1950ರ ದಶಕದ ಗ್ರಾಮೀಣ ಭಾಗದ ವಿವಾಹಗಳ ಕಥೆ ಹೊಂದಿರುವ 'ಮದ್ವೆ'!

ತಿಥಿ ಸಿನಿಮಾ ಮಾದರಿಯಲ್ಲೇ ಇದೀಗ ‘ಮದ್ವೆ’ ಎಂಬ ಮತ್ತೊಂದು ಸಿನಿಮಾ ರೂಪುಗೊಂಡಿದೆ. ಮಂಡ್ಯ ಸುತ್ತಮುತ್ತಲಿನ ಸಾಮಾನ್ಯ ಜನರನ್ನೇ ಸಿನಿಮಾದಲ್ಲಿ ...
ಮದ್ವೆ ಸಿನಿಮಾ ಸ್ಟಿಲ್
ಮದ್ವೆ ಸಿನಿಮಾ ಸ್ಟಿಲ್
ಬೆಂಗಳೂರು: ತಿಥಿ ಸಿನಿಮಾ ಮಾದರಿಯಲ್ಲೇ ಇದೀಗ ‘ಮದ್ವೆ’ ಎಂಬ ಮತ್ತೊಂದು ಸಿನಿಮಾ ರೂಪುಗೊಂಡಿದೆ.  ಮಂಡ್ಯ ಸುತ್ತಮುತ್ತಲಿನ ಸಾಮಾನ್ಯ ಜನರನ್ನೇ ಸಿನಿಮಾದಲ್ಲಿ ಪಾತ್ರಧಾರಿಗಳನ್ನಾಗಿ ಮಾಡಿಕೊಳ್ಳಲಾಗಿದೆ.
ಲೈವ್ ರೆಕಾರ್ಡಿಂಗ್​ನಲ್ಲಿ ಸಿದ್ಧಗೊಂಡಿರುವ ಈ ಸಿನಿಮಾ ಈಗಾಗಲೇ ಕೆಲ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ನಾಯಕಿಯಾಗಿ ಆರೋಹಿ ಗೌಡ ನಟಿಸಿದ್ದಾರೆ.
 ಹಿಂದು ಕೃಷ್ಣ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ‘ಈ ಸಿನಿಮಾದ ಪರಿಕಲ್ಪನೆ  ನಿರ್ಮಾಪಕರದ್ದು.  50 ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ನಡೆಯುವ ಮದುವೆ ಹೇಗೆಲ್ಲ ಇರುತ್ತದೆ ಎಂಬುದನ್ನು ಒಂದು ಸಿನಿಮಾ ಮೂಲಕ ಹಾಸ್ಯವನ್ನು ಹೇಳಿದ್ದೇವೆ. 
ಹೆಣ್ಣು ನೋಡುವ ಶಾಸ್ತ್ರದಿಂದ ಶುರುವಾಗಿ, ಮದುವೆ ಮಾಡಿ ಕಳುಹಿಸುವವರೆಗೂ ಸಿನಿಮಾ ಕಥೆ ಸಾಗಲಿದೆ. ಕಥೆ ಸಲುವಾಗಿ 8 ತಿಂಗಳು ಕೆಲಸ ಮಾಡಿದ್ದೇವೆ’ ಎಂದು  ಹಿಂದು ಕೃಷ್ಣ ಹೇಳಿದ್ದಾರೆ.
‘ನಮ್ಮ ಸಿನಿಮಾಗೂ ಆ ಸಿನಿಮಾಗೂ ತುಂಬ ವ್ಯತ್ಯಾಸವಿದೆ. ‘ತಿಥಿ’ ಬರುವುದಕ್ಕೂ ಮೊದಲೇ ನಮ್ಮ ‘ಮದ್ವೆ’ ಸಿನಿಮಾದ ಕೆಲಸಗಳು ಪ್ರಾರಂಭವಾಗಿ, ಒಂದು ಶೆಡ್ಯೂಲ್ ಶೂಟಿಂಗ್ ಸಹ ಆಗಿತ್ತು. ‘ತಿಥಿ’ಯಲ್ಲಿ ಕೆಲಸ ಮಾಡಿರುವ ಬಹುತೇಕ ತಂತ್ರಜ್ಞರು ಈ ಸಿನಿಮಾಕ್ಕೂ ಕೆಲಸ ಮಾಡಿದ್ದಾರೆ. ಅಲ್ಲದೆ, ನಿರ್ದೇಶಕನಾಗಿ ‘ತಿಥಿ’ಯಿಂದ ಒಂದಷ್ಟು ವಿಷಯಗಳನ್ನು ಕಲಿತುಕೊಂಡಿದ್ದೇನೆ. ಹಾಸ್ಯ ಸನ್ನಿವೇಶಗಳನ್ನು ಅಳವಡಿಸುವುದಕ್ಕೆ ‘ತಿಥಿ’ ನನಗೆ ಸ್ಪೂರ್ತಿಯಾಗಿತ್ತು’ ಎಂದು ಹೇಳಿದ್ದಾರೆ.
ಮಾತಾ ಪಿತೃ ಎಂಟರ್ಟೈನ್ಮೆಂಟ್ಸ್ ಅಡಿಯಲ್ಲಿ ಈ ಸಿನಿಮಾಕ್ಕೆ ಪರಮೇಶ್ ಮತ್ತು ಪುಷ್ಪಾ ಬಂಡವಾಳ ಹೂಡಿದ್ದಾರೆ,  ಕೊಲ್ಕತ್ತ ಇಂಟರ್​ನ್ಯಾಷನಲ್ ಕಲ್ಟ್ ಫಿಲಂ ಫೆಸ್ಟಿವಲ್​ನಲ್ಲಿ ಪ್ರದರ್ಶನ ಕಂಡು ಸ್ಪರ್ಧೆಯ ಅಂತಿಮ ಹಂತಕ್ಕೆ ಈ ಸಿನಿಮಾ ತಲುಪಿತ್ತು. ಕ್ಯಾಲಿಫೋರ್ನಿಯಾದಲ್ಲೂ ಕೂಡ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com