ಮೀಟೂ ಆರೋಪ: ಗಾಯಕಿ ಚಿನ್ಮಯಿ ಶ್ರೀಪಾದ್ ಗೆ ತಮಿಳುನಾಡು ಡಬ್ಬಿಂಗ್ ಯೂನಿಯನ್ ಗೇಟ್ ಪಾಸ್

ಮೀಟೂ ಆರೋಪ ಮಾಡಿದ್ದ ಗಾಯಕಿ, ಕಂಠದಾನ ಕಲಾವಿದೆ ಚಿನ್ಮಯಿ ಶ್ರೀಪಾದ ಅವರಿಗೆ ತಮಿಳುನಾಡು ಡಬ್ಬಿಂಗ್ ಯೂನಿಯನ್ ಗೇಟ್ ಪಾಸ್ ನೀಡಿದೆ. ..
ಚಿನ್ಮಯಿ ಶ್ರೀಪಾದ
ಚಿನ್ಮಯಿ ಶ್ರೀಪಾದ
ಚೆನ್ನೈ: ಮೀಟೂ ಆರೋಪ ಮಾಡಿದ್ದ ಗಾಯಕಿ, ಕಂಠದಾನ ಕಲಾವಿದೆ ಚಿನ್ಮಯಿ ಶ್ರೀಪಾದ ಅವರಿಗೆ ತಮಿಳುನಾಡು ಡಬ್ಬಿಂಗ್ ಯೂನಿಯನ್ ಗೇಟ್ ಪಾಸ್ ನೀಡಿದೆ. 
ಹಿರಿಯ ಗೀತರಚನೆಕಾರ ವೈರಮುತ್ತು ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಅಕ್ಟೋಬರ್ 9 ರಂದು ಕಿರುತೆರೆ ಕಲಾವಿದರು ಹಾಗೂ ಡಬ್ಬಿಂಗ್ ಕಲಾವಿದರ ಸಂಘದ ಮುಖ್ಯಸ್ಥ ರಾಧಾ ರವಿ ಅವರ ವಿರುದ್ಧವೂ ಚಿನ್ಮಯಿ ಟ್ವೀಟ್ ಮಾಡಿದ್ದರು. ನನ್ನ ಡಬ್ಬಿಂಗ್ ಕೆರಿಯರ್ ಹೊಗೆ ಹಾಕಿಸಿಕೊಳ್ಳಲಿದೆ ಏಕೆಂದರೇ ರಾಧಾರವಿ ಡಬ್ಬಿಂಗ್ ಯೂನಿಯನ್ ಮುಖ್ಯಸ್ಥರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
ಸದ್ಯ ಅಮೆರಿಕಾದಲ್ಲಿ ಸಂಗೀತ ಕಾರ್ಯಕ್ರಮ ಪ್ರವಾಸದಲ್ಲಿರುವ ಚಿನ್ಮಯಿ ಟ್ವಿಟ್ಟರ್ ನಲ್ಲಿ ಈ ವಿಷಯ ತಿಳಿಸಿದ್ದಾರೆ. ತಾವು ಡಬ್ಬಿಂಗ್ ಕಲಾವಿದರ ಸಂಘದ ಸದಸ್ಯೆಯಾಗಿದ್ದು, ನನ್ನೊಂದಿಗೆ ಚರ್ಚಿಸದೇ ನನ್ನ ಸದಸ್ಯತ್ವ ರದ್ಧುಪಡಿಸಲಾಗಿದೆ.ಕೇವಲ ಮೆಸೇಜ್ ಮಾತ್ರ ಕಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಮುಂದೆ ಚಿನ್ಮಯಿ ಯಾವುದೇ ತಮಿಳು ಸಿನಿಮಾ ಡಬ್ಬಿಂಗ್ ಮಾಡುವ ಆಗಿಲ್ಲ, ಈ ನಿಯಮ ಸದ್ಯದಿಂದಲೇ ಜಾರಿಗೆ ಬರಲಿದೆ.ತಮಿಳು ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡಬೇಕೆಂದರೇ ಡಬ್ಬಿಂಗ್ ಯೂನಿಯನ್ ಸದಸ್ಯತ್ವ ಕಡ್ಡಾಯ. 
ಇತ್ತಿಚೆಗೆ ತೆರೆಕಂಡ 96 ಸಿನಿಮಾದಲ್ಲಿ ತ್ರಿಷಾ ಕೃಷ್ಣಾ ಅವರಿಗೆ ಚಿನ್ಮಯಿ ಕಂಠದಾನ ಮಾಡಿದ್ದರು.
 ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಚಿನ್ಮಯಿ 96 ಬಹುಶಃ ನನ್ನ ಕೊನೆಯ ಸಿನಿಮಾ ಎಂದು ಬರೆದುಕೊಂಡಿದ್ದಾರೆ.
ಈ ಸಂಬಂಧ ಖಾಸಗಿ ವೆಬ್ ಸೈಟ್ ಗೆ ಪ್ರತಿಕ್ರಿಯೆ ನೀಡಿರುವ  ರಾಧಾ ರವಿ, ಆಕೆ ಕಳೆದ ಎರಡು ವರ್ಷಗಳಿಂದ ಸದಸ್ಯತ್ವ ಶುಲ್ಕ ಕಟ್ಟಿಲ್ಲ, ಹೀಗಾಗಿ ಸದಸ್ಯತ್ವ ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
2006 ರಿಂದ ಡಬ್ಬಿಂಗ್ ಕಲಾವಿದೆಯಾಗಿ ಕೆಲಸ ಮಾಡುತ್ತಿರುವ ಚಿನ್ಮಯಿ ಅವರಿಗೆ ಎಲ್ಲಾ ರೀತಿಯ ವಿನಾಯಿತಿ ನೀಡಲಾಗಿತ್ತು ಎಂದು ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com