ಹಳೇಯ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದೊಂದಿಗೆ ನನ್ನ ಸಿನಿಮಾ ಹೋಲಿಸಲಾಗದು: ವಿವಿನ್ ಸೂರ್ಯ

1973ರಲ್ಲಿ ತೆರೆಕಂಡ ಹಿರಿಯ ನಟಿ ಜಯಂತಿ ಮತ್ತು ದಿವಂಗತ ಚಂದ್ರಶೇಖರ್ ಅಭಿನಯದ ...
ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಪೋಸ್ಟರ್ ಮತ್ತು ನಿರ್ದೇಶಕ ವಿವಿನ್ ಸೂರ್ಯ
ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಪೋಸ್ಟರ್ ಮತ್ತು ನಿರ್ದೇಶಕ ವಿವಿನ್ ಸೂರ್ಯ
Updated on

1973ರಲ್ಲಿ ತೆರೆಕಂಡ ಹಿರಿಯ ನಟಿ ಜಯಂತಿ ಮತ್ತು ದಿವಂಗತ ಚಂದ್ರಶೇಖರ್ ಅಭಿನಯದ ಎಡಕಲ್ಲು ಗುಡ್ಡದ ಮೇಲೆ ಚಿತ್ರ ಸಾಕಷ್ಟು ಯಶಸ್ಸು ಗಳಿಸಿತ್ತು. ಇದೀಗ ಅದೇ ಶೀರ್ಷಿಕೆಯ ಚಿತ್ರ ನಾಳೆ ನಾಡಿನಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಸಂದರ್ಭದಲ್ಲಿ ನಿರ್ದೇಶಕ ವಿವಿನ್ ಸೂರ್ಯ ಮಾತನಾಡಿ, ಶೀರ್ಷಿಕೆಗೆ ಚಿತ್ರದ ಕಥೆ ಸಾಕಷ್ಟು ಹತ್ತಿರವಾಗಿದೆ. ಅದು ಈ ಶುಕ್ರವಾರ ಗೊತ್ತಾಗಲಿದೆ. ಆದರೆ ಈ ಚಿತ್ರಕ್ಕೂ ಹಳೆಯ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಅದರ ಉಲ್ಲೇಖವನ್ನು ಇಲ್ಲಿ ತೆಗೆದುಕೊಂಡಿಲ್ಲ ಎಂದಿದ್ದಾರೆ.

ಇಂದು ಪೋಷಕರು ಬಹಳ ಬ್ಯುಸಿಯಾಗಿ ಒತ್ತಡದಲ್ಲಿದ್ದು ತಮ್ಮ ಮಕ್ಕಳನ್ನು ನಿರ್ಲಕ್ಷ್ಯ ಮಾಡುತ್ತಾರೆ. 20 ವರ್ಷಗಳ ಹಿಂದಿನ ನನ್ನ ಶಾಲಾ ದಿನಗಳಿಗೂ ಇಂದಿನ ಪರಿಸ್ಥಿತಿ ಹೇಗಿದೆ, ಅದರಂತೆ ನಾವು ಹೇಗೆ ಜೀವನ ಸಾಗಿಸುತ್ತಿದ್ದೇವೆ ಎಂಬುದನ್ನು ಚಿತ್ರದಲ್ಲಿ ವಿವರಿಸಿದ್ದೇವೆ ಎನ್ನುತ್ತಾರೆ.

ಈ ಚಿತ್ರದಲ್ಲಿ ಕೂಡ ದಿವಂಗತ ನಟ ಚಂದ್ರಶೇಖರ್ ನಟಿಸಿದ್ದಾರೆ.  ಆ ಬಳಿಕ ಅವರು ತೀರಿಕೊಂಡಿದ್ದು, ಅಂದಿನ ಕ್ಲಾಸಿಕ್ ಚಿತ್ರದಲ್ಲಿ ಅವರು ಜಯಂತಿಗೆ ನಾಯಕಿಯಾಗಿ ಅಭಿನಯಿಸಿದ್ದರು. ಅದು ಬಿಟ್ಟರೆ ಇವೆರಡು ಚಿತ್ರಗಳಲ್ಲಿ ಯಾವುದೇ ಸಾಮ್ಯತೆಯಿಲ್ಲ ಎಂದರು.
ಬಾಲಾಪರಾಧ ನ್ಯಾಯ ವಿಚಾರಣೆ ಕೋರ್ಟಿನ ದೃಶ್ಯವನ್ನು ತಮ್ಮ ಚಿತ್ರದಲ್ಲಿ ಮೊದಲ ಬಾರಿಗೆ ತೋರಿಸಿದ್ದೇವೆ ಎಂದರು ನಿರ್ದೇಶಕರು. ಜಿ.ಪಿ.ಪ್ರಕಾಶ್ ನಿರ್ಮಾಣದ ಚಿತ್ರಕ್ಕೆ ಆಶಿಕ್ ಅರುಣ್ ಅವರ ಸಂಗೀತವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com