'ಅಮ್ಮ'ಗೆ ದಿಲೀಪ್ ಮತ್ತೆ ಪ್ರವೇಶ, ಸಂಘದಿಂದ ಹೊರಬಂದ ನಾಲ್ವರು ನಟಿಯರು

ಪುರುಷ ಪ್ರಾಬಲ್ಯ ಮತ್ತು ನಟಿಯರ ಮೇಲೆ ಕಿರುಕುಳದ ಅನೇಕ ಆರೋಪಗಳ ಮಧ್ಯೆ ಖ್ಯಾತ ನಟಿಯೊಬ್ಬರ ...
ವುಮೆನ್ ಇನ್ ಕಲೆಕ್ಟಿವ್ ಸದಸ್ಯರಾದ ಗೀತು ಮೋಹನ್ ದಾಸ್, ಪಾರ್ವತಿ ಮತ್ತು ರೀಮಾ ಕಲ್ಲಿಂಗಲ್
ವುಮೆನ್ ಇನ್ ಕಲೆಕ್ಟಿವ್ ಸದಸ್ಯರಾದ ಗೀತು ಮೋಹನ್ ದಾಸ್, ಪಾರ್ವತಿ ಮತ್ತು ರೀಮಾ ಕಲ್ಲಿಂಗಲ್

ತಿರುವನಂತಪುರಂ : ಪುರುಷ ಪ್ರಾಬಲ್ಯ ಮತ್ತು ನಟಿಯರ ಮೇಲೆ ಕಿರುಕುಳದ ಅನೇಕ ಆರೋಪಗಳ ಮಧ್ಯೆ ಖ್ಯಾತ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ನಟ ದಿಲೀಪ್ ಮತ್ತೆ ಮರಳಿ  ಮಲಯಾಳಂ ಚಲನಚಿತ್ರ ಕಲಾವಿದ ಸಂಘ 'ಅಮ್ಮ'ಗೆ ಮರಳಿದ ಹಿನ್ನಲೆಯಲ್ಲಿ ಇದೀಗ ಮೂವರು ನಟಿಯರು ಸಂಘವನ್ನು ತೊರೆದಿದ್ದಾರೆ.

ನಟ ದಿಲೀಪ್ ಹಾಗೂ ಅವರ 9 ಮಂದಿ ಸ್ನೇಹಿತರು ಸೇರಿ ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಬಂಧನಕ್ಕೊಳಪಟ್ಟಿದ್ದರು.  ನ್ಯಾಯಾಲಯದಿಂದ ಬಿಡುಗಡೆಯಾದ ನಂತರ ಅವರು ಮತ್ತೆ ಅಮ್ಮಾದ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ನಟಿಯರಾದ ರಿಮಾ ಕಾಳಿಂಗಲ್, ರೆಮ್ಯಾ ನಂಬೀಸನ್, ಗೀತು ಮೋಹನ್ ದಾಸ್ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ನಟಿಯೂ ಸಂಘದ ತಮ್ಮ ಸ್ಥಾನ ತೊರೆದಿದ್ದಾರೆ. ಆದರೆ ಪ್ರಕರಣದಲ್ಲಿ ನಟಿಗೆ ನ್ಯಾಯ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿಲೀಪ್ ಮಾಜಿ ಪತ್ನಿ ಮಂಜು ವಾರಿಯರ್ ಇನ್ನೂ ಕೂಡ ತಮ್ಮ ಸ್ಥಾನದಲ್ಲಿ ಮುಂದುವರಿದಿದ್ದಾರೆ. 

ಲೈಂಗಿಕ ದೌರ್ಜನ್ಯದ ಆರೋಪವನ್ನು ನಾನು ಪ್ರಸ್ತಾಪಿಸಿದ್ದಾಗ ನನಗೆ ಹಲವು ಅವಕಾಶಗಳನ್ನು ನಿರಾಕರಿಸಲಾಯಿತು. ಅಮ್ಮ ಸಂಘ ಆ ನಟನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಲೈಂಗಿಕ ದೌರ್ಜನ್ಯ ಪ್ರಕರಣ ನಡೆದ ಬಳಿಕವೂ ಅಮ್ಮಾ ಸಂಘದವರು ಆ ನಟನನ್ನು ರಕ್ಷಣೆ ಮಾಡಲು ಯತ್ನಿಸಿದರೇ ಹೊರತು ನಮಗೆ ನ್ಯಾಯ ಕೊಡಿಸಲಿಲ್ಲ. ಈ ಸಂಘದಲ್ಲಿ ಮುಂದುವರಿಯುವ ಯಾವುದೇ ಉದ್ದೇಶವಿಲ್ಲ ಎಂದು ನನಗನಿಸುತ್ತದೆ ಎಂದು ಅನ್ಯಾಯಕ್ಕೊಳಗಾದ ಕಲಾವಿದೆ ಹೇಳಿದ್ದಾರೆ.

ಅಮ್ಮಾ ಸಂಘದ ನಾಯಕರು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿದ್ದು ಅವರನ್ನು ಪ್ರಶ್ನೆ ಮಾಡದವರು ಮಾತ್ರ ಅವರಿಗೆ ಬೇಕಾಗಿದೆ ಎನಿಸುತ್ತದೆ. ಅಮ್ಮಾದಲ್ಲಿ ಮುಂದುವರಿಯುವ ಯಾವುದೇ ಅಂಶವಿಲ್ಲ. ನಮ್ಮ ಸ್ನೇಹಿತರ ಜೊತೆ ನಿಂತು ಅಮ್ಮಾ ಸಂಘದವರ ಬೇಜವಾಬ್ದಾರಿ ಕೆಲಸಗಳ ವಿರುದ್ಧ ಹೋರಾಡೋಣ ಎಂದು ಗೀತು ಹೇಳಿದರು.

ಇಂತಹ ಕೃತ್ಯ ಎಸಗಿದ್ದ ದಿಲೀಪ್ ರನ್ನು ವಾಪಸ್ ಕರೆಸಿಕೊಂಡ ಕಲಾವಿದರ ಸಂಘ ಅಮ್ಮಾ  ಯಾರ ಪರವಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಯಾವುದೇ ರಾಜಿ ಮಾಡಿಕೊಳ್ಳದೆ ಆತ್ಮ ಗೌರವ ಕಾಪಾಡಿಕೊಂಡು ಮುಂದಿನ ತಲೆಮಾರಿದ ಕಲಾವಿದರು ಶಕ್ತಿ ಹೊಂದಬೇಕು ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ರೆಮ್ಯಾ ನಂಬೀಸನ್ ಹೇಳಿದ್ದಾರೆ.

ಈ ಮಧ್ಯೆ ಕಲಾವಿದರ ಸಂಘದಿಂದ ಹೊರಬಂದವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಅಮ್ಮಾದ ಕಾರ್ಯದರ್ಶಿ ಇಡವೆಲ ಬಾಬು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com