ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ

ಗ್ಲಾಮರಸ್ ನಲ್ಲಿ ಪಾತ್ರಗಳಿರುವುದಿಲ್ಲ ಎಂಬುದು ನಿಜವಲ್ಲ: ರಾಗಿಣಿ ದ್ವಿವೇದಿ

ರಾಗಿಣಿ ದ್ವಿವೇದಿ ಅವರ ಕಿಚ್ಚು ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದು ಈ ಸಂದರ್ಭದಲ್ಲಿ ಅವರು ಸಿಟಿ ಎಕ್ಸ್ ಪ್ರೆಸ್ ಜೊತೆ ...

ರಾಗಿಣಿ ದ್ವಿವೇದಿ ಅವರ ಕಿಚ್ಚು ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದು ಈ ಸಂದರ್ಭದಲ್ಲಿ ಅವರು ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಪಾತ್ರ ಹಾಗೂ ಸಿನಿಮಾ ಕುರಿತು ಮಾತನಾಡಿದ್ದಾರೆ. ಈ ವಾರ ಪ್ರದೀಪ್ ರಾಜ್ ನಿರ್ದೇಶನದ ಕಿಚ್ಚು ಚಿತ್ರ ಬಿಡುಗಡೆಯಾಗುತ್ತಿದ್ದು 8 ತಿಂಗಳ ಬಳಿಕ ರಾಗಿಣಿಯವರ ಸಿನಿಮಾ ಬಿಡುಗಡೆಯಾಗುತ್ತಿದೆ.

ಈ ಚಿತ್ರದಲ್ಲಿ ಧ್ರುವ ಶರ್ಮಾ ಜೊತೆ ತೆರೆ ಹಂಚಿಕೊಂಡಿದ್ದಾರೆ ರಾಗಿಣಿ. ಕಿಚ್ಚ ಸುದೀಪ್ ಕೂಡ ವಿಶೇಷ ಪಾತ್ರದಲ್ಲಿ ಬಂದು ಹೋಗಲಿದ್ದಾರೆ. ಇಲ್ಲಿ ರಾಗಿಣಿ ತಮ್ಮ ಗ್ಲಾಮರ್ ಪಾತ್ರವನ್ನು ಬದಿಗಿಟ್ಟು ಕಾಫಿ ಎಸ್ಟೇಟ್ ಕಾರ್ಮಿಕಳ ಪಾತ್ರ ವಹಿಸಿದ್ದಾರೆ. ಈ ಪಾತ್ರವನ್ನು ಖುಷಿಯಿಂದ ಮಾಡಿರುವ ರಾಗಿಣಿ ಡಿ ಗ್ಲಾಮ್ ಪಾತ್ರಗಳು ಗಟ್ಟಿಯಾದ ಕಥೆ ಹೊಂದಿರುತ್ತವೆ ಎಂಬುದನ್ನು ಒಪ್ಪುವುದಿಲ್ಲ.

ಗ್ಲಾಮ್ ಮತ್ತು ಡಿ-ಗ್ಲಾಮ್ ನಡುವಿನ ಸಣ್ಣ ಅಂತರಗೆರೆಯನ್ನು ಉತ್ಪ್ರೇಕ್ಷೆ ಮಾಡಿ ಹೇಳಲಾಗುತ್ತದೆ. ಗ್ಲಾಮರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆಂದರೆ ಆ ಪಾತ್ರಕ್ಕೆ ಮಹತ್ವವಿಲ್ಲವೆಂದರ್ಥವಲ್ಲ. ಮೇಕಪ್ ಇಲ್ಲದೆ ಮಾಡುವ ಪಾತ್ರಗಳಲ್ಲಿ ನಟನೆಗೆ ಹೆಚ್ಚು ಅವಕಾಶಗಳಿರುತ್ತವೆ ಎಂದು ಕೂಡ ಅರ್ಥವಲ್ಲ. ಯಾವುದೇ ಪಾತ್ರಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ, ಪ್ರೇಕ್ಷಕರಿಗೆ ಹೇಗೆ ಅದು ಅರ್ಥವಾಗುತ್ತದೆ ಮತ್ತು ಹಿಡಿಸುತ್ತದೆ ಎಂಬುದರ ಮೇಲೆ ನಿಂತಿದೆ ಎನ್ನುತ್ತಾರೆ ರಾಗಿಣಿ.

ಕಿಚ್ಚುವಿನಲ್ಲಿ ಕಾಫಿ ಎಸ್ಟೇಟ್ ಕಾರ್ಮಿಕಳ ಪಾತ್ರವನ್ನು ಚೆನ್ನಾಗಿ ನಿಭಾಯಿಸಿರುವ ತೃಪ್ತಿ ಅವರಿಗಿದೆ. ಕಾಫಿ ಎಸ್ಟೇಟ್ ನಲ್ಲಿರುವ ಕೆಲಸಗಾರರು, ಅವರ ಸಂಸ್ಕೃತಿ, ಸಮಾಜ ಮತ್ತು ಸ್ಥಳೀಯ ರಾಜಕೀಯದ ಬಗ್ಗೆ ನಾವು ಕೇಳುತ್ತೇವೆ. ಇಲ್ಲಿ ಅನೇಕ ಅಂಶಗಳು ಬರುವುದರಿಂದ ನನಗೆ ಚಿತ್ರ ಇಷ್ಟವಾಯಿತು ಎನ್ನುತ್ತಾರೆ.

ಕಲಾವಿದರು ವಿವಿಧ ಪಾತ್ರಗಳನ್ನು ಮಾಡಿದಾಗಲೇ ಅವರಿಗೆ ಗುರುತು ಸಿಗುವುದು. ಅದು ಪಿ.ಸಿ.ಶೇಖರ್ ಅವರ ಭಯೋತ್ಪಾದಕ ಪಾತ್ರವಾಗಿರಬಹುದು ಅಥವಾ ಶರಣ್ ಅವರ ಜೊತೆಗಿನ ಮುಂದಿನ ಚಿತ್ರವಾಗಿರಬಹುದು.ಅಂತಹ ವಿಶಿಷ್ಟ ಸಿನಿಮಾಗಳನ್ನು ಮಾಡುವುದು ನನಗೆ ಇಷ್ಟವಾಗುತ್ತದೆ ಎನ್ನುತ್ತಾರೆ.

ಕೆಳ ಸಮುದಾಯದ ಪಾತ್ರಗಳನ್ನು ಮಾಡುವುದು ಖುಷಿ ಕೊಡುತ್ತದೆ. ಕಿಚ್ಚು ಚಿತ್ರಕ್ಕೆ ಶೂಟಿಂಗ್ ಮಾಡುವಾಗ ಅನೇಕ ಕಾಫಿ ಎಸ್ಟೇಟ್ ಕಾರ್ಮಿಕರ ಜೊತೆ ಸಂವಾದ ನಡೆಸುತ್ತಿದ್ದೆ. ಅವರ ಜೊತೆ ಮಾತನಾಡುತ್ತಾ ಪಾತ್ರಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ನಗರ ಪ್ರದೇಶಗಳಲ್ಲಿ ಮಹಿಳೆಯರು ಕಷ್ಟಪಟ್ಟು ದುಡಿಯುತ್ತಾರೆ. ಆದರೆ ದಿನಗೂಲಿ ನೌಕರರಾಗಿ ದಿನಕ್ಕೆ 12ರಿಂದ 14 ಗಂಟೆ ದುಡಿದು ಕುಟುಂಬ ಸಾಗಿಸುವುದು ನಿಜಕ್ಕೂ ಕಷ್ಟದ ಕೆಲಸ ಎನ್ನುತ್ತಾರೆ ರಾಗಿಣಿ.

ಚಿತ್ರದಲ್ಲಿ ಕಿಚ್ಚ ಸುದೀಪ್ ಪಾತ್ರದ ಬಗ್ಗೆ ಮಾತನಾಡಿದ ಅವರು, ಇದು ನಟ ಧ್ರುವ ಅವರ ದೃಷ್ಟಿಕೋನವಾಗಿದ್ದು ಅದನ್ನು ಸುದೀಪ್ ಈಡೇರಿಸಿದ್ದಾರೆ. ಈ ಚಿತ್ರದ ಮೂಲಕ ಅವರ ಮೇಲಿದ್ದ ಅಭಿಮಾನ, ಗೌರವ 5 ಪಟ್ಟು ಜಾಸ್ತಿಯಾಗಿದೆ. ನಟನಾಗಿ ಅವರು ಆದರ್ಶವಾಗಿದ್ದು ಧ್ರುವ ಅವರಿಗೆ ಸ್ನೇಹಿತ ಕೂಡ ಹೌದು, ಅವರ ಪಾತ್ರದಿಂದ ಚಿತ್ರಕ್ಕೆ ಹೆಚ್ಚಿನ ತೂಕ ಸಿಕ್ಕಿದೆ ಎನ್ನುತ್ತಾರೆ ರಾಗಿಣಿ.

Related Stories

No stories found.

Advertisement

X
Kannada Prabha
www.kannadaprabha.com