ನನಗಾಗಿ ಯುವ ಪಾತ್ರಗಳನ್ನು ರೂಪಿಸುತ್ತಿರುವ ಯುವ ನಿರ್ದೇಶಕರುಗಳಿಗೆ ನಾನು ಆಭಾರಿ: ರವಿಶಂಕರ್

ಸಿನಿಮಾ ವಿಷಯಕ್ಕೆ ಬಂದರೆ ನಟ ರವಿಶಂಕರ್ ಅವರ ಪ್ರತಿಭೆ ಎಲ್ಲೆ ಮೀರಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ವಿಲ್ಲನ್ ...
ರವಿಶಂಕರ್
ರವಿಶಂಕರ್
ಬೆಂಗಳೂರು: ಸಿನಿಮಾ ವಿಷಯಕ್ಕೆ ಬಂದರೆ ನಟ ರವಿಶಂಕರ್ ಅವರ ಪ್ರತಿಭೆ ಎಲ್ಲೆ ಮೀರಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ವಿಲ್ಲನ್ ಪಾತ್ರದಲ್ಲಿ ನಟಿಸಿದ್ದರೂ ಅವರ ನಟನೆ ಅಷ್ಟಕ್ಕೆ ಸೀಮಿತವಾಗಿಲ್ಲ, ವೈವಿಧ್ಯಮಯ ಪಾತ್ರಗಳಲ್ಲಿ ರವಿಶಂಕರ್ ನಟಿಸಿದ್ದಾರೆ.
ಅನೂಪ್ ಭಂಡಾರಿ ನಿರ್ದೇಶನದ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬರುತ್ತಿರುವ ರಾಜರಥ ಸಿನಿಮಾದಲ್ಲಿ ರವಿಶಂಕರ್ ತೀರಾ ವಿಭಿನ್ನವಾದ ಪಾತ್ರದಲ್ಲಿ ನಟಿಸಿದ್ದಾರೆ. ಬಸ್ ಪ್ರಯಾಣದ ಕಥೆಯಾಗಿರುವ ಈ ಸಿನಿಮಾದಲ್ಲಿ ರವಿಶಂಕರ್ ಟಿಕೆಟ್ ಇನ್ಸ್ ಪೆಕ್ಟರ್  ಪಾತ್ರದಲ್ಲಿ ಅಭಿನಯಿಸಿದ್ದಾರೆ.  ತಮ್ಮ ವಿಲ್ಲನ್  ಪಾತ್ರಗಳನ್ನು ಬದಿಗೊತ್ತಿರುವ ರವಿಶಂಕರ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜರಥ ಸಿನಿಮಾದ ಈ ಪ್ರಯಾಣದ ಕಥೆಯಲ್ಲಿ ನಾನು ಒಬ್ಬ ಪ್ರಯಾಣಿಕ, ಅನೂಪ್ ಭಂಡಾರಿ ನನ್ನ ಪಾತ್ರವನ್ನು ವಿಶೇಷವಾಗಿ ರೂಪಿಸಿದ್ದಾರೆ, ವಿಭಿನ್ನ ಗೆಟಪ್ ರವಿಶಂಕರ್ ಅವರದ್ದು, ತಲೆಗೆ ವಿಗ್, ಕಣ್ಣಿಗೆ ಕನ್ನಡಕ, ಚೆಕ್ಸ್ ಇರುವ ಕೋಟು ಧರಿಸಿ ಯುವಕನಂತೆ ಕಾಣುತ್ತಾರೆ. 
ಈ ಸಿನಿಮಾದ ಹಾಡಿಗೆ ರವಿಶಂಕರ್ ಹಿನ್ನೆಲೆಗಾಯನ ನೀಡಿದ್ದಾರೆ, ಗಂಡಕ ಭಂಡಕ ಎನ್ನವ ಹಾಡಿಗೆ ಅನೂಪ್ ಸಾಹಿತ್ಯ ಬರೆದಿದ್ದಾರೆ. ರಾಜರಥ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಕುರುಕ್ಷೇತ್ರ ಡಬ್ಬಿಂಗ್ ನಲ್ಲಿ ಪಾಲ್ಗೋಳ್ಳಲಿದ್ದಾರೆ, ಜೊತೆಗೆ ದರ್ಶನ್ ಅಭಿನಯದ ಯಜಮಾನ, ಪುನೀತ್ ನಟನೆಯ ನಟ ಸಾರ್ವಭೌಮ ಹಾಗೂ ಸುದೀಪ್ ಅಭಿನಯದ ಕೋಟಿಗೊಬ್ಬ-3, ದೃವಸರ್ಜಾ ಮುಂದಿನ ಸಿನಿಮಾ ಪೊಗರುವಿನಲ್ಲೂ ಕೂಡ ರವಿಶಂಕರ್ ನಟಿಸಿದ್ದಾರೆ.
ಹೊಸ ನಟರು ಹಾಗೂ ಸ್ಟಾರ್ ನಟರುಗಳ ಜೊತೆ ನಟಿಸಿದ್ದೇನೆ, ಇವರುಗಳ ಜೊತೆ ಕೆಲಸ ಮಾಡಲು ಅವಕಾಶ ನೀಡಿದ ನಿರ್ದೇಶಕರುಗಳಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com