
9 ವರ್ಷಗಳ ನಂತರ ಹಿರಿಯ ನಟಿ ಸರೋಜಾ ದೇವಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಅವರ ಅಭಿಮಾನಿಗಳು ಕಾತರರಾಗಿದ್ದಾರೆ.
ಇವರ ಇತ್ತೀಚಿನ ಕೊನೆಯ ಚಿತ್ರ ತಮಿಳಿನಲ್ಲಿ ಸೂರ್ಯ ನಾಯಕ ನಟನಾಗಿ ಅಭಿನಯಿಸಿದ ಅಧವನ್ ಆಗಿತ್ತು. ಇದೀಗ ಪುನೀತ್ ರಾಜ್ ಕುಮಾರ್ ಅಭಿನಯದ ನಟ ಸಾರ್ವಭೌಮ ಚಿತ್ರದಲ್ಲಿ ಸರೋಜದೇವಿ ಅಭಿನಯಿಸುತ್ತಿದ್ದು ನಿನ್ನೆ ಚಿತ್ರತಂಡವನ್ನು ಸೇರಿಕೊಂಡರು.
ಪುನೀತ್ ರಾಜ್ ಕುಮಾರ್ ಬಾಲ್ಯನಟನಾಗಿದ್ದಾಗಲೇ ಸರೋಜಾ ದೇವಿಯವರ ಜೊತೆ ಅಭಿನಯಿಸಿದ್ದರು. ಇದೀಗ 34 ವರ್ಷಗಳ ನಂತರ ಇಬ್ಬರೂ ಒಂದಾಗುತ್ತಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ನ ನಟಸಾರ್ವಭೌಮದಲ್ಲಿ ಸರೋಜಾ ದೇವಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ.
Advertisement