23 ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ 'ಜೀರ್ಜಿಂಬೆ'ಯನ್ನು ಈಗ ಚಿತ್ರಮಂದಿರಗಳಲ್ಲಿ ನೋಡಿ!

ನಿರ್ದೇಶಕ ಕಾರ್ತಿಕ್ ಸರಗೂರ್ ಅವರ ಚೊಚ್ಚಲ ಚಿತ್ರ "ಜೀರ್ಜಿಂಬೆ" 2016ರಲ್ಲೇ ತಯಾರಾಗಿದ್ದರೂ ಸಹ ಈ ವರ್ಷದಲ್ಲಿ ತೆರೆ ಕಾಣುತ್ತಿದೆ. ಚಿತ್ರಕ್ಕೆ ಮಕ್ಕಳ ಚಿಒತ್ರಕ್ಕಾಗಿ ನೀಡಲಾಗುವ 2017 ರ ಸಾಲಿನ ರಾಜ್ಯ ಪ್ರಶಸ್ತಿ....
ಜೀರ್ಜಿಂಬೆ ಚಿತ್ರದ ದೃಶ್ಯ
ಜೀರ್ಜಿಂಬೆ ಚಿತ್ರದ ದೃಶ್ಯ
ಬೆಂಗಳೂರು: ನಿರ್ದೇಶಕ ಕಾರ್ತಿಕ್ ಸರಗೂರ್ ಅವರ ಚೊಚ್ಚಲ ಚಿತ್ರ "ಜೀರ್ಜಿಂಬೆ" 2016ರಲ್ಲೇ ತಯಾರಾಗಿದ್ದರೂ ಸಹ ಈ ವರ್ಷದಲ್ಲಿ ತೆರೆ ಕಾಣುತ್ತಿದೆ. ಚಿತ್ರಕ್ಕೆ ಮಕ್ಕಳ ಚಿಒತ್ರಕ್ಕಾಗಿ ನೀಡಲಾಗುವ 2017 ರ ಸಾಲಿನ  ರಾಜ್ಯ ಪ್ರಶಸ್ತಿ ಸಹ ಲಭಿಸಿದೆ. ಆದರೆ ಚಿತ್ರದ ಕಮರ್ಷಿಯಲ್ ಬಿಡುಗಡೆಗೆ ವಿಳಂಬವೇಕೆ ಎಂದರೆ ನಿರ್ದೇಶಕರು ಹೇಳುವ ಕಾರಣ ಹೀಗಿದೆ-
"2017-18ರ ನಡುವೆ ಈ ಚಿತ್ರ ಒಟ್ಟಾರೆ 23 ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಪ್ರದರ್ಶನ ಕಾಂಡಿದೆ. ಹೀಗೆ ಚಿತ್ರವೊಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿದ್ದ ಕಾರಣ ಇದನ್ನು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೊಳಿಸಲಾಗಲಿಲ್ಲ.
"ಚಿತ್ರವು ಕನ್ನಡದಲ್ಲಿ ತಯಾರಾಗಿದ್ದು ಕರ್ನಾಟಕದ ಗ್ರಾಮೀಣ ಭಾಗದ ಬಾಲಕಿಯೊಬ್ಬಳ ಕಥೆ ಆಧರಿಸಿದ ವಿತ್ರ ಜೀರ್ಜಿಂಬೆ.ನಾವು ಈ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಮುಂದಾಗಿದ್ದೆವು. ಆ ಮೂಲಕ ಚಿತ್ರಕಥೆ ಎಷ್ಟರ ಮಟ್ಟಿಗೆ ಸಾರ್ವತ್ರಿಕವಾಗಿದೆ ಎನ್ನುವುದನ್ನು ಕಾಣಲು ಬಯಸಿದ್ದೆವು. ಇದು ಯಾವುದೋ ಒಬ್ಬ ಹುಡುಗಿಯ ಕಥೆಯಲ್ಲ, ಬದಲಿಗೆ ಎಲ್ಲಾ ಹುಡುಗಿಯರ ಕಥೆಯಾಗಿದೆ.ನಾವಿದನ್ನು ಜಾಗತಿಕ ಪ್ರೇಕ್ಷಕರ ಮುಂದೆ ಪ್ರದರ್ಶಿಸಿದಾಗ ಎಲ್ಲ ಕಡೆಗಳಿಂಡ ನಮಗೆ  ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ" ಕಾರ್ತಿಕ್ ಹೇಳಿದ್ದಾರೆ.
"ಕನಸು ಕಾಣುವ ಯಾವುದೇ ಹುಡುಗಿಯೊಬ್ಬಳ ಕಥೆಯನ್ನು ಜೀರ್ಜಿಂಬೆಗೆ ಹೋಲಿಕೆ ಮಾಡಬಹುದು.ಕನಸು ಕಾಣುತ್ತಾ, ಸವಾಲನ್ನು ಎದುರಿಸುತ್ತಾ ಅವುಗಳನ್ನು ಮೀರುವ ಹುಡುಗಿಯೊಬ್ಬಳ ಜೀವನವನ್ನು ನಾವಿಲ್ಲಿ ಕಟ್ಟಿಕೊಟ್ಟಿದ್ದೇವೆ.
"ಹೆನ್ರಿ ಡೇವಿಡ್ ಥೊರೇನ್ ಅವರ ಉಕ್ತಿ - "ಪ್ರಕೃತಿ ಹಾಗೂ ಮಹಿಳೆ ಮಾತ್ರವೇ ಎಂತಹಾ ಪರಿಸ್ಥಿತಿಯನ್ನೂ ಎದುರಿಸಿ ಬದುಕಬಲ್ಲವು, ಏಕೆಂದರೆ ಆ ಇಬ್ಬರಲ್ಲಿ ಮಾತ್ರವೇ ನಿಜವಾದ ಆತ್ಮವಿಶ್ವಾಸ, ಇಚ್ಚೆಯನ್ನು ಹೊಂದಿರುತ್ತಾರೆ" ಇದು ನಮ್ಮ ಚಿತ್ರಕ್ಕೆ ಸ್ಪೂರ್ತಿಯಾಗಿದೆ." ಅವರು ಹೇಳಿದ್ದಾರೆ.
"ಪುಟ್ಟ ಪುಟ್ಟ ಶಾಲಾ ಬಾಲಕಿಯರು ಈ ಜೀರ್ಜಿಂಬೆಗಳನ್ನು ತಮ್ಮ ಪೆನ್ಸಿಲ್ ಬಾಕ್ಸ್ ಗಳಲ್ಲಿ ಇರಿಸಿಕೊಳ್ಳಲು ಬಯಸುತ್ತಾರೆ. ಇದು ಆಕರ್ಷಕವಾದ ರೆಕ್ಕೆ ಹೊಂದಿರಲಿದ್ದು ಹಾರುವಾಗ ಅತ್ಯಂತ ಸುಂದರ್ವಾಗಿ ಕಾನಿಸುತ್ತದೆ. ನಮ್ಮ ಕಥೆ ಸಹ ಇದೇ ಪರಿಕಲ್ಪನೆಯೊಡನೆ ಸಾಗುತ್ತದೆ. ರೆಕ್ಕೆಗಳು ಹಾರಲಿಕ್ಕಾಗಿ ಇದೆ. ಇದೇ ರೀತಿ ಮಕ್ಕಳಿಗೆ ಕನಸು ಕಾಣುವ ಸ್ವಾತಂತ್ರವಿದೆ.ಅವರ ಗುರಿಯನ್ನು ಅವರು ಆಯ್ಕೆ ಮಾಡಿಕೊಳ್ಳಲು ನಾವು ಅವಕಾಶ ನೀಡಬೇಕು. ಆದರೆ ನಾವು ಅವರ ಕನಸುಗಳನ್ನು ನನಸಾಗಿಸಲು ಬಿಡುವುದಿಲ್ಲ. ಅನೇಕ ಅಡ್ಡಿ ಆತಂಕಗಳನ್ನು ಒಡ್ಡುತ್ತೇವೆ’;
ಚಿತ್ರದಲ್ಲಿ ಸುಮನ್ ನಗರ್ ಕರ್ ನಟಿಸಿದ್ದು ಇನ್ನುಳಿದಂತೆ ಬಹುತೇಕ ಪಾತ್ರಗಳನ್ನು ಮಕ್ಕಳೇ ನಿರ್ವಹಿಸಿದ್ದಾರೆ, ನಿರ್ದೇಶಕರು ಹೇಳಿದಂತೆ ಇವರುಗಳು ರಂಗಭೂಮಿಯ ಹಿನ್ನೆಲೆ ಹೊಂದಿದ್ದಾರೆ.ನಾವು ಅವರನ್ನು ಗ್ರಾಮೀಣ್ ಅ ಭಾಗದಿಂಡ ಆಯ್ಕೆ ಮಾಡಿದ್ದು ಅವರನ್ನು ಚಿತ್ರದ ದೃಶ್ಯಗಳಿಗೆ ಹೊಂದಿಕೆಯಾಗುವಂತೆ ನಟಿಸಲು ಪ್ರೇರೇಪಿಸುವುದು ನಮಗೆ ಸವಾಲಿನ ಕೆಲಸವಾಗಿತ್ತು ಎಂದು ಅವರು ವಿವರಿಸಿದರು.
ಬಿಹೇವ್ ಪ್ರೊಡಕ್ಷನ್ಸ್ ಸಹಯೋಗದೊಡನೆ  ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.ಒತ್ಟು 34  ಜನರು ಈ ಚಿತ್ರಕ್ಕೆ ಬಂಡವಾಳ ತೊಡಗಿಸಿದ್ದಾರೆ.ಚಿತ್ರ ಭಾರತದಾದ್ಯಂತ ಬಿಡುಗಡೆಯಾಗುತ್ತಿದ್ದು ಕರ್ನಾಟಕದಲ್ಲಿ 50 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com