'ರೋಗ್' ನಾಯಕನ ಮುಂದಿನ ಕನ್ನಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳೋದು ಯಾರು?

ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಂಡಿದ್ದ "ರೋಗ್" ಚಿತ್ರದ ನಾಯಕ ಇಶಾನ್ ಸುದೀರ್ಘ ವಿರಾಮ ತೆಫ಼್ಗೆದುಕೊಂಡಿದ್ದಾರೆ. ಈ ವರ್ಷಾರಂಭದ....
ಇಶಾನ್
ಇಶಾನ್
ಬೆಂಗಳೂರು: ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಂಡಿದ್ದ "ರೋಗ್" ಚಿತ್ರದ ನಾಯಕ ಇಶಾನ್ ಸುದೀರ್ಘ ವಿರಾಮ ತೆಫ಼್ಗೆದುಕೊಂಡಿದ್ದಾರೆ. ಈ ವರ್ಷಾರಂಭದಲ್ಲಿ ತೆಲುಗಿನ ಕೆಲ ನಿರ್ದೇಶಕರೊಡನೆ ಚಿತ್ರಕಥೆ ಕುರಿತಂತೆ ಮಾತುಕತೆ ನಡೆಸಿದ್ದ ಇಶಾನ್ ಗೆ ಇದುವರೆಗೆ ಯಾವ ಚಿತ್ರವನ್ನೂ ಒಪ್ಪಿಕೊಳ್ಳುವ ಮನಸ್ಸಾಗಿಲ್ಲ.
ತೆಲುಗಿನ ಖ್ಯಾತ ನಿರ್ದೇಡಕ  ವಿಜಯ್ ಕುಮಾರ್ ಕೊಂಡ ಅವರೊಡನೆ ಸಹ ಇಶಾನ್  ಚರ್ಚಿಸಿದ್ದರು. ಆದರೆ ಇದೀಗ ನಮಗೆ ಸಿಕ್ಕಿರುವ ಮಾಹಿತಿಯಂತೆ ಇಶಾನ್ ಕನ್ನಡ ಚಿತ್ರವೊಂಡರಲ್ಲಿ ಕಾಣಿಸಿಕೊಳ್ಳಲು ಸಿದ್ದರಾಗಿದ್ದಾರೆ. 
ಈ ಚಿತ್ರಕ್ಕೆ ಅವರ ಸೋದರ ಸಿಆರ್ ಮನೋಹರ್ ಬಂಡವಾಳ ಹೂಡಲಿದ್ದು ಸೂಕ್ತ ಚಿತ್ರಕಥೆಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಇಶಾನ್ ಹರ್ಷ, ಪವನ್ ಒಡೆಯರ್ ಸೇರಿದಂತೆ ಹಲವು ನಿರ್ದೇಶಕರೊಡನೆ ಸಂಪರ್ಕ ಮಾಡಿದ್ದಾರೆ ಎನ್ನಲಾಗುತ್ತಿದೆ.ಇಬ್ಬರು ನಿರ್ದೇಶಕರೂ ಇಶಾನ್ ಗಾಗಿ ಉತ್ತಮ ಕಥೆ ಸಿದ್ದಪಡಿಸಿದ್ದು ಇದರಲ್ಲಿ ಒಂದನ್ನು ಇಶಾನ್ ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ಹೇಳಿದೆ.
ಸಧ್ಯ ಪವನ್ ಒಡೆಯರ್ ಪುನೀತ್ ರಾಜ್ ಕುಮಾರ್ ಅವರ "ನಟಸಾರ್ವಭೌಮ" ಚಿತ್ರದ ಶೂಟಿಂಗ್ ನಲ್ಲಿದ್ದು ಚಿತ್ರ ಅಂತಿಮ ಹಂತದಲ್ಲಿದೆ. ಇನ್ನು ಹರ್ಷ ಸಹ ನಿಖಿಲ್ ಕುಮಾರ್ ನಟಿಸಿರುವ "ಸೀತಾರಾಮ ಕಲ್ಯಾಣ" ಚಿತ್ರದ ನಿರ್ದೇಶನದಲ್ಲಿ ತೊಡಗಿದ್ದಾರೆ.
"ರೋಗ್" ನಾಯಕನಾದ ಇಶಾನ್ ಸುಮಾರು ಎರಡು ವರ್ಷಗಳ ಬಳಿಕ ತೆರೆಯ ಮೇಲೆ ಬರಲು ಉತ್ಸುಕರಾಗಿದ್ದು ಈ ಬಾರಿ ಗಟ್ಟಿಯಾದ ಸತ್ವವುಳ್ಳ ಕಥೆಯೊಂದನ್ನು ತರಲಿದ್ದಾರೆ ಎನ್ನಲಾಗಿದ್ದು ಇಶಾನ್ ಗಾಗಿ ಹರ್ಷ ಅಥವಾ ಪವನ್ ಒಡೆಯರ್ ಯಾರು ಆಕ್ಷನ್ ಕಟ್ ಹೇಳುತ್ತಾರೆ? ಇದರ ನಡುವೆ ಮೂರನೇ ನಿರ್ದೇಶಕರ ಆಯ್ಕೆ ನಡೆಯಲಿದೆಯೆ? ಎನ್ನುವ ಎಲ್ಲಾ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com