ಆರ್ ಜಿವಿ ನನ್ನಲ್ಲಿನ ಹಳೇಯ ಕಾಲದ ಲುಕ್ ಮತ್ತು ಅಭಿವ್ಯಕ್ತಿಸುವ ಕಣ್ಣುಗಳನ್ನು ಗುರುತಿಸಿದ್ದಾರೆ: ಇರಾ ಮೋರ್

ತನ್ನ ಕನಸನ್ನು ಈಡೇರಿಸಿಕೊಳ್ಳಲು 9ರಿಂದ 6 ಗಂಟೆಯವರೆಗಿನ ಕೆಲಸವನ್ನು ತೊರೆದು ಸಿನಿಮಾ ಕ್ಷೇತ್ರಕ್ಕೆ ...
ಧನಂಜಯ್ ಮತ್ತು ಇರಾ ಮೋರ್
ಧನಂಜಯ್ ಮತ್ತು ಇರಾ ಮೋರ್

ತನ್ನ ಕನಸನ್ನು ಈಡೇರಿಸಿಕೊಳ್ಳಲು 9ರಿಂದ 6 ಗಂಟೆಯವರೆಗಿನ ಕೆಲಸವನ್ನು ತೊರೆದು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟವರು ಭೈರವ ಗೀತಾ ನಾಯಕಿ ಇರಾ ಮೋರ್. ತನ್ನ ಬಾಲ್ಯದ ಕನಸನ್ನು ಈಡೇರಿಸಿಕೊಂಡರೂ ಕೂಡ ಇನ್ನೂ ಕನಸಿನಲ್ಲಿಯೇ ಜೀವಿಸುತ್ತಿದ್ದೇನೆ ಎನ್ನುತ್ತಾರೆ ಅವರು.

ನನ್ನ ತಂದೆ ತುಂಬಾ ಕಟ್ಟುನಿಟ್ಟಿನ ಮನುಷ್ಯ ಮತ್ತು ಇಡೀ ಕುಟುಂಬ ಶೈಕ್ಷಣಿಕ ಅರ್ಹತೆ ಹೊಂದಿರುವವರು. ನನ್ನ ತಂದೆ ವಕೀಲರು ಮತ್ತು ತಾಯಿ ಉಪನ್ಯಾಸಕಿ. ನನ್ನ ಸೋದರಿ ವೈದ್ಯೆ ಮತ್ತು ಸೋದರ ಎಂಜಿನಿಯರ್. ಹೀಗಾಗಿ ನಟನೆ ನನ್ನ ಕುಟುಂಬದಲ್ಲಿ ಯಾವತ್ತಿಗೂ ಯೋಚನೆಯೇ ಬರಲಿಲ್ಲ ಎನ್ನುತ್ತಾರೆ.

ಇರಾ ತನ್ನ ಸೋದರನ ಜೊತೆ ಎರಡು ಮೂರು ತಿಂಗಳು ಇದ್ದುಕೊಂಡು ಉದ್ಯೋಗ ಹುಡುಕುತ್ತಿರುವಾಗ ಮುಂಬೈಗೆ ಹೋಗುವ ಬಗ್ಗೆ ಸೋದರನಲ್ಲಿ ಮಾತನಾಡಿದ್ದರಂತೆ. ಅಲ್ಲಿಗೆ ಹೋಗಿ ಐಡಿಯಲ್ ಡ್ರಾಮಾ ಮನರಂಜನಾ ಕಂಪೆನಿಯಲ್ಲಿ ಸೇರಿಕೊಂಡರು. ಅಲ್ಲಿ ಮುಜೀಬ್ ಖಾನ್ ಅಡಿಯಲ್ಲಿ ಮಾರ್ಗದರ್ಶನ ಪಡೆದರು. ಅಲ್ಲಿಂದ ಸಿನಿಮಾ ಜಗತ್ತಿನ ಪಯಣ ಆರಂಭವಾಯಿತಂತೆ.

ನೌಕಾಪಡೆಯಲ್ಲಿ ಪರೀಕ್ಷೆ ಮುಗಿಸಿದ ನಂತರ ಎಂಜಿನಿಯರಿಂಗ್ ಮಾಡಬೇಕೆಂಬುದು ಇರಾ ಪೋಷಕರ ಕನಸಾಗಿತ್ತು. ಕಂಪೆನಿಯಲ್ಲಿ ಕೆಲಸ ಕೂಡ ಸಿಕ್ಕಿತ್ತು. ಮಗಳು ಎಂಜಿನಿಯರ್ ಆಗಿ ಮದುವೆಯಾಗಿ ಸೆಟ್ಲ್ ಆಗಬೇಕೆಂಬ ಬಯಕೆ ಹೆತ್ತವರದ್ದು. ಆದರೆ ಕೆಲಸದ ಆಫರ್ ಪತ್ರವನ್ನು ಮನೆಯವರಿಗೆ ತೋರಿಸದೆ ಚಿತ್ರಜಗತ್ತಿಗೆ ಕಾಲಿಟ್ಟರು.

ಜಾಟ್ ಸಮುದಾಯಕ್ಕೆ ಸೇರಿದ ನಮಗೆ ಅಂಜಿಕೆಯೆಂಬುದು ದೂರದ ಮಾತು. ಚಿತ್ರಜಗತ್ತಿನಲ್ಲಿ ಗಾಡ್ ಫಾದರ್ ಇಲ್ಲ, ಯಾರನ್ನು ಸಂಪರ್ಕಿಸಬೇಕೆಂದು ಗೊತ್ತಿರಲಿಲ್ಲ. ಥಿಯೇಟರ್ ಹಿನ್ನಲೆ ಸಹಾಯವಾಯಿತು ಎನ್ನುತ್ತಾರೆ ಇರಾ.

ಸಿನಿಮಾ ಎಂದು ಬಂದಾಗ ಭಾಷೆ. ಪ್ರದೇಶ ಮೀರಿ ನಿಂತ ಕಲೆ, ಉತ್ತಮ ಪ್ರೊಡಕ್ಷನ್ ಹೌಸ್ ನಲ್ಲಿ ಕೆಲಸ ಮಾಡಬೇಕೆಂಬ ಬಯಕೆ ಇತ್ತು. ಈ ಸಮಯದಲ್ಲಿ ರಾಮ್ ಗೋಪಾಲ್ ವರ್ಮಾ ಅವರ ಸಂಪರ್ಕವಾಯಿತು. ಅವರು ಭೈರವ ಗೀತೆಯ ಬಗ್ಗೆ ಹೇಳಿದರು. ನನಗೆ ಮೊದಲ ಚಿತ್ರದಲ್ಲಿಯೇ ಉತ್ತಮ ತಂಡ, ಸಿನಿಮಾ, ಪಾತ್ರ ಮತ್ತು ಸಂಭಾವನೆ ಸಿಕ್ಕಿದೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಕಲಾವಿದರಲ್ಲಿ ಪ್ರತಿಭೆಯನ್ನು ಗುರುತಿಸುವ ರಾಮ್ ಗೋಪಾಲ್ ವರ್ಮಾ ಇರಾರಲ್ಲಿ ಹಳೆಯ ಕಾಲದ ನಟಿಯರ ಹೋಲಿಕೆಯನ್ನು ಗುರುತಿಸಿದರಂತೆ. ನನ್ನಲ್ಲಿ ಸಿನಿಮಾಕ್ಕೆ ಬೇಕಾದ ಆದರ್ಶ ಮುಖ ಮತ್ತು ಅಭಿವ್ಯಕ್ತಗೊಳಿಸುವ ಕಣ್ಣುಗಳನ್ನು ಗುರುತಿಸಿದ್ದಾರೆ ಎನ್ನುವ ಇರಾ ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮತ್ತು ನಿರ್ಮಾಣದ ಎಲ್ಲಾ ಚಿತ್ರಗಳನ್ನು ನೋಡಿದ್ದಾರಂತೆ.
ಡಾಲಿ ಧನಂಜಯ್ ನಾಯಕ ನಟನಾಗಿ ನಟಿಸಿರುವ ಭೈರವಗೀತವನ್ನು ಸಿದ್ದಾರ್ಥ ತಾತೋಲು ನಿರ್ದೇಶಿಸಿದ್ದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com