ನಾನು ಭೈರವ ಗೀತಾ ನಿರ್ದೇಶಿಸಿದ್ದರೆ, ಸಿದ್ದಾರ್ಥ್ ಜತೆ ಹೋಲಿಸಲು ಸಾಧ್ಯವಾಗುತ್ತಿರಲಿಲ್ಲ: ರಾಮ್ ಗೋಪಾಲ್ ವರ್ಮ

"ಭೈರವ ಗೀತಾ" ಚಿತ್ರದ ನಿರ್ದೇಶಕ ಸಿದ್ದಾರ್ಥರಂತಹಾ ಪ್ರತಿಭೆ ತನಗೆ ಸಿಕ್ಕಿರುವುದಕ್ಕೆ ನಾನು ಬಹಳ ಅದೃಷ್ಟವಂತನಾಗಿದ್ದೇನೆ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ
"ಭೈರವ ಗೀತಾ" ಚಿತ್ರದ ನಿರ್ದೇಶಕ ಸಿದ್ದಾರ್ಥರಂತಹಾ ಪ್ರತಿಭೆ ತನಗೆ ಸಿಕ್ಕಿರುವುದಕ್ಕೆ ನಾನು ಬಹಳ ಅದೃಷ್ಟವಂತನಾಗಿದ್ದೇನೆ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಸಿದ್ದಾರ್ಥ ಉತ್ತಮ ತಂತ್ರಜ್ಞನಾಗಿದ್ದು ಖಚಿತವಾಗಿ ಚಿತ್ರ ವೀಕ್ಷಿಸಿದ ಪ್ರೇಕ್ಷಕರೆಲ್ಲರೂ ನಿರ್ದೇಶಕರ ಜಾಣ್ಮೆಗೆ ತಲೆದೂಗಿ ಚಪ್ಪಾಳೆ ಹೊಡೆಯಲಿದ್ದಾರೆ ಎಂದು ವರ್ಮಾ ಭರವಸೆಯಿಂದ ನುಡಿದರು.
ಶನಿವಾರ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವರ್ಮಾ ಮಾತನಾಡಿದ್ದಾರೆ. "ಭೈರವ ಗೀತಾ" ಚಿತ್ರ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ.
"ಭೈರವ ಗೀತಾ" ನಿರ್ದೇಶಕರಾದ ಸಿದ್ದಾರ್ಥ ಇದಕ್ಕೆ ಮುನ್ನ ಸಹಾಯಕ ಸಂಪಾದಕ (ಅಸಿಸ್ಟೆಂಟ್ ಎಡಿಟರ್) ಆಗಿಯಷ್ಟೇ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದರು. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ನಲ್ಲಿ ಬಿ ಟೆಕ್ ಪದವಿ ಹೊಂದಿರುವ ಇವರಿಗೆ ರಾಮ್ ಗೋಪಾಲ್ ವರ್ಮಾ ಅವರ ಚಿತ್ರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ.
ಚಿತ್ರ ವೀಕ್ಷಣೆಯಿಂದಲೇ ಚಿತ್ರ ನಿರ್ದೇಸನ ಕುರಿತಂತೆ ತಿಳಿದುಕೊಂಡ ಸಿದ್ದಾರ್ಥ್ ಅವರಿಗೆ ಪ್ರಥಮ ಪ್ರಯತ್ನದಲ್ಲೇ ದೊಡ್ಡ ನಿರ್ಮಾಪಕರ ಕೆಳಗೆ ಕೆಲಸ ಮಾಡುವ ಅವಖಾಶ ಸಿಕ್ಕಿತ್ತು. ಇನ್ನು ಚಿತ್ರ ನಿರ್ಮಾಪಕರಲ್ಲಿ ಒಬ್ಬರಾದ ಭಾಸ್ಕರ್ ರಾಶಿ ನಟ ಧನಂಜಯ್ ಅವರನ್ನು ಡಾಲಿ ಪಾತ್ರಕ್ಕೆ ಆಯ್ಕೆ ಮಾಡಿದ್ದರು."ಟಗರು ಚಿತ್ರದ ಧನಂಜಯ್ ಪಾತ್ರ ನನಗೆ ಬಲುಇಷ್ಟವಾಗಿತ್ತು. ಹೀಗಾಗಿ ಭೈರವ ಗೀತಾಗೆ ಈತನೇ ಸೂಕ್ತ ಎಂದು ನಾನು ತೀರ್ಮಾನಿಸಿದ್ದೆ.ಧನಂಜಯ್ ಅತ್ಯಂತ ಭರವಸೆಯ ನಟ.ಅವರಂತೆ ನಟನಾ ಶೈಲಿ ಅಳವಡಿಸಿಕೊಂಡಿರುವವರು ದಕ್ಷಿಣ ಭಾರತ ಚಿತ್ರರಂಗದಲ್ಲೇ ಅತ್ಯಂತ ವಿರಳವಾಗಿದ್ದಾರೆ.ರವ ಗೀತದಲ್ಲಿ ಅವನನ್ನು ನೋಡಿದ ನಂತರ, ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೇನೆ "ಎಂದು ಅವರು ಹೇಳಿದ್ದಾರೆ.
"ಚಿತ್ರದ ಕ್ರೆಡಿಟ್ ಏನಿದ್ದರೂ ಚೊಚ್ಚಲ ನಿರ್ದೇಶಕರಿಗೆ ಸಲ್ಲತಕ್ಕದ್ದು.ಈ ಚಿತ್ರದಲ್ಲಿ ನಿಜವಾದ ಹೊಸ ಪ್ರತಿಭೆಯೊಂದು ಹುಟ್ಟಿದೆ.ನಾನು ಈ ಚಿತ್ರ ನಿರ್ಮಾಪಕನಾಗಿದ್ದಕ್ಕಾಗಿ ಈ ಮಾತು ಹೇಳಿಲ್ಲ.ಇದು ನಿಜವಾದ ನನ್ನ ಮನದ ಮಾತು"
ಈ ಹಿಂದೆ ವಿಶಾಖಪಟ್ಟಣದಲ್ಲಿ "ಕಿಲ್ಲಿಂಗ್ ವೀರಪ್ಪನ್" ಚಿತ್ರ ನಿರ್ಮಾಣದಲ್ಲಿದ್ದ ವೇಳೆ ಆರ್.ಜಿ.ವಿ. ತಾವು ಕಿರುಚಿತ್ರ ನಿರ್ದೇಶಕರಿಗಾಗಿ ಹುಡುಕಾಟ ನಡೆಸಿದ್ದನ್ನು ನೆನೆಯುತ್ತಾರೆ.ಆ ಸಮಯ ಅವರಿಗೆ ಸಿದ್ದಾಂರ್ಥ ಪರಿಚಯವಾಗಿತ್ತು. "ನಾನು ಅವರ ಕೆಲಸದಿಂದ ಪ್ರಭಾವಿತನಾದೆ.ಅವರ ಸ್ನೇಹಿತರೊಡನೆ ಮುಂಬೈಗೆ ಆಗಮಿಸಲು ಕೇಳಿದೆ.ನಾನು ಒಂದುವೆಬ್ ಸರಣಿಯನ್ನು ಮಾಡುತ್ತಿರುವಾಗ, ಅವರು ಸಹ ನನ್ನೊಡನೆ ಕೈಜೋಡಿಸಿದ್ದರು." ವರ್ಮಾ ಹೇಳಿದ್ದಾರೆ.
ಚಿತ್ರ ನಿರ್ದೇಶನದ ವೇಳೆ ಸಿದ್ಧಾರ್ಥ ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಶೂಟಿಂಗ್ ಮಾಡುವಾಗ ಸಲಹೆಯನ್ನು ಕೇಳಿದ್ದು ಸಹ ಅತ್ಯಂತ ವಿರಳವಾಗಿತ್ತು ಎಂದು ಅವರು ಹೇಳಿದ್ದಾರೆ.
"ನಾನು ಹೆಚ್ಚಾಗಿ ಸಾಕ್ಷ್ಯಚಿತ್ರಗಳ ಕಡೆಗೆ ಒಲವನ್ನು ತೋರುತ್ತಿದ್ದೇನೆ. ಸಿನಿಮಾದಲ್ಲಿ ನನ್ನ ಆಸಕ್ತಿ ಇತರರಿಂದ ಭಿನ್ನವಾಗಿದೆ. ನಾನು ಸಾಮಾನ್ಯ ವೀಕ್ಷಕನಂತೆ ಚಿತ್ರ ವೀಕ್ಷಣೆ ಮಾಡಲಾರೆ.ನಾನು ಚಿತ್ರವೊಂದರಲ್ಲಿ ಕಥೆಯ ಭಾಗಕ್ಕಿಂತ ಕಲೆಗಾರಿಕೆಗೆ ಗಮನ ನೀಡುತ್ತೇನೆ.ಒಂದೊಮ್ಮೆ ನನಗೆ ಇದು ಇಷ್ಟವಾಗದೆ ಹೋದರೆ ಅದನ್ನು ವೀಕ್ಷಿಸುವುದನ್ನು ನಿಲ್ಲಿಸುವೆ. ಭೈರವ ಗೀತಾದಲ್ಲಿ ಕಥೆ ಹಾಗೂ ಕಲೆಗಾರಿಕೆಯ ಮಿಶ್ರಣವಿದೆ" ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com