರೇಲರ್ ಇದಾಗಲೇ ಯೂಟ್ಯೂಬ್ ನಲ್ಲಿ ಟ್ರ್ರೆಂಡ್ ಸೃಷ್ಟಿಸಿದ್ದು 4.5 ಲಕ್ಷ ಮಂದಿ ಈ ಟ್ರೇಲರ್ ನೋಡಿದ್ದಾರೆ.
ಕಥೆಯೊಂದು ಶುರುವಾಗಿದೆ ಚಿತ್ರದ ಒಂದು ದೃಶ್ಯ
ಕಥೆಯೊಂದು ಶುರುವಾಗಿದೆ ಚಿತ್ರದ ಒಂದು ದೃಶ್ಯ
ಬೆಂಗಳೂರು: ಕಳೆದ ನಾಲ್ಕು ದಿನಗಳ ಹಿಂದೆ ನಟ ದಿಗಂತ್ ಅಭಿನಯದ ’ಕಥೆಯೊಂದು ಶುರುವಾಗಿದೆ’ ಚಿತ್ರದ ಟ್ರೇಲರ್ ಇದಾಗಲೇ ಯೂಟ್ಯೂಬ್  ನಲ್ಲಿ ಟ್ರ್ರೆಂಡ್ ಸೃಷ್ಟಿಸಿದ್ದು  4.5 ಲಕ್ಷ ಮಂದಿ ಈ ಟ್ರೇಲರ್ ನೋಡಿದ್ದಾರೆ. 
ಮೂರು ನಿಮಿಷಗಳ ಈ ತ್ರೇಲರ್ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು ಪ್ರೇಕ್ಷಕರು ನಾಯಕ ನಟನ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.ಬಹುಕಾಲದಿಂದ ದಿಗಂತ್ ನನ್ನು ’ಡಾನ್’ ಆಗಿ ಕಾಣಬೇಕೆನುವುದು ಅವರ ಅಭಿಮಾನಿಗಳ ಆಶಯವಾಗಿತ್ತು.
ಈ ಚಿತ್ರದಲ್ಲಿ ದಿಗಂತ್ ಜತೆಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ ಪೂಜಾ ದೇವರಿಯಾ ಅವರಿಗೆ ಇದು ಪ್ರಥಮ ಕನ್ನಡ ಚಿತ್ರವಾಗಿದ್ದು ಅವರು ಉದ್ಯದ ಒಳ, ಹೊರಗಿನ ಪ್ರಸಿದ್ದರಿಂಡ ಗುರುತಿಸಲ್ಪಡುತ್ತಿದ್ದಾರೆ.. ಹಿರಿಯ ನಟಿ ಸುಹಾಸಿನಿ ಮಣಿರತ್ನಂ, ನಿರ್ದೇಶಕ ಪವನ್ ಕುಮಾರ್, ನಟರಾದ ವಿಜಯ್ ಸೇತುಪತಿ ಮತ್ತು ಸಿದ್ಧಾರ್ಥ್ ಸಾಮಾಜಿಕ ಮಾಧ್ಯಮದ ಮೂಲಕ ಚಿತ್ರದ ಕುರಿತಾದ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ."ನಾನು ನನ್ನೊಳಗೆ ಧನಾತ್ಮಕ ಭಾವನೆ ಹೊಂದಿದೇನೆ" ನಿರ್ದೇಶಕ ಸೆನ್ನಾ ಹೆಗಡೆ ಹೇಳಿದ್ದಾರೆ.
ಸೆನ್ನಾ ಹೇಳಿದಂತೆ ಟ್ರೇಲರ್ ಚಿತ್ರದ ಸಾರಾಂಶವನ್ನು ನೀಡುತ್ತದೆ, ಜತೆಗೆ ಚಿತ್ರದ ಅಂತಿಮ ಆವೃತ್ತಿಯ ಕಲ್ಪನೆಯನ್ನು  ಸಹ ಒಳಗೊಂಡಿದೆ."ಅನೇಕರು ಟ್ರೇಲರ್ ನೊಡಿ ಬಳಿಕ ಚಿತ್ರ ವೀಕ್ಷಣೆಗೆ ಮುಂದಾಗುವುದನ್ನು ನಾನು ಕಂಡಿದ್ದೇನೆ.ನಾವು ಟ್ರೇಲರ್ ನಲ್ಲಿ ಏನಿರಬೇಕೆಂದು ಖಚಿತಪಡಿಸಿಕೊಂಡ ಬಳಿಕ ಟ್ರೇಲರ್ ತಯಾರಿಸಿದ್ದೇವೆ. ಟ್ರೇಲರ್ ನಲ್ಲಿ ತಾಜಾತನವಿರುವುದರಿಂಡ ಜನರ ಮೆಚ್ಚುಗೆ ಲಭಿಸಿದೆ ಎಂಡು ನಾನು ಭಾವಿಸುತ್ತೇನೆ."
ಸಿಂಕ್ ಸೌಂಡಿನೊಂದಿಗೆ ಬರುವ ಭಾವನೆಗಳು, "ನೈಜತೆಯಿಂದ ಕೂಡಿದೆ" ಎಂದು ಸೆನ್ನಾ ಹೇಳುತ್ತಾರೆ. ಇದಾಗಲೇ ಚಿತ್ರದ 70 ಬಾಗದ ಡಬ್ಬಿಂಗ್ ಕೆಲಸ ಸೆಟ್ ನಲ್ಲೇ ನಡೆದಿದೆ, ಉಳಿದದ್ದನ್ನು ಸ್ಟುಡಿಯೋದಲ್ಲಿ ಮಾಡಲಾಗುತ್ತದೆ.
ಬೆಂಗಳೂರು, ಮೈಸೂರು, ಕರಾವಳಿ, ಪಾಂಡಿಚೇರಿ, ಕೇರಳದ ಮುನ್ನಾರ್ ಸೇರಿ ಆರು ಕಡೆಗಳಲ್ಲಿ ಚಿತ್ರದ ಶೂಟಿಂಗ್ ನಡೆದಿದೆ. ಕಳೆದ ಮೂವತ್ತು ದಿನಗಳಲ್ಲಿ ಹೊರಾಂಗಣ ಚಿತ್ರೀಕರಣ ಮುಕ್ತಾಯವಾಗಿದೆ. "ನಾವು ಮೊದಲು ಪ್ರೀ ಪ್ರೊಡಕ್ಷನ್ ಯೋಜನೆಯನ್ನು ಉತ್ತಮ ರೀತಿಯಲ್ಲಿ ತಯಾರಿಸಿದ್ದೆವು, ಪೋಸ್ಟ್ ಪ್ರೊಡಕ್ಷನ್ ಗಾಗಿ ಣಾವುಗಳು ಒಂದೂವರೆ ತಿಂಗಳ ಅವಕಾಶ ತೆಗೆದುಕೊಂಡಿದ್ದೇವೆ. ಇದೀಗ ಚಿತ್ರ ರೀ ರೆಕಾರ್ಡಿಂಗ್ ಹಂತದಲ್ಲಿದೆ." ಸೆನ್ನಾ ಹೇಳಿದ್ದಾರೆ.
ಚಿತ್ರದ ಆಡಿಯೋ ಇದಾಗಲೇ ಬಿಡುಗಡೆಯಾಗಿದ್ದು ಸದ್ಯ ಚಿತ್ರವನ್ನು ಸೆನ್ಸಾರ್ ಮಂಡಳಿ ಎದುರಿಗೆ ಪ್ರದರ್ಶಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಸ್ಯಾಂಡಲ್ ವುಡ್ ಗೆ ದಿಗಂತ್ ಪರಿಚಯವಿದ್ದರೂ ಕನ್ನಡದಲ್ಲಿ ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡುತ್ತಿರುವ ಸೆನ್ನಾ ಅವರಿಗೆ ದಿಗಂತ್ ಅಷ್ಟಾಗಿ ಪರಿಚಯವಿಲ್ಲ."ರಕ್ಷಿತ್ ಶೆಟ್ಟಿ ನನಗೆ ದಿಗಂತ್ ನಂಬರ್ ನೀಡಿದ್ದರು. ನಾನು ಅವರೊಡನೆ ನಿಮಿಷದ ಕಾಲ ಮಾತನಾಡುವಷ್ಟರಲ್ಲಿ ನಾನು ಯಾವ ಪೇಪರ್ ಗೆ ಸಹಿ ಮಾಡಬೇಕು? ಎಂದು ಅವರು ಕೇಳಿದ್ದರು.ನನ್ನ ಕಥೆ, ಚಿತ್ರ ಶೈಲಿಯಲ್ಲಿ ಅವರಿಗೆ ಸಂಪೂರ್ಣ ನಂಬಿಕೆ ಇತ್ತು"
"ನಾನೀಗ ದಿಗಂತ್ ನಲ್ಲಿ ಸ್ನೇಹಿತನನ್ನು ಕಾಣುತ್ತೇನೆ. ನಗರಕ್ಕೆ ಬಂದಾಗ ಹ್ಯಾಂಗ್ ಔಟ್ ಮಾಡಲು ನನಗೆ ಯಾರಾದರೂ ಸಿಗುವರೆಂದರೆ ದಿಗಂತ್, ಅವರು ಯಾರ ಬಗ್ಗೆ ತಾರತಮ್ಯ ಮಾಡುವವರಲ್ಲ"
"ನಾನು ಹಾಗೂ ದಿಗಂತ್ ಇನ್ನೊಂದು ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡುವ ಬಯಕೆ ಇದೆ, ಆದರೆ ಕಥೆಯೊಂದು ಶುರುವಾಗಿದೆ ಚಿತ್ರದ ಪ್ರತಿಕ್ರಿಯೆ ನೋಡಿದ ಬಳಿಕ ಈ ಕುರಿತು ಅಂತಿಮ ತೀರ್ಮಾನ ಮಾಡಲಾಗುವುದು. ಇನ್ನು ನಟಿ ಪೂಜಾ ಸಹ ಒಳ್ಳೆಯ ಸ್ನೇಹಜೀವಿಯಾಗಿದ್ದು ಸೆಟ್ ನಲ್ಲಿ ಎಲ್ಲರೊಡನೆ ಹೊಂದಾಣಿಕೆ, ಸಹಕಾರ ನಿಡಿದ್ದಾರೆ" ನಿರ್ದೇಶಕ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com