ಜೂನ್ ವೇಳೆಗೆ ತೆರೆ ಮೇಲೆ ಚಂದ್ರ ಮೋಹನ್ 'ಡಬಲ್ ಇಂಜಿನ್'

ಕಥೆಗಾರ, ನಿರ್ದೇಶಕ ಚಂದ್ರಮೋಹನ್ ಅವರ ’ಡಬಲ್ ಇಂಜಿನ್’ ಚಿತ್ರೀಕರಣ ವಿಳಂಬವಾಗಿದೆ. . ಜಿಎಸ್ಟಿ ಯಿಂದಾಗಿ ಚಿತ್ರೀಕರಣ ವಿಳಂಬವಾಯಿತೆಂದು ಅವರು ದೂರಿದ್ದಾರೆ.
ಡಬಲ್ ಇಂಜಿನ್ ಚಿತ್ರದ ದೃಶ್ಯ
ಡಬಲ್ ಇಂಜಿನ್ ಚಿತ್ರದ ದೃಶ್ಯ
ಬೆಂಗಳೂರು: ಕಥೆಗಾರ, ನಿರ್ದೇಶಕ ಚಂದ್ರಮೋಹನ್ ಅವರ ’ಡಬಲ್ ಇಂಜಿನ್’ ಚಿತ್ರೀಕರಣ ವಿಳಂಬವಾಗಿದೆ. . ಜಿಎಸ್ಟಿ ಯಿಂದಾಗಿ ಚಿತ್ರೀಕರಣ ವಿಳಂಬವಾಯಿತೆಂದು ಅವರು ದೂರಿದ್ದಾರೆ.
ಸಧ್ಯ ಅವರು ಚಿತ್ರದ ಹಾಡಿನ ಭಾಗವನ್ನು ಪೂರ್ಣಗೊಳಿಸಲು ಮುಂದಾಗಿದ್ದು ಚಿತ್ರದ ಫಸ್ಟ್ ಲುಕ್ ಇಷ್ಟರಲ್ಲಿಯೇ ಬಿಡುಗಡೆಯಾಗಲಿದೆಯಂತೆ.. ಇದರೊಡನೆ ಚಿತ್ರದ ಪ್ರಚಾರ ಸಹ ಪ್ರಾರಂಭಿಸಬೇಕಾಗಿದ್ದು ಚುನಾವಣೆ ಮುಗಿದ ಬೆನ್ನಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿರುವ ಚಿತ್ರತಂಡ ಅದಕ್ಕಾಗಿ ಮೇ 17ರ ದಿನ ಗೊತ್ತುಮಾಡಿದೆ.
’ಬಾಂಬೆ ಮಿಠಾಯಿ’ ಚಿತ್ರದ ಬಳಿಕ ಚಂದ್ರ ಮೋಹನ್ ಅವರ ಎರಡನೇ ಚಿತ್ರ ಇದಾಗಿದ್ದು ಚಿಕ್ಕಣ್ಣ ಹಾಗೂ ಸುಮನ್ ರಂಗನಾಥನ್ ಮುಖ್ಯ ಪಾತ್ರದಲ್ಲಿದ್ದಾರೆ. ಅಲ್ಲದೆ ದತ್ತಣ್ಣ, ಸಾಧು ಕೋಕಿಲಾ, ಅಶೋಕ್, ಸುಚೀಂದ್ರ ಪ್ರಸಾದ್, ಅಚ್ಯುತ್ ರಾವ್, ಪ್ರೆಭು ಮತ್ತಿತರರು ಮುಖ್ಯ ತಾರಾಂಗಣದಲ್ಲಿದ್ದಾರೆ.
"ಕಥಾವಸ್ತು ಗಂಭೀರವಾದದ್ದಾದರೂ ಪ್ರೇಕ್ಷಕರು ನಗೆಗಡಲಿನಲ್ಲಿ ತೇಲುವಂತೆ ಚಿತ್ರ ಕಥೆ ಹೆಣೆಯಲಾಗಿದೆ." ನಿರ್ದೇಶಕರು ಹೇಳಿದ್ದಾರೆ. ವೀರ್ ಸಮರ್ಥ ಸಂಗೀತವಿರುವ ಈ ಚಿತ್ರಕ್ಕೆ ಸೂರ್ಯ ಎಸ್. ಕಿರಣ್ ಛಾಯಾಗ್ರಹಣವಿದೆ.
ಸಧ್ಯ ಸೆನ್ಸಾರ್ ಕೆಲಸ ನಡೆಯಬೇಕಿದ್ದು ಜೂನ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com