ಯಶಸ್ಸು- ವೈಫಲ್ಯ ಎರಡೂ ಕೂಡ ಅಪಾಯ, ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು: ಶಿವಣ್ಣ

ಕಳೆದ ಮೂರು ದಶಕಗಳಿಂದ ಕನ್ನಡ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿರುವ ಹಿರಿಯ ನಟ ಶಿವರಾಜ್ ಕುಮಾರ್ ಸುಮಾರು 100 ಕ್ಕೂ.
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
ಬೆಂಗಳೂರು: ಕಳೆದ ಮೂರು ದಶಕಗಳಿಂದ ಕನ್ನಡ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿರುವ ಹಿರಿಯ ನಟ ಶಿವರಾಜ್ ಕುಮಾರ್  ಸುಮಾರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 
ಇತ್ತೀಚೆಗೆ ನಟಿಸಿದ ಟಗರು ಸಿನಿಮಾ 100 ದಿನ ಯಶಸ್ವಿ ಪ್ರದರ್ಶನ ಕಂಡಿದೆ. ವಿಶ್ಲೇಷಣಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಂಡಿರುವುದಾಗಿ ಶಿವರಾಜ್ ಕುಮಾರ್ ಹೇಳಿದ್ದಾರೆ, ತಮ್ಮ ಹಿಂದಿನ ಸಾಧನೆಗಳ ಬಗ್ಗೆ ಸ್ಮರಿಸದೇ ಮುಂದಿನದರ ಬಗ್ಗೆ ಫೋಕಸ್ ಮಾಡಬೇಕೆಂದು ಹೇಳಿದ್ದಾರೆ
ಟಗರು ಸಿನಿಮಾ ಯಶಸ್ಸಿನ ನಂತರವೂ ಮುಂದಿನ ನಿರೀಕ್ಷೆಗಳ ಬಗ್ಗೆ ಫೋಕಸ್ ಮಾಡುವುದು ನಚನಿಗೆ ಬಹು ಮುಖ್ಯ,  ಯಶಸ್ಸು ಮತ್ತು ವೈಫಲ್ಯ ಎರಡನ್ನು  ಒಂದೇ ರೀತಿ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ, ಇದೆರೆಡೂ ಒಂದೇ ರೀತಿಯಾದ ಅಪಾಯ, ಇದನ್ನು ನಮ್ಮ ತಂದೆ ಅರ್ಥ ಮಾಡಿಕೊಂಡಿದ್ದರು,. ಡಾ.ರಾಜ್ ಕುಮಾರ್ ಅವರು ಯಶಸ್ಸು ಮತ್ತು ವೈಪಲ್ಯಗಳನ್ನು ಸರಿಯಾಗಿ ತೂಗಿಸದಿದ್ದರೇ ಅಷ್ಟೊಂದು ವೈವಿಧ್ಯಮಯ ಪಾತ್ರಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ,
ಇಷ್ಟೆಲ್ಲಾ ಅನುಭವವಿದ್ದರೂ ತಾವು ಇನ್ನೂ ಮತ್ತಷ್ಟಉ ಉತ್ತಮವಾದದ್ದಕ್ಕೆ ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ನಾಯಕನಾಗಿ ನೀವು ವಿಶೇಷವಾದದ್ದನ್ನು ತರಬೇಕು. ನನ್ನ ಈ ಹಂತದಲ್ಲಿ ನನ್ನ ಪಾತ್ರಗಳ ಬಗ್ಗೆ ಮತ್ತಷ್ಟು ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ.
ಕವಚ ಸಿನಿಮಾದಲ್ಲಿ ನಾನು ಕುರುಡನ  ಪಾತ್ರದಲ್ಲಿ  ನಟಿಸಿದ್ದೇನೆ,  ಸ್ಟಂಟ್ ಮಾಸ್ಟರ್ ರವಿ ವರ್ಮಾ ನಿರ್ದೇಶನದ ರುಸ್ತು ನಲ್ಲಿ ಮತ್ತೆ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ, ನನ್ನ ತಾಯಿಯ ವಜ್ರೇಶ್ವರಿ ಮತ್ತು ಪೂರ್ಣಿಮಾ  ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದು ಗಂಭೀರ ಪಾತ್ರ ನಿರ್ವಹಿಸುತ್ತಿದ್ದೇನೆ, ನನ್ನದೇ ಒಂದು ಪ್ರೊಡಕ್ಷನ್ ಹೌಸ್ ಇದೆ ನನ್ನ ಕಿರಿಯ ಪುತ್ರಿ ನಿವೇದಿತಾ ಅದನ್ನು ನೇಡಕೊಳ್ಳುತ್ತಾಳೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com