ಪ್ರತಿಯೊಬ್ಬರ ಜೀವನದಲ್ಲಿ ಬೊಂಬೆಯಾಟ ನಡೆಯುತ್ತದೆ: ರಾಜು ವೈವಿಧ್ಯ

ಮೈಸೂರು ಮೂಲದ ರಾಜು ವೈವಿಧ್ಯ ನಿರ್ದೇಶಿಸಿರುವ 16 ನಿಮಿಷಗಳ ಬೊಂಬೆಯಾಟ ಸಿನಿಮಾ ...
ಕಿರುಚಿತ್ರದ ಪೋಸ್ಟರ್ ನ್ನು ಬಿಡುಗಡೆ ಮಾಡಿದ ಚಿತ್ರತಂಡ
ಕಿರುಚಿತ್ರದ ಪೋಸ್ಟರ್ ನ್ನು ಬಿಡುಗಡೆ ಮಾಡಿದ ಚಿತ್ರತಂಡ

ಬೆಂಗಳೂರು: ಮೈಸೂರು ಮೂಲದ ರಾಜು ವೈವಿಧ್ಯ ನಿರ್ದೇಶಿಸಿರುವ 16 ನಿಮಿಷಗಳ ಬೊಂಬೆಯಾಟ ಸಿನಿಮಾ ಆಧುನಿಕ ತಂತ್ರಜ್ಞಾನ ನಿತ್ಯ ಜನಜೀವನವನ್ನು ಹೇಗೆ ನಾಶ ಮಾಡುತ್ತದೆ ಎಂಬುದನ್ನು ಹೇಳುತ್ತದೆ. ಗ್ಯಾಜೆಟ್, ಮೊಬೈಲ್ ಇತ್ಯಾದಿ ಭೌತಿಕ ವಸ್ತುಗಳಲ್ಲಿ ಮುಳುಗಿ ಹೋಗುವ ಜನರು ತಮ್ಮ ಕುಟುಂಬ ಸದಸ್ಯರಿಗೆ ಸಾಕಷ್ಟು ಸಮಯವನ್ನು ನೀಡುವುದಿಲ್ಲ. ಇಂದು ಐಟಿ/ಬಿಟಿಗಳಲ್ಲಿ ಕೆಲಸ ಮಾಡುವ ದಂಪತಿ ಪರಸ್ಪರ ಅರ್ಥ ಮಾಡಿಕೊಂಡು, ಹೊಂದಾಣಿಕೆಯಿಂದ ಸಾಮರಸ್ಯದಿಂದ ಬದುಕುವಲ್ಲಿ ವಿಫಲರಾಗುತ್ತಿದ್ದಾರೆ ಎಂಬುದು ಸಿನಿಮಾದ ಕಥೆಯ ಎಳೆಯಾಗಿದೆ.

ಒಬ್ಬ ವ್ಯಕ್ತಿ ಹಣ, ಕೀರ್ತಿ, ಹೆಸರಿನ ಹಿಂದೆ ಹಪಹಪಿಸಿ ಓಡುತ್ತಾ ಜೀವನದಲ್ಲಿ ಸಣ್ಣಪುಟ್ಟ ಸಂತೋಷಗಳನ್ನು ಕಳೆದುಕೊಳ್ಳುತ್ತಾನೆ ಎಂದು ವಿವರಿಸಲಾಗಿದೆ. ಭೌತಿಕ ವಸ್ತುಗಳ ಮೇಲಿನ ವ್ಯಾಮೋಹ ದಂಪತಿಯ ಮುಂದಿನ ಜೀವನಕ್ಕೆ ಮತ್ತು ಅವರ ಮಕ್ಕಳ ಭವಿಷ್ಯಕ್ಕೆ ಹೇಗೆ ಮಾರಕವಾಗಿದೆ ಎಂದು ತೋರಿಸಲಾಗಿದೆ. ಕುಟುಂಬ ಸದಸ್ಯರಿಗೆ ಸಮಯ ನೀಡಿ ಪರಸ್ಪರ ಗೌರವದಿಂದ ಇರಬೇಕು ಮತ್ತು ಸಂಬಂಧಗಳಿಗೆ ಬೆಲೆ ನೀಡಬೇಕೆಂಬುದನ್ನು ಅಂತಿಮ ಸಂದೇಶ ನೀಡಲಾಗಿದೆ.

ಈ ಬಗ್ಗೆ ಮಾತನಾಡುವ ರಾಜು ವೈವಿಧ್ಯ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಾ ಹಲವು ದುರಂತ ಕಥೆಗಳನ್ನು ಬರೆದಿದ್ದೇನೆ. ರಂಗಭೂಮಿ ಕಲಾವಿದನಾಗಿ ನಾನು ಹಲವು ವಯಸ್ಕರು ಮತ್ತು ಮಕ್ಕಳ ಜೊತೆ ಕಳೆದಿದ್ದೇನೆ. ಅವರ ಸಮಸ್ಯೆಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ಇವೆಲ್ಲದರ ರೂಪವಾಗಿಯೇ ಬೊಂಬೆಯಾಟ ಸಿನಿಮಾ ಮಾಡಿದೆ ಎನ್ನುತ್ತಾರೆ.
ಇದಕ್ಕೆ ಮುನ್ನ ರಾಜು ವಾರಿ ಮತ್ತು ಒಂದು ಸಾವಿನ ಸುತ್ತ ಕಿರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಸಿನಿಮಾವನ್ನು ಮಾಡುವುದು ಅವರಿಗೆ ಸವಾಲಾಗಿತ್ತಂತೆ. ಎಲ್ಲಾ ನಟರು ಹೊಸಬರಾಗಿದ್ದರು ಮತ್ತು ಹಣ ಕಡಿಮೆಯಿತ್ತು. ಆದರೂ ಇರುವ ಹಣದಲ್ಲಿ ಉತ್ತಮವಾಗ ಕಥೆ ತಯಾರಿಸಲು ನಿರ್ಧರಿಸಿದ್ದೆವು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ.




ಈ ಚಿತ್ರದ ನಿರ್ಮಾಪಕಿ ಸಿ,ರತ್ನಾ. ಸತ್ಯ ರಾಮಕೃಷ್ಣ ಅವರ ಸಂಗೀತವಿದೆ. ಯೂಟ್ಯೂಬ್ ನಲ್ಲಿ ಕಳೆದ ತಿಂಗಳು ಇದನ್ನು ಅಪ್ ಲೋಡ್ ಮಾಡಲಾಗಿದೆ. ಉತ್ತಮ ಪ್ರತಿಕ್ರಿಯೆ ಪ್ರೇಕ್ಷಕರಿಂದ ಸಿಗುತ್ತಿದೆ. ಏಪ್ರಿಲ್ ನಲ್ಲಿ ಬೆಂಗಳೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ಕಿರುಚಿತ್ರವನ್ನು ಬಿಡುಗಡೆಮಾಡುವ ಯೋಜನೆಯಲ್ಲಿ ಚಿತ್ರತಂಡವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com