ಬೆಂಗಳೂರು: ಕೊಡವ ಚಿತ್ರ "ಪಾರಣೆ" ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಗಳನ್ನು ಚಿತ್ರ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಇಂದು (ಗುರುವಾರ) ಬಿಡುಗಡೆಗೊಳಿಸುತ್ತಿದ್ದಾರೆ.
ಬೆ<ಗಳೂರಿನಲ್ಲಿ ನೆಲೆಸಿರುವ ಕೇರಳಿಗ ಶ್ರೀಲೇಸ್ ಎಸ್. ನಾಯರ್ ಈ ಚಿತ್ರ ನಿರ್ಮಿಸುತ್ತಿದ್ದು ಕೊಡವ ಭಾಷೆಯಲ್ಲಿ ತಯಾರಾದ ಚಿತ್ರದ ಮೂಲಕ ಮತ್ತೊಮ್ಮೆ ಕರ್ನಾಟಕ-ಕೇರಳ ಗಡಿ ಭಾಗದ ಜನರ ಚಿತ್ರಣವನ್ನು ಬಿಂಬಿಸಲು ಪ್ರಯತ್ನ ಸಾಗಿದೆ.
ಕೊಡಗಿನಲ್ಲಿರುವ ಪಾರಣೆ ಎನ್ನುವ ಗ್ರಾಮದ ಹೆಸರನ್ನೇ ಚಿತ್ರಕ್ಕೂ ಇಡಲಾಗಿದ್ದು ಅಲ್ಲಿನ ಜನರು ತಮ್ಮ ಅಸ್ತಿತ್ವದ ಕುರಿತಂತೆ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಚಿತ್ರ ಗಮನ ಹರಿಸುತ್ತದೆ.
"ಪಾರಣೆ- ಪ್ರಾದೇಶಿಕ ಸಂಸ್ಕೃತಿಯನ್ನು, ನೆಲವನ್ನು ಪರಿಶೋಧಿಸುತ್ತದೆ ಮತ್ತು ಅವರು ತಮ್ಮ ತಾಯ್ನಾಡನ್ನು ಕಾಪಾಡಿಕೊಳ್ಳಲು ತಮ್ಮ ಸ್ಥಳೀಯ ಪ್ರದೇಶದ ಮೇಲೆ ನಡೆಯುವ ಆಕ್ರಮಣ ವಿರುದ್ಧ ಜನರು ದಂಗೆಯೇಳುವುದನ್ನು ತೋರಿಸುವುದು ನನ್ನ ಕಥೆಯ ಉದ್ದೇಶವಾಗಿದೆ" ಶ್ರೀಲೇಶ್ ವಿವರಿಸಿದರು.
ವಿಶೇಷವೆಂದರೆ ಇದು ಅತ್ಯಂತ ಕಡಿಮೆ ಬಜೆಟ್ ನ ಚಿತ್ರ. ಇದಕ್ಕಾಗಿ ಕೇವಲ 3.5ಲಕ್ಷ ರು. ವೆಚ್ಚ ಮಾಡಲಾಗಿದೆ. ಅಷ್ಟೇ ಅಲ್ಲ ಚಿತ್ರದಲ್ಲಿ ಯಾವ ವೃತ್ತಿಪರ ನಟ-ನಟಿಯರೂ ಇಲ್ಲ.ಚಿತ್ರಕ್ಕಾಗಿ ಯಾವುದೇ ಲಿಖಿತ ರೂಪದ ಚಿತ್ರಕಥೆಯನ್ನು ಬರೆದಿಡಲಿಲ್ಲ. "ನಾವು ಪಾರಣೆ ಗ್ರಾಮದ ಜನರನ್ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಂಡೆವು.ಚಿತ್ರವನ್ನು ಕೊಡಗಿನ ಸುತ್ತಲೂ ಚಿತ್ರದ ಚಿತ್ರೀಕರಣ ನಡೆದಿದೆ." ನಿರ್ದೇಶಕ ಹೇಳಿದ್ದಾರೆ.
ಇದೀಗ ಈ ಚಿತ್ರ ಹಲವು ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ನಿರ್ದೇಶಕರು ಇದರಿಂದ ಸಹಜವಾಗಿ ಸಂತಸಗೊಂಡಿದ್ದು "ಭಾರತದಲ್ಲಿ ಮೊದಲ ಬಾರಿಗೆಕೊಡವ ಭಾಷಾ ಚಿತ್ರವೊಂದು ಚಿತ್ರೋತ್ಸವದಲ್ಲಿ ಪ್ರದರ್ಶನವಾಗುತಿದೆ. ಇದು ಇಂಡೋನೇಷಿಯಾ ಹಾಗು ಬ್ರಿಟನ್ ನಲ್ಲಿ ನಡೆಯುವ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ನಮಗೆ ಅತ್ಯಂತ ಖುಷಿಯ ವಿಚಾರ" ಅವರು ಹೇಳಿದ್ದಾರೆ.