ಆಸ್ಕರ್
ಸಿನಿಮಾ ಸುದ್ದಿ
ಆಸ್ಕರ್ 2018: ಟಾಪ್ ನಾಮನಿರ್ದೇಶಿತರಿಗೆ ಸಿಗುವ ಸ್ವ್ಯಾಗ್ ಬ್ಯಾಗ್ ಬಗ್ಗೆ ಗೊತ್ತಾ?
2018 ನೇ ಸಾಲಿನ ಆಸ್ಕರ್ ಪ್ರಶಸ್ತಿಗಳಿಗೆ ವೇದಿಕೆ ಸಜ್ಜುಗೊಂಡಿದ್ದು, ಸೆಲೆಬ್ರಿಟಿಗಳು ಭಾಷಣದ ಪ್ರತಿಗಳನ್ನು ಸಿದ್ಧಪಡಿಸಿಕೊಂಡು ಕಾರ್ಯಕ್ರಮವನ್ನು ಎದುರುನೋಡುತ್ತಿದ್ದಾರೆ.
ನವದೆಹಲಿ: 2018 ನೇ ಸಾಲಿನ ಆಸ್ಕರ್ ಪ್ರಶಸ್ತಿಗಳಿಗೆ ವೇದಿಕೆ ಸಜ್ಜುಗೊಂಡಿದ್ದು, ಸೆಲೆಬ್ರಿಟಿಗಳು ಭಾಷಣದ ಪ್ರತಿಗಳನ್ನು ಸಿದ್ಧಪಡಿಸಿಕೊಂಡು ಕಾರ್ಯಕ್ರಮವನ್ನು ಎದುರುನೋಡುತ್ತಿದ್ದಾರೆ.
ನಾಮನಿರ್ದೇಶನಗೊಂಡವರಲ್ಲಿ ಕೆಲವರಿಗೆ ಪ್ರಶಸ್ತಿ ಸಿಕ್ಕರೆ, ಮತ್ತೆ ಕೆಲವರಿಗೆ ಸ್ವ್ಯಾಗ್ ಬ್ಯಾಗ್ ಸಿಗುತ್ತದೆ. ಸ್ವ್ಯಾಗ್ ಬ್ಯಾಗ್ ಕಾನ್ಸೆಪ್ಟ್ ನ್ನು 16 ವರ್ಷಗಳ ಹಿಂದೆ ಆಸ್ಕರ್ ಸಂಸ್ಥೆಗೆ ಹೊರತಾದ ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯೊಂದು ಪರಿಚಯಿಸಿತ್ತು. ಅಂದಿನಿಂದ ಈ ವರೆಗೆ ಟಾಪ್ 5 ರಲ್ಲಿ ನಾಮನಿರ್ದೇಶನಗೊಂಡ ಎಲ್ಲಾ ನಟ/ನಟಿಯರಿಗೂ ಸ್ವ್ಯಾಗ್ ಬ್ಯಾಗ್ ನೀಡಲಾಗುತ್ತಿದೆ.
ಈ ವರ್ಷದ ಸ್ವ್ಯಾಗ್ ಬ್ಯಾಗ್ ಹಿಂದೆಂದಿಗಿಂತಲೂ ಆಕರ್ಷಕವಾಗಿದ್ದು, 12 ದಿನಗಳ ಟಾಂಜಾನಿಯಾ ಪ್ರವಾಸ, ವಜ್ರದ ಹಾರ, ಬ್ಲೂಟೂತ್ ಸ್ಪೀಕರ್ ಸೇರಿದಂತೆ ಹಲವು ಉಡುಗೊರೆಗಳನ್ನು ಹೊಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ