ವಿಭಿನ್ನ ಪರಿಕಲ್ಪನೆಯ ಕನ್ನಡದ ವೆಬ್ ಸರಣಿ ಜೋಶೆಲೆ

ದೃಷ್ಟಿ ದೋಷವುಳ್ಳ ವ್ಯಕ್ತಿ ಹೇಗೆ ಆಲೋಚಿಸುತ್ತಾನೆ ಅಥವಾ ಕನಸು ಕಾಣುತ್ತಾನೆ? ಇದಕ್ಕೆ ನಟ ವಿನಾಯಕ್ ...
ವೆಬ್ ಸರಣಿಯಲ್ಲಿ ವಿನಾಯಕ್ ಜೋಷಿ
ವೆಬ್ ಸರಣಿಯಲ್ಲಿ ವಿನಾಯಕ್ ಜೋಷಿ

ದೃಷ್ಟಿ ದೋಷವುಳ್ಳ ವ್ಯಕ್ತಿ ಹೇಗೆ ಆಲೋಚಿಸುತ್ತಾನೆ ಅಥವಾ ಕನಸು ಕಾಣುತ್ತಾನೆ? ಇದಕ್ಕೆ ನಟ ವಿನಾಯಕ್ ಜೋಷಿ ಉತ್ತರ ಕಂಡುಕೊಂಡಿದ್ದಾರೆ. ಹೀಗೊಂದು ವೆಬ್ ಸರಣಿಯ ನ್ನು ಕನ್ನಡದಲ್ಲಿ ತಯಾರಿಸಿದ್ದಾರೆ.ಅದರ ಹೆಸರು ಜೋಶೆಲೆ.

ನಟನಾಗಿ ನಂತರ ರೇಡಿಯೊ ಜಾಕಿಯಾದ ವಿನಾಯಕ್ ಜೋಷಿ 50 ದಿನಗಳಲ್ಲಿ 500 ಕಿಲೋ ಮೀಟರ್ ಸಂಚರಿಸಿ 20 ಜನರ ಕಥೆಗಳನ್ನು ವಿವರಿಸುತ್ತಾರೆ. ಅವರು ಶಾರೀರಿಕ ಮತ್ತು ಮಾನಸಿಕ ವಿಶೇಷಚೇತನರು. ವೆಬ್ ಸರಣಿಯಲ್ಲಿ 7 ಅಧ್ಯಾಯಗಳಿದ್ದು ಪ್ರತಿಯೊಂದು 10 ನಿಮಿಷಗಳ ಅವಧಿಯಿರುತ್ತದೆ. ದೇಶಾದ್ಯಂತ ಚಿತ್ರಿಸಲಾಗಿದೆ. ಈ ವೆಬ್ ಸರಣಿಯಲ್ಲಿ ವಿನಾಯಕ್ ಜೋಷಿ ನಟಿಸುವುದರ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಕೂಡ ಹೊತ್ತಿದ್ದಾರೆ.

ಪರಿಕಲ್ಪನೆಯಲ್ಲಿ ವೆಬ್ ಸರಣಿಯನ್ನು ಹೊಂದಿರುವ ಜೋಶೆಲೆಯ ವಿಷಯ ಪ್ರಯಾಣಕ್ಕೆ ಸಂಬಂಧಿಸಿದ್ದು. ಅದು ಸ್ವ ಪ್ರಯಾಣ. ನಾವು ಇರುವುದಕ್ಕಿಂತ ಉತ್ತಮವಾಗಿರಬೇಕೆಂದು ಜೀವನದಲ್ಲಿ ಅದಮ್ಯ ಬಯಕೆಯಿಂದ ಜೀವಿಸುತ್ತಿರುತ್ತೇವೆ. ಇಲ್ಲಿ ವ್ಯಕ್ತಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದು ಆತನ ಪಯಣವನ್ನು ಒಳಗೊಂಡಿರುತ್ತದೆ. ಇಲ್ಲಿ 20 ಜನರು ಆತನಿಗೆ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಲು ಹೇಗೆ ಸಹಾಯ ಮಾಡುತ್ತಾರೆ ಎಂಬ ಕಥೆಯನ್ನು ಒಳಗೊಂಡಿದೆ. ಇಲ್ಲಿ ನಾನು 20 ಮಾನಸಿಕ ಮತ್ತು ಶಾರೀರಿಕ ವಿಕಲಾಂಗರ ಜೊತೆ ಕೆಲಸ ಮಾಡಿದ್ದೇನೆ. ಅವರು ಹೇಗೆ ನಮ್ಮ ಜೀವನಕ್ಕೆ ಸಹಾಯ ಮಾಡುತ್ತಾರೆ ಎಂಬುದನ್ನು ಕಲಿತಿದ್ದೇನೆ. ನಿಮ್ಮ ಜೀವನದಲ್ಲಿನ ಸಮಸ್ಯೆಗಳಿಗೆ ಜೋಶೆಲೆ ಪರಿಹಾರ ನೀಡುವುದಿಲ್ಲ ಆದರೆ ನಿಮ್ಮನ್ನು ಸರಿಯಾದ ಪ್ರಶ್ನೆಗಳನ್ನು ಕೇಳಲು ಬಿಡುತ್ತದೆ ಎನ್ನುತ್ತಾರೆ ವಿನಾಯಕ್ ಜೋಷಿ.

ಇದು ಮುಂದಿನ ತಿಂಗಳ ಮೊದಲ ವಾರದಿಂದ ಸರಣಿಯಾಗಿ ಜೂನ್ ವರೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. 50ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com