ರಾಜರಥದಲ್ಲಿ 'ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ' ಹಾಡು!

1983 ರಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾದಲ್ಲಿ ಕಮಲ ಹಾಸನ್ ಬಸ್ ಕಂಡಕ್ಚರ್ ಆಗಿ ನಟಿಸಿದ್ದ ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ ಹಾಡನ್ನು ರಾಜರಥ ಸಿನಿಮಾದಲ್ಲಿ ..
ರಾಜರಥ ಸಿನಿಮಾ ಸ್ಟಿಲ್
ರಾಜರಥ ಸಿನಿಮಾ ಸ್ಟಿಲ್
Updated on
ಬೆಂಗಳೂರು: ಅನುಪ್ ಭಂಡಾರಿ ನಿರ್ದೇಶನದ ರಾಜರಥ ದ್ವಿಭಾಷಾ ಚಿತ್ರ  ಇನ್ನೆರಡು ವಾರದಲ್ಲಿ ರಿಲೀಸ್ ಆಗಲಿದೆ. ಮಾರ್ಚ್ 23 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಆಡಿಯೋ ರಿಲೀಸ್ ಮಾಡಲಾಗಿದೆ.
1983 ರಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾದಲ್ಲಿ ಕಮಲ ಹಾಸನ್  ಬಸ್ ಕಂಡಕ್ಚರ್ ಆಗಿ ನಟಿಸಿದ್ದ ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ ಹಾಡನ್ನು ರಾಜರಥ ಸಿನಿಮಾದಲ್ಲಿ ಅಳವಡಿಸಲಾಗಿದೆ,
ಹಾಡನ್ನು  ರಿಕ್ರಿಯೇಷನ್ ಮಾಡಲಾಗಿದ್ದು, ಅನೂಪ್ ಭಂಡಾರಿ ಮತ್ತು ಆವಂತಿಕಾ ಶೆಟ್ಟಿ  ನಟಿಸಿದ್ದಾರೆ, ಅನೂಪ್ ಭಂಡಾರಿಯೇ ಈ ಹಾಡಿಗೆ ಹಿನ್ನೆಲೆ ಗಾಯನ ನೀಡಿದ್ದು, ನಟ ಯಶ್ ಮಾರ್ಚ್ 5 ರಂದು ಆಡಿಯೋ ಬಿಡುಗಡೆ ಮಾಡಲಿದ್ದಾರೆ.
ಈ ಹಾಡನ್ನು ಏಕೆ ಆರಿಸಿಕೊಂಡೆ ಎಂಬ ಬಗ್ಗೆ ಅನೂಪ್ ಭಂಡಾರಿ ಹೆಚ್ಚಿನ ಮಾಹಿತಿ ನೀಡಲಿಲ್ಲ, ಮೂಲ ಹಾಡನ್ನು ಬಸ್ ನಲ್ಲಿ ಚಿತ್ರೀಕರಿಸಲಾಗಿತ್ತು, ನಮ್ಮ ಸಿನಿಮಾ ರಾಜರಥ ಬಸ್ ಕುರಿತದ್ದಾಗಿದೆ,ಆದರೆ ಈ ಹಾಡನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳಲು ಬಹ ದೊಡ್ಡ ಕಾರಣವಿದೆ ಎಂದು ಹೇಳಿದ್ದಾರೆ,
ಈ ಹಾಡಿಗೆ ಜನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ, ಬಾಲಿವುಡ್ ನ ಜಗ್ಗಾ ಜಾಸೂಸ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ರಜತ್ ಪೊದಾರ್ ಈ ಸಿನಿಮಾಗೆ ವಿನ್ಯಾಸ ಮಾಡಿದ್ದಾರೆ,. ಕಲರ್ ಪುಲ್ ಡ್ರೆಸ್ ನೀತಾ ಶೆಟ್ಟಿ ಮಾಡಿದ್ದಾರೆ,
ರವಿಶಂಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಶೃತಿ ಹರಿಹರನ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com