ಅತ್ಯಂತ ವಿನಮ್ರತೆಯುಳ್ಳ ನಟ ರಜನೀಕಾಂತ್: ಹುಮಾ ಖುರೇಷಿ

ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಹು ನಿರೀಕ್ಷಿತ ಕಾಲಾ ಚಿತ್ರದ ಟೀಸರ್ ನಿನ್ನೆ ರಿಲೀಸ್ ಆಗಿದೆ, ಈ ಸಿನಿಮಾದಲ್ಲಿ ರಜನಿಗೆ ನಾಯಕಿಯಾಗಿ ಹುಮಾ ಖುರೇಷಿ ..
ರಜನಿಕಾಂತ್ ಮತ್ತು ಹುಮಾ ಖುರೇಷಿ
ರಜನಿಕಾಂತ್ ಮತ್ತು ಹುಮಾ ಖುರೇಷಿ
Updated on
ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಹು ನಿರೀಕ್ಷಿತ ಕಾಲಾ ಚಿತ್ರದ ಟೀಸರ್ ನಿನ್ನೆ ರಿಲೀಸ್ ಆಗಿದೆ, ಈ ಸಿನಿಮಾದಲ್ಲಿ ರಜನಿಗೆ ನಾಯಕಿಯಾಗಿ ಹುಮಾ ಖುರೇಷಿ ನಟಿಸಿದ್ದಾರೆ.
ಈ ಸಂದರ್ಭದಲ್ಲಿ ನಟಿ ಹುಮಾ ಖುರೇಷಿ ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಬಹಳ ಉತ್ಸಾಹದಿಂದ ರಜನಿ ಸರ್ ಜೊತೆ ಕೆಲಸ ಮಾಡಿದ್ದೇನೆ, ಎಂದು ಹೇಳಿರುವ ಅವರು, ಸ್ಯಾಂಡಲ್ ವುಡ್ ಸಿನಿಮಾಗಳಿಂದಲೂ ಆಫರ್ ಬಂದಿತ್ತು ಎಂಬುದಾಗಿ ಹೇಳಿದ್ದಾರೆ.
ಪ್ರತಿಯೊಬ್ಬ ನಟಿಗೂ ರಜನಿ ಸರ್ ಜೊತೆ ನಟಿಸಬೇಕೆಂಬ ಕನಸಿರುತ್ತದೆ, ಈ ವಿಷಯದಲಲ್ಲಿ ನಾನು ಗ್ರೇಟ್, ಅಂತ ಮಹಾನ್ ನಟನ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದೆ, ಇಂಥದ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ, ರಜನಿ ಸರ್ ಬಹಳ ವಿಧೇಯತೆಯುಳ್ಳ ವ್ಯಕ್ತಿ, ಅವರನ್ನು ನೋಡಿ ನಾನು ತುಂಬಾ ಕಲಿತೆ, ಅವರು ಜಂಟಲ್ ಮ್ಯಾನ್ ಎಂದು ಹಾಡಿ ಹೊಗಳಿದ್ದಾರೆ.
ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ನಟಿ ನಗರದ ಜೈನ್ ಕಾಲೇಜಿನ ವಿದ್ಯಾರ್ಥಿಗೊಂದಿಗೆ ಚರ್ಚೆಯಲ್ಲಿ  ಭಾಗವಹಿಸಿದ್ದರು, ಮಹಿಳಾ ಸಬಲೀಕರಣ, ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರು. 
ಮಹಿಳಾ ಸಬಲೀಕರಣ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯೆಕ್ಕೆ ಪ್ರತಿಯೊಂದು ವೇದಿಕೆಯು ಅತಿ ಅಮೂಲ್ಯ, ಜನ ಅವರ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲಾಗಿದ್ದಾರೆ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬದು ಪ್ರಜಾಪ್ರಭತ್ವ ಎಂಬ ಗೋಡೆಯ ಅಡಿಗಲ್ಲಾಗಿದೆ, ಇಂಥಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನನಗೆ ಖುಷಿಯಾಗಿದೆ ಎಂದು ಹೇಳಿದ್ದಾರೆ.
ಬಾಲಿವುಡ್ ನಟಿಯರಲ್ಲಿ ಹಲವರು ದಕ್ಷಿಣ ಭಾರತೀಯ ಸಿನಿಮಾಗಳಿಗೆ ಫಿಟ್ ಆಗಿದ್ದಾರೆ, ಅಂಥವರಲ್ಲಿ ಹುಮಾ ಖುರೇಷಿ ಕೂಡ ಒಬ್ಬರಾಗಿದ್ದಾರೆ,

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com