ವಿನಯ್ ರಾಜ್ ಕುಮಾರ್
ಸಿನಿಮಾ ಸುದ್ದಿ
ದೇವನೂರು ಚಂದ್ರು 'ಗ್ರಾಮಾಯಣ'ಕ್ಕಾಗಿ ಅಪ್ಪ ಕೈಬಿಟ್ಟ ವಿನಯ್ ರಾಜಕುಮಾರ್ !
ಅನಂತು v/s ನುಸ್ರತ್ ಸಿನಿಮಾ ಶೂಟಿಂಗ್ ಮುಗಿಸಿರುವ ವಿನಯ್ ರಾಜ್ ಕುಮಾರ್ ಶ್ರೀಧರ್ ನಿರ್ದೇಶನದ ಅಪ್ಪ ಅಮ್ಮ ಪ್ರೀತಿ ಸಿನಿಮಾ ಕೈ ಬಿಟ್ಟಿದ್ದಾರೆ....
ಬೆಂಗಳೂರು: ಅನಂತು v/s ನುಸ್ರತ್ ಸಿನಿಮಾ ಶೂಟಿಂಗ್ ಮುಗಿಸಿರುವ ವಿನಯ್ ರಾಜ್ ಕುಮಾರ್ ಶ್ರೀಧರ್ ನಿರ್ದೇಶನದ ಅಪ್ಪ ಅಮ್ಮ ಪ್ರೀತಿ ಸಿನಿಮಾ ಕೈ ಬಿಟ್ಟಿದ್ದಾರೆ.
ಸಿದ್ದಾರ್ಥ ಹೀರೋ ವಿನಯ್ ದೇವನೂರು ಚಂದ್ರು ಅವರ ಗ್ರಾಮಾಯಣ ಸಿನಿಮಾಗಾಗಿ ಅಪ್ಪ-ಅಮ್ಮ ಪ್ರೀತಿ ಸಿನಿಮಾ ಕೈಬಿಟ್ಟು ಗ್ರಾಮೀಣ ಕಥೆ ಆಧರಿತ ಚಿತ್ರದಲ್ಲಿ ಪಾಲ್ಗೋಳ್ಳಲಿದ್ದಾರೆ.
ಸೆಪ್ಟಂಬರ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ, ಶ್ರೀಧರ್ ನಿರ್ದೇಶನದ ಅಪ್ಪ ಅಮ್ಮ ಪ್ರೀತಿ ಸಿನಿಮಾ ಯೋಜನೆ ಕೈ ಬಿಡಲಾಗಿದೆ.
ಮಲಯಾಳಿ ನಾಯಕಿ ಮಾನಸ ರಾಧಕೃಷ್ಣನ್ ವಿನಯ್ ಜೊತೆಯಾಗಲಿದ್ದಾರೆ, ಶರತ್ ಕುಮಾರ್ ಅವರನ್ನು ಕರೆತರಲು ನಿರ್ದೇಶಕರು ಪ್ರಯತ್ನಿಸುತ್ತಿದ್ದಾರೆ. ಖುಷ್ಬೂ ಅವರು ಪ್ರಧಾನ ಪಾತ್ರ ಮಾಡಲಿದ್ದಾರೆ, ಸಮಯ ವ್ಯರ್ಥ ಮಾಡದೇ ಗ್ರಾಮಾಯಣ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೋಳ್ಳುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ