ರಾಜಕೀಯ ಇನ್ನಿಲ್ಲ, ಸ್ನೇಹಿತರೇ ಎಲ್ಲಾ!: ರೆಬೆಲ್ ಸ್ಟಾರ್ ಅಂಬರೀಶ್ ವಿಶೇಷ ಸಂದರ್ಶನ

ರೆಬೆಲ್ ಸ್ಟಾರ್ ಅಂಬರೀಶ್ ಗೆ ಇಂದು 66ನೇ ಜನ್ಮ ದಿನದ ಸಂಭ್ರಮ.
ಅಂಬರೀಶ್  ಕುಟುಂಬ
ಅಂಬರೀಶ್ ಕುಟುಂಬ
ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಗೆ ಇಂದು 66ನೇ ಜನ್ಮ ದಿನದ ಸಂಭ್ರಮ. ವರ್ಷ 66 ಆಗಿದ್ದರೂ ಅವರ ಮಾತುಗಳಲ್ಲಿನ ಉತ್ಸಾಹ ಮಾತ್ರ ಹಾಗೆಯೇ ಇದೆ. ನಟ, ರಾಜಕಾರಣಿಯ ಹುಟ್ಟುಹಬ್ಬದ ಸಮಯ ಎಕ್ಸ್ ಪ್ರೆಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರ ಮುಂದಿನ ಚಿತ್ರ ’ಅಂಬಿ ನಿಂಗ್ ವಯಸ್ಸಾಯ್ತೋ’, ಅವರ ಮಗ ಅಭಿಷೇಕ್ ಸ್ಯಾಂಡಲ್ ವುಡ್ ಎಂಟ್ರಿ ಹಾಗೂ ತಮ್ಮ ರಾಜಕೀಯ ನಿವೃತ್ತಿ ಸಂಬಂಧ ಮಾತನಾಡಿದ್ದಾರೆ.
ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವನ್ನೆ ನೀವು ಏಕೆ ಆಯ್ದುಕೊಂಡಿರಿ?
ರಜನಿಕಾಂತ್ ನನಗೆ ಈ ಪಾತ್ರ ಮಾಡುವಂತೆ ಸೂಚಿಸಿದರು. ಮೂಲತಃ  ಈ ಪಾತ್ರವನ್ನು ರಾಜ್ ಕಿರಣ್ ನಿರ್ವಹಿಸಿದ್ದಾರೆ. ’ಪಾ ಪಾಂಡಿ’ಯಲ್ಲಿ ಅವರು ಆ ಪಾತ್ರ ಮಾಡಿದ್ದರು.ಧನುಷ್  ಚಿತ್ರ ನಿರ್ದೇಶನ ಮಾಡಿದ್ದರು. ನನಗೆ ಆ ಪಾತ್ರ ಹೆಚ್ಚು ಒಪ್ಪುವುದರಿಂದ ಣಾನು ಈ ಚಿತ್ರ ಆಯ್ಕೆ ಮಾಡಿಕೊಂಡೆ. ನಾನು ಈಗಲೂ, ಮುಂದೆಯೂ ಚಿತ್ರಗಳನ್ನು ಮಾಡುತ್ತೇನೆ. ಆದರೆ ನಿರ್ದೇಶಕ ಗುರುದಾತ ಗಾಣಿಉಗ ಅವರ ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹೆಚ್ಚು ಸ್ಪೇಸ್ ನೀಡಲಾಗಿದೆ.
ಚಿತ್ರೀಕರಣದಲ್ಲಿ ಎಲ್ಲವೂ ನನ್ನ ಇಷ್ಟದಂತೆ ನಡೆಯುತ್ತಿದ್ದು ಇದು ನನಗೆ ಅತ್ಯಂತ ಸ್ಯುಲಭವಾಗಿ ಕಾಣುತ್ತಿದೆ.ನಾನು ಚಿತ್ರವನ್ನು ಒಪ್ಪಿಕೊಳ್ಳುವ ಮುನ್ನ ಕೆಲವು ಷರತ್ತು ಹಾಕಿದ್ದೆ. ದಿನದ ಐದು ಗಂಟೆ ನಾನು ಶೂಟಿಂಗ್ ನಡೆಸುತ್ತೇನೆ.. ಇದರಿಂದ ನನಗೆ ಆಯಾಸವಾಗುವಂತಿರಬಾರದು, ಈಗ ನಾನು ಬಹುತೇಕ ಶೂಟಿಂಗ್ ಮುಗಿಸಿದ್ದೇನೆ. ಇನ್ನೊಂದು ಫೈಟಿಂಗ್ ದೃಶ್ಯ ಮಾತ್ರ ಬಾಕಿ ಉಳಿದಿದೆ.
ಚಿತ್ರರಂಗದಲ್ಲಿ ನಡೆದ ಬದಲಾವಣೆಗೆ ನೀವು ಹೇಗೆ ಒಗ್ಗಿಕೊಂಡಿರಿ?
ನನ್ನ ಕೆಲಸದ ಶೈಲಿ ಎಂದಿಗೂ ಒಂದೇ ರೀತಿಯದಾಗಿದೆ. ಅದೆಂದಿಗೂ ಬದಲಾಗಿಲ್ಲ. ನಾನು ಬದಲಿಸಬೇಕೆಂದು ಅಂದುಕೊಂಡಿಲ್ಲ. ಸೆಟ್ ನಲ್ಲಿ ನಾನು ಅತ್ಯಂತ ಸಂತಸದಿಂದಿರುತ್ತೇನೆ . ನಾನು ಅದೃಷ್ಟವಂತ. ನಾವು ಕಲಾವಿದರು, ನಮ್ಮದೇ ನಿರ್ಮಾಪಕರು, ನಿರ್ದೇಶಕರನ್ನು ಹೊಂದಿದ್ದ ಆ ದಿನಗಳಿಗೆ ಹೋಲಿಸಿದರೆ ಇಂದು  ತುಸು ಭಿನ್ನವಾಗಿದೆ. ಆದರೆ ಶೂಟಿಂಗ್ ನ್ನು ನಾನೆಂದಿಗೂ ಆನಂದಿಸುತ್ತೇನೆ.
ನೀವು ರಾಜಕೀಯದಲ್ಲಿ ಸಕ್ರಿಯರಾಗಿದ್ದಿರಿ, ಚಲನಚಿತ್ರ ವೃತ್ತಿಜೀವನದೊಂದಿಗೆ ಅದನ್ನು ಹೇಗೆ ಹೊಂದಿಸಿಕೊಂಡಿರಿ?
ನಾನು ನನ್ನ ಬಳಿ ಬಂದ ಎಲ್ಲಾ ಅವಕಾಶವನ್ನು ಒಪ್ಪಿಕೊಳ್ಳಲಿಲ್ಲ. ನಾನು ನನ್ನಲ್ಲೇ ಯೋಚಿಸಿದೆ, ನಾನು ನಿರ್ಮಾಪಕರ ನಟನೆಂದು ನಾನು ಭಾವಿಸುತ್ತೇನೆ.ಆದರೆ ನನ್ನ ಜಿವನದ ಎರಡು ವಿಭಿನ್ನ ಮಾರ್ಗಗಳ ಕಾರಣ ನಾನು ಕಳೆದ ಹಲವು ವರ್ಷಗಳಲ್ಲಿ ನಿಜವಾದ ನಟನೆ ಕ್ಷೇತ್ರಕ್ಕೆ ನ್ಯಾಯ ಒದಗಿಸಲಿಲ್ಲ. ನಟನೆ ಹಾಗೂ ರಾಜಕೀಯ, ಎರಡರಲ್ಲಿಯೂ ನಾನು ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿತ್ತು.ನಾನು ಶೂಟಿಂಗ್ ಸೆಟ್ ನಲ್ಲಿ ಇರಬೇಕಾಗಿತ್ತು, ಆದರೆ ರಾಜಕೀಯದ ಕಾರಣ ಬೇರೆಡೆಗೆ ತೆರಳಬೇಕಾಗಿ ಬರುತ್ತಿತ್ತು. ನಾನು ಕನ್ನಡ ಚಿತ್ರರಂಗದ ಕೆಲವು ಅದ್ಭುತ ಮತ್ತು ದೊಡ್ಡ ಸ್ಟಾರ್ ನಟರೊಡನೆ ಕೆಲಸ ಮಾಡಿದ್ದೇನೆ. ನನ್ನ ಉಪಸ್ಥಿತಿಯು ಮುಖ್ಯವಾದುದೆಂದು ಕಂಡಲ್ಲಿ ನಾನದನ್ನು ಮುಂದುವರಿಸುತ್ತೇನೆ.
ನಿಮ್ಮ ಮಗ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ, ಅದರ ಬಗ್ಗೆ ಹೇಳಿ
ಮಗ ಅಭಿಷೇಕ್ ’ಅಮರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಲಿದ್ದಾನೆ. ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣ, ನಾಗಶೇಖರ್ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗುತ್ತಿದೆ. ಇತಿಹಾಸ ಮರುಕಳಿಸಲಿದೆ ಎಂದು ನಾನು ಭಾವಿಸಲಾರೆ ಆದರೆಅವನು ಅತ್ಯುತ್ತಮವಾದದ್ದನ್ನೇ ಕೊಡಲಿದ್ದಾನೆ ಎಂದು ಬಲ್ಲೆ. ಇದುವರೆಗೆ ನಾವೆಂದಿಗೂ ಅವನಿಗೆ ಚಿತ್ರರಂಗಕ್ಕೆ ಬರಲು ಕೇಳಿಲ್ಲ. ಪೋಷಕರಾಗಿ ನಾವು ಅವನಿಗೆ ಉತ್ತಮ ಶಿಕ್ಷಣ ಕೊಟ್ಟಿದ್ದೇವೆ. ಆದರೆ ಅವನಿಂದು ನಟನೆ ಕುರಿತು ಆಸಕ್ತಿ ತಾಳಿದ್ದಾನೆ. ಬಹುಶಃಅ ಆತ ಕನ್ನಡ ಚಿತ್ರರಂಗದ ಯುವ ಕಲಾವಿದರಿಂದ ಸ್ಪೂರ್ತಿ ಪಡೆದಿರಬೇಕು.
ಅವನು ನನ್ನ ಬಳಿ ತನ್ನ ಆಸೆಯನ್ನು ಕುರಿತು ಹೇಳಿದಾಗ ನಾನು ’ನಿನಗೆ ಚಿತ್ರರಂಗದಲ್ಲಿ ರೆಡ್ ಕಾರ್ಪೆಟ್ ಸ್ವಾಗತ’ ಸಿಗಲಿದೆ, ಆದರೆ ನೀನು ಅಲ್ಲಿ ನಿನ್ನ ಹೆಸರನ್ನು ಉಳಿಸಿಕೊಳ್ಳಬೇಕು’ ಎಂದು ಹೇಳಿದ್ದೆ. ನಾವೆಲ್ಲಾ ಚಿತ್ರರಂಗಕ್ಕೆ ಬಂದಾಗ ನಮಗೆ ನಟನೆ, ಫೈಟ್, ಡ್ಯಾನ್ಸ್ ಯಾವುದೂ ತಿಳಿದಿರಲಿಲ್ಲ. ನಾವು ಚಿತ್ರಗಳಲ್ಲಿ ಅಭಿನಯಿಸುತ್ತಲೇ ಇದನ್ನೆಲ್ಲಾ ಕಲಿತದ್ದು.  ಆದರೆ ನೀವಿಂದು ಚಿತ್ರರಂಗಕ್ಕೆ ಎಂಟ್ರಿ ಆಗಬೇಕಾದರೆ ನಿಮಗೆ ಇದೆಲ್ಲದರಲ್ಲಿ ಮೊದಲೇ ಪರಿಣಿತಿ ಇರಬೇಕು.ತಂತ್ರಜ್ಞಾನದ ಕಾರಣದಿಂದ ಚಿತ್ರವೊಂದನ್ನು ತಯಾರಿಸುವುದು ಇಂದು ಸುಲಭವಾಗಬಹುದು, ಆದರೆ ಉತ್ತಮ ಚಿತ್ರ ತಯಾರಿ ಇಂದಿಗೂ ಕಠಿಣ ಕಾರ್ಯವಾಗಿ ಉಳಿದಿದೆ.
ನೀವು ಅವನಿಗೆ ಹೇಳಿದ ಪ್ರಮುಖ ಜೀವನ ಪಾಠಗಳೇನು?
ಒಬ್ಬ ನಟನು ನಿರ್ದೇಶಕರಿಗೆ ಗೌರವ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸೆಟ್ ನ ಹೊರಗೆ ಅವರು ಗೆಳೆಯರಿದ್ದಾಗಲೂ ಕೆಲಸವೆಂದು ಬಂದಾಗ ಅವನು ನಿರ್ದೇಶಕನೇ, ಅವರೊಡನೆ ಗೌರವದಿಂದ ವರ್ತಿಸಬೇಕು.
ಅದೃಷ್ಟವಂತರು ಮಾತ್ರ ಚಿತ್ರರಂಗ ಪ್ರವೇಶಿಸಿ ಯಶಸ್ವಿಯಾಗುತ್ತಾರೆ
ನಾನು ಚಿತ್ರಗಳಲ್ಲಿ ಅಭಿನಯಿಸಲು ಎಂದಿಗೂ ಬಯಸಿರಲಿಲ್ಲ. ಆದರೆ ದೈವವೇ ನನ್ನನ್ನು ಇಲ್ಲಿಗೆ ಎಳೆದು ತಂದಿದೆ.ನಾನು ಶತ್ರುಘ್ನ ಸಿನ್ಹಾ ಅವರನ್ನು ಹೊಲುತ್ತಿದ್ದೆ ಎಂದು ನನ್ನ ಕುಟುಂಬದ ಸ್ನೇಹಿತರೊಬ್ಬರು ಹೇಳಿದ್ದರು.ಪುಟ್ಟಣ್ಣ ಕಣಗಾಲ್ ಹೊಸ ಪ್ರತಿಭೆಗೆ ಹುಡುಕಾಟದಲ್ಲಿದ್ದ ಸಮಯ ಅವರು ನನ್ನನ್ನು ಅವರಿಗೆ ಭೇಟಿಯಾಗಲು ಹೇಳಿದರು. ಆದರೆ ನಾನು ನಟನೆ ನನಗೆ ಸರಿಹೊಂದುವುದಿಲ್ಲ, ನನ್ನ ಕೆಟ್ಟ ಕೋಪಕ್ಕೆ, ನಟನೆಗೆ ಆಗಲ್ಲ ಎಂದಿದ್ದೆ. ಆದರೆ ಅವರು ಬಿಡಲಿಲ್ಲ, ಬಳಿಕ ಪುಟ್ಟಣ್ಣ ನನ್ನನ್ನು ಭೇಟಿಯಾದರು.ಒಂದು ಚಿಕ್ಕ ಸ್ಟಿಲ್ ಮಾಡಲು ಹೇಳಿದರು, ನಾನು ಸಿಗರೇಟ್ ಹಿಡಿಯುವ ಶೈಲಿ ಅವರಿಗಿಷ್ಟವಾಗಿತ್ತು. ಅದನ್ನವರು ತಮ್ಮ ಚಿತ್ರದಲ್ಲಿ ಅಳವಡಿಸಿಕೊಂಡರು.ಅಲ್ಲಿಂದಾಚೆಗೆ ಮತ್ತೆ ನಾನು ಹಿಂದಿರುಗಿ ನೋಡಲಿಲ್ಲ.
ರಾಜಕೀಯ ಇನ್ನಿಲ್ಲ, ಸ್ನೇಹಿತರೇ ಎಲ್ಲಾ!
ನಾನು ರಾಜಕೀಯ ಮಾಡಿದ್ದೇನೆ. ಇದು ಒಂದೆರಡು ದಿನವಲ್ಲ, ಇದಕ್ಕೆ ಐದು ವರ್ಷಗಳ ಪರಿಶ್ರಮವಿದೆ. ರಾಜಕೀಯದಲ್ಲಿ ನಾನೆಲ್ಲವನ್ನೂ ಕಂಡಿದ್ದೇನೆ.ಈಗ ನನ್ನ ವಯಸ್ಸು ನನಗೆ ಅನುಮತಿ ನೀಡುವುದಿಲ್ಲ.ಒಂದು ನಿರ್ದಿಷ್ಟ ಸ್ಥಾನದಲ್ಲಿ ನಾನು ಇದ್ದಾಗ ಜನ ನನ್ನಿಂದ ಆಗಬಹುದಾದ ಕೆಲಸದ ಬಗ್ಗೆ ಯೋಜಿಸುತ್ತಾರೀ. ಆದರೆ ನನಗೆ ಅದನ್ನು ನೆರವೇರಿಸಲು ಸಾಧ್ಯವಿಲ್ಲವಾದಾಗ, ಮನಸ್ಸಾಕ್ಷಿಯು ಒಪ್ಪುವುದಿಲ್ಲವಾದರೆ, ನಾನು ಮುಂದೆ ಹೋಗುವುದಿಲ್ಲ.  ನಾನು ಒಳ್ಳೆಯ ಪತ್ನಿ, ಮಗನನ್ನು ಹೊಂದಿದ್ದೇನೆ. ಜೀವನದ ಅಮೂಲ್ಯ ಕ್ಷಣಗಳನ್ನು ಅವಒಡನೆ, ನನ್ನ ಸ್ನೇಹಿತರೊಡನೆ ಕಳೆಯಬಯಸುತ್ತೇನೆ.
ಒಬ್ಬ ಸ್ಟಾರ್ ನಟ ವರ್ಷಕ್ಕೆ ಒಂದೆರಡು ಚಿತ್ರಗಳನ್ನೇ ಮಾಡುತ್ತಾರೆ
ನಮ್ಮ ಕಾಲದಲ್ಲಿ ನಟರೊಬ್ಬರು ವರ್ಷಕ್ಕೆ ಕನಿಷ್ಠ 12 ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ನಾನು ಒಂದು ವರ್ಷದಲ್ಲಿ 14 ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದು ನೆನಪಿದೆ. ಇಂದು ಚಿತ್ರಮಂದಿರಗಳು ಅನೇಕ ಇದೆ, ಆದರೆ ಆದಾಯವಿಲ್ಲ. ಪ್ರತಿ ಸ್ಟಾರ್  ನಟರು ವರ್ಷಗಳಲ್ಲಿ ಒಂದೆರಡು ಚಿತ್ರಗಳನ್ನಷೇ ಮಾಡುತ್ತಾರೆ. ನಾನು ಇತ್ತೀಚೆಗೆ ಮಲ್ಟಿಫ್ಲೆಕ್ಸ್ ಗೆ ಹೋದಾಗ ಅಲ್ಲಿನ ಮಾಲೀಕರು ಹೇಳಿದ್ದರು, ’ಉತ್ತಮ ಕನ್ನಡ ಚಿತ್ರಗಳು ಬರುತ್ತಿಲ್ಲವಾದ ಕಾರಣ ಪರಭಾಷಾ ಚಿತ್ರಗಳಿಂದ ಆ ಸ್ಥಾನ ತುಂಬಿಕೊಳ್ಳುತ್ತಿದ್ದೇವೆ’ ನಾನು ಕಲಾವಿದರು, ನಿರ್ದೇಶಕರಿಗೆ ಹೇಳುವುದೆಂದರೆ ಹೆಚ್ಚಿನ ಸಂಖ್ಯೆಯ ಕನಡ ಚಿತ್ರಗಳು ಬರಬೇಕಿದೆ.. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com