
ನಿರ್ದೇಶಕ ನರೇಂದ್ರ ಬಾಬು ಅವರ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರ ನಾಳೆ ಬಿಡುಗಡೆಯಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಮತ್ತು ರಾಧಿಕಾ ಚೇತನ್ ಅಭಿನಯಿಸಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ನರೇಂದ್ರ ಬಾಬು, ಆರಂಭದಲ್ಲಿ ಇದಕ್ಕೆ ಕಲ್ಲು ಸಕ್ಕರೆ ಕೊಳ್ಳಿರೋ ಎಂಬ ಶೀರ್ಷಿಕೆ ಇಟ್ಟಿದ್ದೆವು. ಆದರೆ ನಂತರ ಅನಂತ್ ನಾಗ್ ಈ ಕಥೆ ನೋಡಿದ ನಂತರ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಶೀರ್ಷಿಕೆ ಸೂಚಿಸಿದರು ಎನ್ನುತ್ತಾರೆ ನರೇಂದ್ರ ಬಾಬು.
ಶೀರ್ಷಿಗೆಯಿಂದ ಗಮನಸೆಳೆಯುವ ಸಿನಿಮಾ ಕಮರ್ಷಿಯಲ್ ಆಧಾರಿತ ಚಿತ್ರ. ಎರಡು ಜನರೇಶನ್ ನ ವಿಭಿನ್ನ ವೃತ್ತಿಪರರ ಕುರಿತು ಸಿನಿಮಾವಿದು. ಒಬ್ಬ ಹಿರಿಯ ವ್ಯಕ್ತಿಯ ಸುತ್ತ ಕಥೆ ಸುತ್ತುತ್ತದೆ. ಇನ್ನೊಂದು ಐಟಿ ವೃತ್ತಿಪರರ ಅವರ ಜೀವನ ಶೈಲಿಯನ್ನು ಇಲ್ಲಿ ಕಥೆಯ ರೂಪ ತರಲಾಗಿದೆ.ಚಿತ್ರದಲ್ಲಿ ರಾಧಿಕಾ ಅನಂತ್ ನಾಗ್ ಅವರಿಗೆ ಬಾಸ್ ಆಗಿ ನಟಿಸಿದ್ದಾರೆ ಎಂದರು.
ರಾಮಚಂದ್ರ ಹಡಪ್ಪ ಅವರ ಸಂಗೀತ ಮತ್ತು ಪಿಕೆಎಚ್ ಡಾಸ್ ನ ಛಾಯಾಗ್ರಹಣವಿದೆ,
Advertisement