ಅಂಬರೀಶ್
ಸಿನಿಮಾ ಸುದ್ದಿ
ವಯಸ್ಸಾಯ್ತು ಅಂದ್ಕೋಬೇಡಿ ಎಂದಿದ್ದ ಅಂಬಿ ಅಭಿಮಾನಿಗಳಿಗಾಗಿ ಕೈಬರಹದಲ್ಲೇ ಪತ್ರ ಬರೆದಿದ್ರು!
ಕನ್ನಡ ಕಲಾಭಿಮಾನಿಗಳ ಪಾಲಿನ ಕಲಿಯುಗದ ಕರ್ಣನಾಗಿದ್ದ ಅಂಬರೀಶ್ ಇಂದು (ಶನಿವಾರ) ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ ಆದರೆ ಅವರು ತಮ್ಮ ಅಭಿಮಾನಿಗಳಿಗೆ ತೋರುತ್ತಿದ್ದ.....
ಬೆಂಗಳೂರು: ಕನ್ನಡ ಕಲಾಭಿಮಾನಿಗಳ ಪಾಲಿನ ಕಲಿಯುಗದ ಕರ್ಣನಾಗಿದ್ದ ಅಂಬರೀಶ್ ಇಂದು (ಶನಿವಾರ) ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ ಆದರೆ ಅವರು ತಮ್ಮ ಅಭಿಮಾನಿಗಳಿಗೆ ತೋರುತ್ತಿದ್ದ ಪ್ರೀತಿ, ಆದರ ಎಂದಿಗೂ ಮರೆಯಲು ಸಾಧ್ಯವಿಲ್ಲ.
ಇಂತಹಾ ಅಂಬಿ "ಅಂಬಿ ನಿಂಗ್ ವಯಸ್ಸಾಯ್ತೋ" ಚಿತ್ರಕ್ಕಾಗಿ ತಮ್ಮ ಕೈಬರಹದಲ್ಲೇ ಅಭಿಮಾನಿಗಳಿಗೆ ಪ್ರೀತಿಯ ಪತ್ರವನ್ನೂ ಬರೆದಿದ್ದರು! 20 ವರ್ಷಗ:ಳ ನಂತರ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದ ಅಂಬಿ ನಿಂಗ್ ವಯಸ್ಸಾಯ್ತೊ' ಚಿತ್ರದ ಟೀಸರ್ ನಲ್ಲಿ ಅವರು ಬರೆದ ಪತ್ರವಿತ್ತು.
ಅಂಬರೀಶ್ ಚಿತ್ರ ಜೀವನದ ಬಗೆಗೆ ವಿವರಿಸಿರುವ ಈ ಪತ್ರದ ಪ್ರತಿಯನ್ನು ಅವರು ರಾಜಕಾರಣಿಗಳು, ಚಲನಚಿತ್ರ ನಿರ್ಮಾಪಕರು ಸೇರಿದಂತೆ ತಮ್ಮ ಆತ್ಮೀಯರಿಗೆ ಕಳಿಸಿದ್ದರು.
ಪತ್ರದಲ್ಲಿ ಅವರು ಹೀಗೆ ಬರೆದಿದ್ದರು-
"ಎಲ್ರಿಗೂ ನಮಸ್ಕಾರ, ಇದೇನಪ್ಪಾ ಅಂಬರೀಶ್ ಅವ್ರು ನಮಸ್ಕಾರ ಅಂತಿದ್ದಾರೆ, ಅವರಿಗೆ ವಯಸ್ಸಾಯ್ತು ಅಂದ್ಕೋಬೇಡಿ. ತುಂಬಾ ವರ್ಷದ ನಂತ್ರ ನಿಮ್ ಜತೆ ಈ ಪತ್ರದ ಮುಖಾಂತ್ರ ಮಾತಾಡ್ಬೇಕು ಅನ್ನಿಸ್ತು. ಅದಕ್ಕೊಂದು ಕಾರಣನೂ ಇದೆ.
ಹುಟ್ಯಿದ್ದು ಮಂಡ್ಯ, ಕುಡಿದಿದ್ದು ಕಾವೇರಿ, ಹುಟ್ಟಿದಾಗ ಅಮರನಾಥ್ ಆಗಿದ್ದ ನಾನು ಬೆಳಿತಾ ಬೆಳೀತಾ ನಿಮ್ಮೆಲ್ಲರ ಅಂಬರೀಶ್ ಆದೆ. ಪುಟ್ಟಣ್ಣನ ಜಲೀಲನ ಪಾತ್ರ ಮಾಡ್ತಾ ಮಾಡ್ತಾ ನನಗೇ ಗೊತ್ತಿಲ್ದೆ ನನ್ನೊಳಗೊಬ್ಬ ಪರಿಪೂರ್ಣ ಕಲಾವಿದ ಬೆಳೀತಾ ಹೋದ ಹಿಂದಿನ ೪೫ ವರ್ಷದ್ ಕಾಲ ನೀವು ನನ್ ಮೇಲಿಟ್ಟ ಪ್ರೀತಿ, ಅಭಿಮಾನದಿಂದ ಕೊತ್ಟ ಬಿರುದು "ರೆಬೆಲ್ ಸ್ಟಾರ್"
ಇಷ್ಟ ಪಟ್ಟ ಹುಡ್ಗಿ ಜತೆ ಮದ್ವೆ ಆಯ್ತು, ಮಗ ಹುಟ್ಟಿದ. ಜೀವನ ನಿಧಾನವಾಗಿ ರಾಜಕೀಯದ ಕಡೆ ಹರೀತು.ಜನಸೇವೆ ಮಾಡ್ತಾ ಬಂದೆ, ಸಿನಿಮಾ ನಟನೇನ ಏನ್ ಬಿಡ್ಲಿಲ್ಲ.
ಚಿತ್ರರಂಗದ ಆತ್ಮೀಯರು, ಹಿರೇಕರ ಒತ್ತಾಯಕ್ಕೆ, ಪ್ರೀತಿಗೆ ಸೋತು ಅಲ್ಲೊಂದ್ ಇಲ್ಲೊಂದು ಪಾತ್ರ ಮಾಡ್ತಿದ್ದೆ. ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗಲೂ ನನ್ನೊಳಗಿನ ಕಲೆ ಹಾಗೇ ಇತ್ತು. ಆಗ ಹುಟ್ಟಿಕೊಂಡದ್ದೇ ಈ ಚಡವಡಿಕೆ, ಒಳ್ಳೇ ಪಾತ್ರಗಳನ್ನು ಮಾಡೋ ಚಡವಡಿಕೆ.ವಯಸ್ಸಿಗೊಪ್ಪುವ ಪರಿ[ಪೂರ್ಣವಾದ ಪಾತ್ರವನ್ನು ಮಾಡೋ ಚಶವಡಿಕೆ.
ಆಗ ಜತೆಯಾದವನು ಮಗನಂತಹಾ ಗೆಳೆಯ ಸುದೀಪ. ಇನ್ನೇನು ಇಬ್ರೂ ಸೇರ್ಕಂಡು ನಿಮ್ಮ ಇಡೀ ಕುಟುಂಬ ಜತೆ ಕುಳಿತು ನೋಡುವ ಚಿತ್ರ ಮಾಡುವುದಾಗಿ ನಿಶ್ಚಯ ಂಆಡಿದ್ದೀವಿ. ಇನ್ನೇನು ತಡ ಇಲ್ಲ, ಆದಷ್ಟು ಬೇಗ...."

