'ರಾಜೇಂದ್ರ ಪೊನ್ನಪ್ಪ' ಬಗ್ಗೆ ಪ್ರತಿಯೊಬ್ಬರು ಮಾತನಾಡುವಂತಾಗಬೇಕು: ರವಿಚಂದ್ರನ್

ಕರ್ನಾಟಕ ರಾಜಕೀಯದ ಬೆಳವಣಿಗೆ, ರಾಜಕೀಯ ನಾಯಕರ ನಾಟಕಗಳು ರಾಜ್ಯದ ಪ್ರತಿಯೊಬ್ಬ ಜನತೆಯನ್ನು ಕೂಡ ...
ವಿ.ರವಿಚಂದ್ರನ್
ವಿ.ರವಿಚಂದ್ರನ್

ಕರ್ನಾಟಕ ರಾಜಕೀಯದ ಬೆಳವಣಿಗೆ, ರಾಜಕೀಯ ನಾಯಕರ ನಾಟಕಗಳು ರಾಜ್ಯದ ಪ್ರತಿಯೊಬ್ಬ ಜನತೆಯನ್ನು ಕೂಡ ಟಿವಿ ಮುಂದೆ ಕುಳಿತುಕೊಂಡು ನೋಡುವಂತೆ ಮಾಡಿದೆ. ನಟ, ನಿರ್ದೇಶಕ ರವಿಚಂದ್ರನ್ ಅವರನ್ನು ಕೂಡ ಬಿಟ್ಟಿಲ್ಲ. ತಮ್ಮ ಮುಂಬರುವ ಚಿತ್ರ ರಾಜೇಂದ್ರ ಪೊನ್ನಪ್ಪದ ಸ್ಟಿಲ್ ಗಳಲ್ಲಿ ಅವರು ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚಿತ್ರಿಸಿ ಗಮನ ಹರಿಯುವಂತೆ ಮಾಡಿದ್ದಾರೆ.

ಈ ಚಿತ್ರದಲ್ಲಿ ರವಿಚಂದ್ರನ್ ಅವರದ್ದು ಕ್ರಿಮಿನಲ್ ಲಾಯರ್ ಪಾತ್ರ. ಅಲ್ಲದೆ ಚಿತ್ರದ ನಿರ್ದೇಶನ, ನಿರ್ಮಾಣ, ಸಂಗೀತ ನಿರ್ದೇಶನ ಮತ್ತು ಸಂಭಾಷಣೆಯ ಹೊಣೆಯನ್ನು ಕೂಡ ಹೊತ್ತಿದ್ದಾರೆ. ಚಿತ್ರದಲ್ಲಿನ ಪಾತ್ರದ ಒಂದು ಸ್ಟಿಲ್ ನ್ನು ಹರಿಬಿಟ್ಟು ರವಿಚಂದ್ರನ್ ಸಿನಿಪ್ರಿಯರಲ್ಲಿ ಕುತೂಹಲ ಮುೂಡಿಸಿದ್ದಾರೆ.

ಚಿತ್ರಗಳಲ್ಲಿ ಪೊಲೀಸ್, ರಾಜಕೀಯ, ಅಧಿಕಾರ,ನಾನು ಈ ಅಧಿಕಾರವನ್ನು ಪ್ರೀತಿಸುತ್ತೇನೆ, ನನ್ನನ್ನು ಗೇಮ್ ನಂತೆ ನೋಡಿಕೊಳ್ಳಿ, ಹೇಗೆ ಆಟವಾಡಬೇಕೆಂದು ತೋರಿಸುತ್ತೇನೆ, ನಿಂಗೆ ಸರಿ ಅನ್ಸಿದಿಕೆ ನಿಂತ್ಕೊ ಏಕಾಂಗಿ ಆದ್ರೂ ಸರಿ ಮತ್ತು ಪವರ್ ನ ಮಿಸ್ ಯೂಸ್ ಮಾಡೋರ ಜೊತೆ ಆಟ ಆಡೊ ಮಜಾನೆ ಬೇರೆ... ನಾನು ಸವಾಲನ್ನು ಇಷ್ಟಪಡುತ್ತೇನೆ ಇಂತಹ ಸಂಭಾಷಣೆಗಳಿವೆ.

ಇದು ಕಾಕತಾಳೀಯವೇ ಎಂಬುದು ನನಗೆ ಗೊತ್ತಿಲ್ಲ, ಆದರೆ ನನ್ನ ಚಿತ್ರದ ಸಂಭಾಷಣೆಗಳು ಇಂದಿನ ರಾಜಕೀಯ ಪರಿಸ್ಥಿತಿಗಳಿಗೆ ಹೊಂದಿಕೆಯಾಗುತ್ತಿವೆ. ಚಿತ್ರದ ಕಥಾವಸ್ತು ಪ್ರತಿಯೊಬ್ಬರೂ ಇಂದಿನ ಪರಿಸ್ಥಿತಿಗೆ ಹೋಲಿಕೆ ಮಾಡುವ ರೀತಿ ಇದೆ ಎನ್ನುತ್ತಾರೆ ರವಿಚಂದ್ರನ್.

ಇದರಲ್ಲಿ ರವಿಚಂದ್ರನ್ ಅವರೇ ರಾಜೇಂದ್ರ ಪೊನ್ನಪ್ಪ ಪಾತ್ರ ಮಾಡುತ್ತಿದ್ದಾರೆ. ನನ್ನನ್ನು ಚಿತ್ರ ಬಿಡುಗಡೆಯಾಗುವವರೆಗಾದರೂ ಜನರು ರವಿಚಂದ್ರನ್ ಬದಲಿಗೆ ರಾಜೇಂದ್ರ ಪೊನ್ನಪ್ಪ ಎಂದು ಗುರುತಿಸಬೇಕೆಂದು ಬಯಸುತ್ತೇನೆ ಎನ್ನುತ್ತಾರೆ. ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಮತ್ತು ಅಪೂರ್ವ ಅಭಿನಯಿಸುತ್ತಿದ್ದಾರೆ.

ನವೆಂಬರ್ 1ರ ರಾಜ್ಯೋತ್ಸವ ಹೊತ್ತಿಗೆ ಚಿತ್ರವನ್ನು ತೆರೆಗೆ ತರುವ ಯೋಜನೆ ಅವರದ್ದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com