#MeToo ಆರೋಪ: ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಸಂಜನಾ ಹೇಳಿದ್ದೇನು?

"ಗಂಡ ಹೆಂಡತಿ" ಸಿನಿಮಾ ವೇಳೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರೀಕರಣದ ಸಮಯ ಕಿರುಕುಳ ನಿಡಿದ್ದರೆಂದು, ಬೆದರಿಕೆ ಹಾಕಿದ್ದರೆಂದೂ ಆರೋಪಿಸಿದ್ದ ನಟಿ ಸಂಜನಾ ಇದೀಗ ಉಲ್ಟಾ ಹೊಡೆದಿದ್ದಾರೆ.
ಸಂಜನಾ, ರವಿ ಶ್ರೀವತ್ಸ,
ಸಂಜನಾ, ರವಿ ಶ್ರೀವತ್ಸ,
ಬೆಂಗಳೂರು: "ಗಂಡ ಹೆಂಡತಿ" ಸಿನಿಮಾ ವೇಳೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರೀಕರಣದ ಸಮಯ ಕಿರುಕುಳ ನಿಡಿದ್ದರೆಂದು, ಬೆದರಿಕೆ ಹಾಕಿದ್ದರೆಂದೂ ಆರೋಪಿಸಿದ್ದ ನಟಿ ಸಂಜನಾ ಇದೀಗ ತಣ್ಣಗಾಗಿದ್ದಾರೆ
ಸಂಜನಾ ತಮ್ಮ ಆರೋಪದ ಕುರಿತು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಸಂಜನಾ ಕಲಾವಿದರ ಸಂಘ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕ್ಷಮೆ ಕೇಳಿದ್ದಾರೆ.
ಈ ಸಂಬಂಧ ನಿರ್ದೇಶಕರ ಸಂಘದ ಅಧ್ಯಕ್ಶ ನಾಗೇಂದ್ರ ಪ್ರಸಾದ್ ಅವರೊಡನೆ ತೆಗೆದ ವೀಡಿಯೋ ಸಂದೇಶವೊಂದನ್ನು ಮಾದ್ಯಮಗಳಿಗೆ ಕಳಿಸಿರುವ ನಟಿ "ನನ್ನ ಮಾತುಗಳಿಂದ ಅವರಿಗೆ ತೊಂದರೆಯಾಗಿದ್ದರೆ ದಯವಿಟ್ಟು ಕ್ಷಮಿಸಿ" ಎಂದಿದ್ದಾರೆ.
"ಗಂಡ ಹೆಂಡತಿ ಚಿತ್ರದ ವೇಳೆ ನಡೆದ ಘಟನೆಗಳ, ನನ್ನ ಅನುಭವಗಳನ್ನು ನಾನು ಮೀಟೂ ಅಭಿಯಾನದ ಮೂಲಕ ಹಂಚಿಕೊಂಡಿದ್ದೆ. ಇದರಿಂದ ಆ ಚಿತ್ರ ನಿರ್ದೇಶಕರಿಗೆ, ನಿರ್ದೇಶಕರ ಸಂಘದ ಸದಸ್ಯರಿಗೆ ನೋವಾಗಿದೆ. ನನಗೆ ಯಾರನ್ನೂ ನೋವು ಮಾಡಬೇನ್ನುವುದಿ;ಲ್ಲ. ಯಾರ ಜೀವನ ಹಾಳಾಗಬೇಕೆಂದು ನಾನು ಬಯಸಲ್ಲ.
"ಇದೀಗ ಹಿರಿಯ ನಟ ಅಂಬರೀಶ್, ದೊಡ್ಡಣ್ಣ ಹಾಗೂ ರಾಕ್‍ಲೈನ್ ವೆಂಕಟೇಶ್ ಅವರ ಮಾತಿಗೆ ಬೆಲೆಕೊಟ್ಟು ನಾನು ನಿರ್ದೇಶಕರ ಹಾಗೂ ಚಿತ್ರತಂಡದ ಸರ್ವರಲ್ಲಿ ಕ್ಷಮೆ ಬೇಡುತ್ತೇನೆ." ಎಂದಿದ್ದಾರೆ.
ಇದಕ್ಕೆ ಮುನ್ನ ಗಂಡ ಹೆಂಡತಿ ಚಿತ್ರೀಕರಣದ ವೇಳೆ ನನಗೆ ನಿರ್ದೇಶಕ ರವಿ ಶ್ರೀವತ್ಸ ಕಿರುಕುಳ ನೀಡಿದ್ದರೆಂದು ಸಂಜನಾ ಆರೋಪಿಸಿದ್ದು ಹೊಸ ವಿವಾದವೊಂದಕ್ಕೆ ಕಾರಣವಾಗಿತ್ತು.ಈ ಸಂಬಂಧ ಮಾತನಾಡಿದ್ದ ನಿರ್ದೇಶಕರು ತಾನು ಯಾವ ತಪ್ಪೂ ಮಾಡಿಲ್ಲ. ಈ ಸಂಬಂಧ ತಾನು ಕಾನೂನು ಹೋರಾಟ ನಡೆಸಲಿದ್ದೇನೆ ಎಂದಿದ್ದರು.
ಈಗ ನಟಿ ಸಂಜನಾ ಕ್ಷಮೆ ಕೋರುದ್ದು ವಿವಾದ ತಣ್ಣಗಾಗಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com