ಮತ್ತೆ 'ಅಮೆರಿಕಾ ಅಮೆರಿಕಾ'ದಂತ ಸಿನಿಮಾ: ನಾಗತಿಹಳ್ಳಿ ಚಂದ್ರಶೇಖರ್

ಅಮೆರಿಕಾ ಅಮೆರಿಕಾದಂತ ಶ್ರೇಷ್ಠ ಸಿನಿಮಾಗಳನ್ನು ನೀಡಿದ ಕನ್ನಡಿಗರ ಪ್ರೀತಿಯ ಮೇಸ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಅಂಥದ್ದೆ ಮತ್ತೊಂದು ಸಿನಿಮಾ ...
ನಾಗತಿಹಳ್ಳಿ ಚಂದ್ರಶೇಖರ್
ನಾಗತಿಹಳ್ಳಿ ಚಂದ್ರಶೇಖರ್
ಬೆಂಗಳೂರು: ಅಮೆರಿಕಾ ಅಮೆರಿಕಾದಂತ ಶ್ರೇಷ್ಠ ಸಿನಿಮಾಗಳನ್ನು ನೀಡಿದ ಕನ್ನಡಿಗರ ಪ್ರೀತಿಯ ಮೇಸ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಅಂಥದ್ದೆ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ.
ಬೆಂಗಳೂರು ಮತ್ತು ಇಂಗ್ಲೆಂಡ್ ನಡುವೆ ಕುರಿತ ಕಥೆ ಇದಾಗಿದ್ದು, ಗುರುನಂದನ್ ಮತ್ತು ಮಾನ್ವಿತಾ ಹರೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.
ಸಿನಿಮಾಗೆ ಇನ್ನೂ ಟೈಟಲ್ ಅಂತಿಮವಾಗಿಲ್ಲ, ಶೀಘ್ರವೇ ಅದನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ, ಅಮೆರಿಕಾ ಅಮೆರಿಕಾದಂತ ಸಿನಿಮಾವನ್ನು ಮತ್ತೆತರಲು ಯೋಜಿಸಲಾಗುತ್ತಿದೆ, ಆ ಚಿತ್ರಕ್ಕೆ ಯಾವುದೇ ಹೋಲಿಕೆಯಿಲ್ಲ, ಆದರೆ ಕತೆ ಮಾತ್ರ ಆ ಸಾಲುಗಳಂತೆ ಇರುತ್ತದೆ ಎಂದು  ಹೇಳಿರುವ ನಾಗತಿಹಳ್ಳಿ ಪರ್ಫೆಕ್ಟ್ ಶೀರ್ಷಿಕೆಗಾಗಿ ಹುಡುಕಾಟ ನಡೆಸಿದ್ದಾರೆ.
ಇಂಗ್ಲೆಂಡ್ ನಾದ್ಯಾಂತ ಸಿನಿಮಾ ಶೂಟಿಂಗ್ ನಡೆಯಲಿದ್ದು, ವೇಲ್ಸ್, ಸ್ಕಾಟ್ಲೆಂಡ್ ಮತ್ತು ಮ್ಯಾಂಚೆಸ್ಟರ್ ನಲ್ಲಿ ಶೂಟಿಂಗ್ ನಡೆಯಲಿದೆ ಎಂದು ಹೇಳಿದ್ದಾರೆ,
ನಾಗತಿಹಳ್ಳಿ ಪುತ್ರಿ ಕನಸು ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸದ್ಯ ಕೆನಡಾದಲ್ಲಿ ವಾಸಿಸುತ್ತಿರುವ ಅವರ ಪುತ್ರಿ ಲಂಡನ್ ನ ನಾಟಿಂಗ್ ಹ್ಯಾಮ್ ವಿವಿ ಹಾಗೂ ಅಮೆರಿಕಾದ ಕೊಲಂಬಿಯಾ ವಿವಿಗಳಲ್ಲಿ ವ್ಯಾಸಂಗ ಮಾಡಿದ್ದಾರೆ.ಸದ್ಯ ಬೆಂಗಳೂರಿನಲ್ಲಿರುವ ಆಕೆ ಇಲ್ಲಿಂದಲೇ ನಮಗೆ ಶೂಟಿಂಗ್ ಗೆ ಸಹಾಯ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಜುಲೈ ತಿಂಗಳ ಮೊದಲ ವಾರದಲ್ಲಿ ಶೂಟಿಂಗ್ ಮಾಡಲು ನಾಗತಿ ಹಳ್ಳಿ ನಿರ್ಧರಿಸಿದ್ದಾರೆ,  ಮೊದಲ ಭಾಗ ಇಂಗ್ಲೆಂಡ್ ನಲ್ಲಿ ನಡೆಯಲಿದೆ,  ಚಳಿಗಾಲ ಆರಂಭಕ್ಕೂ ಮುನ್ನ ಶೂಟಿಂಗ್ ಪೂರ್ಣಗೊಳಿಸಬೇಕು. ಹೊರ ದೇಶಗಳ ಚಿತ್ರವನ್ನು ಆಗಸ್ಟ್ ತಿಂಗಳ ಒಳಗೆ ಮುಗಿಸಬೇಕಾಗಿ ಅವರು ಹೇಳಿದ್ದಾರೆ.
ಇಷ್ಟಕಾಮ್ಯ ನಿರ್ಮಾಪಕ ವೈ.ಎನ್ ಶಂಕರೇಗೌಡ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ, ಜೊತೆಗೆ ನಿರ್ದೇಶಕರ ಎನ್ ಆರ್ ಐ ಸ್ನೇಹಿತರು ಕೂಡ  ಪ್ರಾಜೆಕ್ಟ್ ಗೆ ಹಣ ಹೂಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com