’ಗುಲ್ಟೂ’ ಒಂದು ಅಪರಾಧ ಮತ್ತು ಗೌಪ್ಯತೆಯ ಕಥೆ: ಜನಾರ್ಧನ್ ಚಿಕ್ಕಣ್ಣ

ಸ್ಯಾಂಡಲ್ ವುಡ್ ನ ಹೊಸ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಮುಂದಿನ ವಾರ ಬಿಡುಗಡೆಯಾಗಲಿರುವ ತಮ್ಮ ಚಿತ್ರ ’ಗುಲ್ಟೂ’ ಚಿತ್ರಕ್ಕಾಗಿ ಸೌಂಡ್ ಮಿಕ್ಸಿಂಗ್ ನಲ್ಲಿ ತೊಡಗಿದ್ದಾರೆ.
’ಗುಲ್ಟೂ’ ಒಂದು ಅಪರಾಧ ಮತ್ತು ಗೌಪ್ಯತೆಯ ಕಥೆ: ಜನಾರ್ಧನ್ ಚಿಕ್ಕಣ್ಣ
’ಗುಲ್ಟೂ’ ಒಂದು ಅಪರಾಧ ಮತ್ತು ಗೌಪ್ಯತೆಯ ಕಥೆ: ಜನಾರ್ಧನ್ ಚಿಕ್ಕಣ್ಣ
ಬೆಂಗಳೂರು: ಸ್ಯಾಂಡಲ್ ವುಡ್ ನ ಹೊಸ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಮುಂದಿನ ವಾರ ಬಿಡುಗಡೆಯಾಗಲಿರುವ ತಮ್ಮ ಚಿತ್ರ ’ಗುಲ್ಟೂ’ ಚಿತ್ರಕ್ಕಾಗಿ ಸೌಂಡ್ ಮಿಕ್ಸಿಂಗ್ ನಲ್ಲಿ ತೊಡಗಿದ್ದಾರೆ. "ನಾನು ಈ ದಿನ ಹನ್ನೊಂದು ಗಂಟೆಗಳ ಕಾಲ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಭಾರ್ತಈಯರ ಮನಸ್ಥಿತಿಯೆಂದರೆ ಅಂತಿಮ ಗಡುವು ಮುಗಿಯುವವರೆಗೂ ಎಲ್ಲರೂ ವಿಶ್ರಾಂತಿ ಪಡೆಯುತ್ತಿರುತ್ತಾರೆ" ಎಂದು ತಮ್ಮ ನೂತನ ಚಿತ್ರ ’ಗುಲ್ಟೂ ’ ಚಿಕ್ಕಣ್ಣ ಮಾತಿಗೆ ಪ್ರಾರಂಭಿಸಿದರು. ತಮ್ಮ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರ ’ಗುಲ್ಟೂ’ ಟೀಸರ್ ಹಾಗೂ ಟ್ರೇಲರ್ ಇದಾಗಲೇ ಬಿಡುಗಡೆಯಾಗಿದೆ, ಸಾಕಷ್ಟು ಕುತೂಹಲ ಹುಟ್ಟಿಸಿದೆ.
ಚಿತ್ರದ ಹೆಸರಿನ ಹಿಂದಿರುವ ಉದ್ದೇಶವನ್ನು ಚಿತ್ರ ಬಿಡುಗಡೆಗೆ ಎರಡು ದಿನಗಳ ಮುನ್ನ ತೆರೆದಿಡುತ್ತೇನೆ ಎನ್ನುವ ಚಿಕ್ಕಣ್ಣ ಚಿತ್ರದ ಕಥೆಯ ಬಗೆಗೆ ಹೇಳುತ್ತಾ ಚಿತ್ರದಲ್ಲಿ ಗೂಢಲಿಪಿ, ಕೋಡಿಂಗ್ ಬಗೆಗೆ ಸಾಕಷ್ಟು ತೋರಿಸಲಾಗಿದೆ. ಆನ್ ಲೈನ್ ಜಗತ್ತಿನಲ್ಲಿ ಗೂಢಲಿಪಿ, ಹ್ಯಾಕಿಂಗ್ ಮತ್ತು ಅಸಂಕೇತಿಕರಣ(ಡಿಕ್ರಿಪ್ಷನ್) ಆನ್ ಲೈನ್ ಜಗತ್ತಿನಲ್ಲಿ ಪ್ರಮುಖ ಕೀ ವರ್ಡ್ ಗಳಾಗಿದೆ.ಚಿತ್ರದ ಮೊದಲ ಅರ್ಧ ಹಾಗೂ ಕ್ಲೈಮ್ಯಾಕ್ಸ್ ನಲ್ಲಿ ಇದನ್ನು ಅತ್ಯಂತ ಸಮರ್ಪಕವಾಗಿ ತೋರಿಸಲಾಗಿದೆ.’ಗುಲ್ಟೂ’ ಶೀರ್ಷಿಕೆಯ ಅರ್ಥವನ್ನು  ನಾನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.
ಇನ್ಫಾರ್ಮೇಷನ್ ಸೈನ್ಸ್ ಪದವೀಧರರಾದ ನಿರ್ದೇಶಕ ಚಿಕ್ಕಣ್ಣ ಅವರ ಮೊದಲ ಚಿತ್ರೆದ ಮೇಲೆ ಅವರ ಅದ್ಯಯನ ವಿಚಾರಗಳು ಹೆಚ್ಚು ಪ್ರಭಾವ ಬೀರಿದೆ ಎನ್ನಲಾಗುತ್ತಿದೆ.
"ಇಂತಹಾ ವಿಚಾರವನ್ನು ಕನ್ನಡ ಚಿತ್ರಗಳ ಇತಿಹಾಸದಲ್ಲಿ ಯಾರೂ ಎತ್ತಿಕೊಂಡಿಲ್ಲ, ಇದೊಂಡು ಹೊಸ ವಿಚಾರವಾಗಿದ್ದು ಣಾನಿದನ್ನು ಪ್ರಯೋಗಾತ್ಮವಾಗಿ ತೆಗೆದುಕೊಂಡಿದ್ದೇನೆ. ಈ ಚಿತ್ರದ ಕಥೆ ನಮ್ಮ ಪ್ರಸ್ತುತ ಕಾಲಕ್ಕೆ ಅತ್ಯಂತ ಸೂಕ್ತವಾಗಿದೆ. ಇದೊಂದು ರೋಮಾಂಚಕ ಕಥೆ ಹೊಂದಿರುವ ಚಿತ್ರ,  ಒಂದು ಅನನ್ಯ ಅಪರಾಧದ ಬಗ್ಗೆ ವ್ಯವಹರಿಸುತ್ತದೆ. ನಾವು ಚಿತ್ರಗಳಲ್ಲಿ ಸಾಮಾನ್ಯವಾಗಿ ತೋರಿಸುವಂತೆ ಕೊಲೆಯ ಕಥೆಯನ್ನು ತೋರಿಸುತ್ತಿಲ್ಲ. ತ್ತು ಡಿಜಿಟಲ್ ಅಪರಾಧವು ಈ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿದೆ ....ಇಂತಹಾ ದಿನಗಳಲ್ಲಿ ನಮ್ಮ ವೈಯಕ್ತಿಕ ಗೌಪ್ಯತೆ ಮತ್ತು ಹಾಗೂ ದುರ್ಬಲತೆಯನ್ನು ಈ ಡಿಜಿಟಲ್ ಲೋಕ ಹೇಗೆಲ್ಲಾ ಬಳಸಿಕೊಳ್ಳುತ್ತದೀನ್ನುವುದು ನಾವು ಕಾಣುವುದು ಒಳಿತು" ಅವರು ಹೇಳಿದರು.
ಚಿತ್ರದ ಕೆಲ ಪೋಸ್ಟರ್ ಗಳೊಡನೆ ಮಾತಿಗಿಳಿದ ನಿರ್ದೇಶಕರು ಈ ಚಿತ್ರಗಳಲ್ಲಿ ಪ್ರತಿ ನಟನಿಗೆ ರೌಂಡ್ ಫ್ರೇಮ್ ಗಳಿರುವ ಕನ್ನಡಕ ಹಾಕಲಾಗಿದೆ, ಇದು ಅತ್ಯಂತ ಮುಖ್ಯ ವಿಚಾರ. ಎಂದಿಅರು. ನವೀನ್ ಶಂಕರ್ ನಾಯಕ ನಟರಾಗಿ ನಟಿಸಿರುವ ಈ ಚಿತ್ರಕ್ಕೆ ಸೋನು ಗೌಡ, ಧನು ಆಯ್ಕೆಯಾಗಿದ್ದಾರೆ. ಜತೆಗೆ ಹಿರಿಯ ನಟರಾದ ರಂಗಾಯಣ ರಘು ಮತ್ತು ಪವನ್ ಕುಮಾರ್ ಅವರ ಅಭಿನಯವಿದೆ. ನಮ್ಮ ಆಯ್ಕೆ ಉತ್ತಮವಾಗಿದ್ದು ಚಿತ್ರ ಅತ್ಯುತ್ತಮವಾಗಿ ಮೂಡಿಬರಲು ಇದು ಸಹಕರಿಸುತ್ತದೆ ಎಂದು ನಿರ್ದೇಶಕರು ಭರವಸೆ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com