ಕನ್ನಡ ಚಿತ್ರೋದ್ಯಮದ ಸಮಸ್ಯೆಗಳ ಇತ್ಯರ್ಥಕ್ಕೆ ಅಂಬರೀಷ್ 'ಸುಪ್ರೀಂ ಕೋರ್ಟ್'!

ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಬಂದರೂ ಅಂಬರೀಷ್ ಅಲ್ಲಿ ಹಾಜರ್, ಅವರ ಮದ್ಯಸ್ಥಿಕೆಯಿಲ್ಲದೇ ಯಾವುದೇ ಸಮಸ್ಯೆಗಳು ಬಗೆ ಹರಿಯುತ್ತಿರಲಿಲ್ಲ, ಹಲವು ...
ಅಂಬರೀಷ್ ಮತ್ತು ಶೃತಿ ಹರಿಹರನ್
ಅಂಬರೀಷ್ ಮತ್ತು ಶೃತಿ ಹರಿಹರನ್
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಬಂದರೂ ಅಂಬರೀಷ್ ಅಲ್ಲಿ ಹಾಜರ್, ಅವರ ಮದ್ಯಸ್ಥಿಕೆಯಿಲ್ಲದೇ ಯಾವುದೇ ಸಮಸ್ಯೆಗಳು ಬಗೆ ಹರಿಯುತ್ತಿರಲಿಲ್ಲ, ಹಲವು ಕೇಸ್ ಗಳನ್ನು ಸ್ವತಃ ತಾವೇ ನಿಂತು ಬಗೆಹರಿಸಿದ್ದಾರೆ.
ಅವರು ಯಾವ ರೀತಿ ಸಮಸ್ಯೆ ಬಗೆ ಹರಿಸುತ್ತಿದ್ದರು ಎಂಬ ಬಗ್ಗೆ ಕನ್ನಡ ಸಿನಿಮಾ ನಿರ್ಮಾಪಕ ಸಾ,ರಾ ಗೋವಿಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ, ಮೊದಲು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದರು, ನಂತರ ನ್ಯಾಯ ಒದಗಿಸುತ್ತಿದ್ದರು,ಎಲ್ಲರೂ ಅವರ ಮಾತಿಗೆ ತಲೆಬಾಗುತ್ತಿದ್ದರು. ಹೀಗಾಗಿ ಅವರು ಕನ್ನಡ ಚಿತ್ರೋದ್ಯಮದ ಸುಪ್ರೀಂ ಕೋರ್ಟ್ ಆಗಿದ್ದರು.
2011 ರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಟಿ ರಮ್ಯಾ ಗೆ ನಿಷೇಧ ಹೇರಿತ್ತು, ದಂಡಂ ದಶಗುಣಂ ನಿರ್ಮಾಪಕ ಹಾಗೂ ರಮ್ಯ. ನಡುವಿನ ಕಿತ್ತಾಟದಿಂದಾಗಿ ರಮ್ಯಾ ಅವರನ್ನು ಬ್ಯಾನ್ ಮಾಡಲಾಗಿತ್ತು, ಆಗ ಮಧ್ಯ ಪ್ರವೇಶಿಸಿದ ಅಂಬರೀಷ್ ನಿರ್ಮಾಪಕ ಎ,ಗಣೇಶ್ ಅವರ ಮನೆಗೆ ತೆರಳಿ ಮಾತುಕತೆ ಮಾಡಿ ರಮ್ಯಾ ಗೆ ಹೇರಿದ್ದ ನಿಷೇಧ ತೆರವುಗೊಳಿಸಿದರು.
2012 ರಲ್ಲಿ ನಿರ್ಮಾಪಕರುಗಳಾಗ ಮುನಿರತ್ನ ಮತ್ತು ಕೆ. ಮಂಜು ಅವರ ಸಿನಿಮಾಗಳಾದ ಗಾಡ್ ಫಾದರ್ ಮತ್ತು ಕಠಾರಿ ವೀರ ಸುರ ಸುಂದರಾಂಗಿ ಸಿನಿಮಾ ರಿಲೀಸ್ ಗೆ ಸಂಬಂಧಿಸಿದಂತೆ ಉಂಟಾಗಿದ್ದ ಸಮಸ್ಯೆಗೆ ಕ್ಷಣ ಮಾತ್ರದಲ್ಲಿ ಪರಿಹಾರ ಸೂಚಿಸಿದ್ದರು,
ಇತ್ತೀಚೆಗೆ ನಟಿ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿದ್ದ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ಅಂಬರೀಷ್ ಮಧ್ಯಸ್ಥಿಕೆ ವಹಿಸಿದ್ದರು.ಅದೆ ಅವರ ಕೊನೆಯ ಕೇಸ್ ಆಗಿತ್ತು. ಕೋರ್ಟ್ ಗೆ  ಹಾಗೂ ಮಾಧ್ಯಮಗಳ ಬಳಿಗೆ ಹೋಗದಂತೆ ಇಬ್ಬರಿಗೂ ಅಂಬರೀಷ್ ಸಲಹೆ ನೀಡಿದ್ದರು. ಆದರೆ ಅಂಬರೀಷ್ ಮದ್ಯ ಪ್ರವೇಶಿಸಿದರೂ ಬಗೆ ಹರಿಯದೇ ಉಳಿದುಕೊಂಡ ಅಪರೂಪದ ಪ್ರಕರಣ ಇದಾಗಿದೆ,
ಕೇವಲ ಚಲನಚಿತ್ರರಂಗದ ಸಮಸ್ಯೆಗಳು ಮಾತ್ರವಲ್ಲ, ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ದಂಪತಿ ನಡುವಿನ ಜಗಳದಲ್ಲೂ ಅಂಬರೀಷ್ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆ ಹರಿಸಿದ್ದರು. 
ಅಂಬರೀಷ್ ಅವರಿಗೆ ಮೊದಲ ಪ್ರೀತಿ ಸಿನಿಮಾ ಕಡೆಗೆ ನಂತರ ರಾಜಕೀಯ, ಸಿನಿಮಾ ರಂಗದಲ್ಲಿ ಏನಾದರೂ ಸಮಸ್ಯೆ ಶುರುವಾದರ್ ಅಂಬರೀಶ್ ಅಲ್ಲಿಗೆ ಬರುತ್ತಿದ್ದರು ಎಂದು ಅಂಬರೀಷ್ ಅವರ ಜೊತೆ ದಶಕಗಳ ಕಾಲ ಸ್ನೇಹ ಹೊಂದಿದ್ದ ಕೆಎಫ್ ಸಿಸಿ ಅಧ್ಯಕ್ಷ ಚಿನ್ನೇಗೌಡ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com