ನಿಘಂಟುಗಳಲ್ಲಿ ಹುಡುಕಿದರೂ ಸಿಗದ ಪದ 'ಗುಲ್ಟೂ': ನವೀನ್ ಶಂಕರ್

ಗುಲ್ಟೂ ಮೂಲಕ ಸ್ಯಾಂಡಲ್ ವುಡ್ ನಲ್ಲಿ ವೃತ್ತಿ ಆರಂಭಿಸಿರುವ ನವೀನ್ ಶಂಕರ್ ಚಿತ್ರಕ್ಕೆ ಜನಾರ್ದನ್ ಚಿಕ್ಕಣ್ಣ ...
ಗುಲ್ಟು ಚಿತ್ರದ ದೃಶ್ಯ
ಗುಲ್ಟು ಚಿತ್ರದ ದೃಶ್ಯ
Updated on

ಗುಲ್ಟೂ ಮೂಲಕ ಸ್ಯಾಂಡಲ್ ವುಡ್ ನಲ್ಲಿ ವೃತ್ತಿ ಆರಂಭಿಸಿರುವ ನವೀನ್ ಶಂಕರ್ ಚಿತ್ರಕ್ಕೆ ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಕಮರ್ಷಿಯಲ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಟರು ಪಾದಾರ್ಪಣೆ ಮಾಡಲು ಯತ್ನಿಸಿದರೆ ಇಲ್ಲಿ ನವೀನ್ ಶಂಕರ್ ರಂಗಭೂಮಿ ಹಿನ್ನೆಲೆಯಿಂದ ಬಂದವರಾಗಿದ್ದು ವಿಷಯಾಧಾರಿತ ಕಥೆಯನ್ನು ಆರಿಸಿಕೊಂಡಿದ್ದಾರೆ.

ಅದೃಷ್ಟಕ್ಕೆ ಚಿತ್ರ ಬಿಡುಗಡೆಗೆ ಮುನ್ನವೇ ನವೀನ್ ಶಂಕರ್ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಚಿತ್ರಕ್ಕೆ ಟ್ರೈಲರ್, ಟೀಸರ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಲ್ಲದೆ ಜನರಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಉತ್ತಮ ಕಥೆ, ವಿಷಯ ಮತ್ತು ಗಟ್ಟಿ ಪಾತ್ರಗಳನ್ನು ಹೊಂದಿರುವ ಚಿತ್ರವಾಗಿರುವ ಗುಲ್ಟೂ ಹೊಸಬರಿಗೆ ಅತ್ಯುತ್ತಮವಾಗಿದೆ. ಚಿತ್ರಕ್ಕೆ ಗುಲ್ಟೂ ಎಂದು ಏಕೆ ಹೆಸರಿಡಲಾಗಿದೆ ಎದರ ಅರ್ಥವೇನು ಎಂದು ಕೇಳಿದರೆ, ಅದು ನಿಘಂಟಿನಲ್ಲಿರುವ ಪದವಲ್ಲ. ಆದರೂ ಅದೇ ಹೆಸರನ್ನು ಆರಿಸಲು ಕೆಲವು ಕಾರಣಗಳಿವೆ. ಹೆಸರು ಗಮನ ಸೆಳೆಯುತ್ತಿದ್ದು, ಇದು ಚಿತ್ರಕ್ಕೆ ಅರ್ಥ ಕೊಡುತ್ತದೆ ಮತ್ತು ಹಲವು ಸನ್ನಿವೇಶಗಳಿಗೆ ತೂಕ ನೀಡುತ್ತದೆ. ಒಂದು ವಾಕ್ಯದಲ್ಲಿ ಗುಲ್ಟುವನ್ನು ವಿವರಿಸಲು ಸಾಧ್ಯವಿಲ್ಲ. ಇದು ತುಂಬಾ ಮುಖ್ಯವಾದ ಅಂಶವಾಗಿದ್ದು ಅದರ ಅರ್ಥ ತಿಳಿಯಲು ಅನುಭವಿಸಬೇಕು ಎನ್ನುತ್ತಾರೆ ನವೀನ್ ಶಂಕರ್.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವಾಗ ಗುಲ್ಟು ಸಿನಿಮಾ ಸರಿಯಾದ ಸಮಯಕ್ಕೆ ಬರುತ್ತಿದೆ ಎಂದು ಭಾವಿಸುತ್ತೇನೆ. ಇಲ್ಲಿ ಆತ್ಮವಿಶ್ವಾಸದ ವ್ಯಕ್ತಿಯಾಗಿ ಅಭಿನಯಿಸಿದ್ದೇನೆ. ಇದರಲ್ಲಿ ನಾನು ಯಾವ ಪಾತ್ರ ಮಾಡಿದ್ದೇನೆ ಎಂಬುದು ಸಸ್ಪೆನ್ಸ್ ಆಗಿಟ್ಟು ಚಿತ್ರ ನೋಡಿದ ಮೇಲೆ ತಿಳಿಯಲಿ.

ಬಾಗಲಕೋಟೆಯ ಇಳಕಲ್ ನವರಾದ ನವೀನ್ ಶಂಕರ್ ಗೆ ನಟನಾಗಬೇಕೆಂಬುದು ಬಾಲ್ಯದ ಕನಸಾಗಿತ್ತು. ಈ ಚಿತ್ರ ಮುಗಿದ ನಂತರ ಗ್ರಾಮಾಯಣ ಎಂಬ ಇನ್ನೊಂದು ಸಿನಿಮಾದಲ್ಲಿ ಅವರು ಅಭಿನಯಿಸಲಿದ್ದಾರೆ.



ನವೀನ್ ಶಂಕರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com