'ಉಡಾಫೆ ಮುಖ್ಯಮಂತ್ರಿ'- ಅನಿರುದ್ಧ್: ನಮ್ಮ ಮೇಲೆ ದಬ್ಬಾಳಿಕೆ ಬೇಡ; ಕುಮಾರಸ್ವಾಮಿ ತಿರುಗೇಟು

ಡಾ. ವಿಷ್ಣು ವರ್ಧನ್ ಅವರ ಸ್ಮಾರಕ ನಿರ್ಮಿಸುವ ವಿಚಾರದಲ್ಲಿ ಸರ್ಕಾರ ಹುಡುಗಾಟಿಕೆಯಾಡುತ್ತಿದೆ, ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸ್ಮಾರಕ ...
ವಿಷ್ಣು ವರ್ಧನ್, ಅನಿರುದ್ಧ್, ಸಿಎಂ ಕುಮಾರ ಸ್ವಾಮಿ
ವಿಷ್ಣು ವರ್ಧನ್, ಅನಿರುದ್ಧ್, ಸಿಎಂ ಕುಮಾರ ಸ್ವಾಮಿ
ಬೆಂಗಳೂರು:  ಸಾಹಸ ಸಿಂಹ ವಿಷ್ಣು ವರ್ಧನ್   ಅವರ ಸ್ಮಾರಕ ನಿರ್ಮಿಸುವ ವಿಚಾರದಲ್ಲಿ ಸರ್ಕಾರ ಹುಡುಗಾಟಿಕೆಯಾಡುತ್ತಿದೆ, ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸ್ಮಾರಕ ನಿರ್ಮಾಣ ಮಾಡಲಿ ಅಂತಾ  ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಗುಡುಗಿದ್ದಾರೆ.
ಅನಿರುದ್ಧ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ, ಕಲಾವಿದರು ಮಾಡಿದ ಕೆಲಸಕ್ಕೆ ಸರ್ಕಾರ ಗೌರವ ಕೊಟ್ಟಿದ್ದೇವೆ .ವಿಷ್ಣುವರ್ಧನ್ ಅವರು ನಿಧನರಾದಾಗ ನಾನು ಸಿಎಂ ಆಗಿರಲಿಲ್ಲ. ನಿಧನದ ಸುದ್ದಿ ತಿಳಿದಾಗ ನಾನು ಅವರ ಮನೆಗೆ ಹೋಗಿ ದರ್ಶನ ಪಡೆದಿದ್ದೇನೆ. ಆ ವೇಳೆ ಭಾರತಿ ವಿಷ್ಣುವರ್ಧನ್ ಮತ್ತು ನಟ ಶಿವರಾಂ ಅವರಲ್ಲಿ ಅಂತ್ಯಕ್ರಿಯೆ ಸಿದ್ಧತೆ ಬಗ್ಗೆ ಕೇಳಿದ್ದೇನೆ.
ಅಂದು ಅವರು ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು. ವಿಷ್ಣುವರ್ಧನ್ ಓರ್ವ ದೊಡ್ಡ ಕಲಾವಿದರಾಗಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಿದರೇ ತಪ್ಪಾಗುತ್ತದೆ. ಅಂದು ಅಂಬರೀಶ್ ಅವರ ಜೊತೆ ಮಾತನಾಡಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಬೇಡ ಅಂತಾ ಹೇಳಿ ಸರ್ಕಾರಕ್ಕೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದೆ. 
ಆದರೆ ಇಂದು ವಿಷ್ಣುವರ್ಧನ್ ಅಳಿಯ ಉಡಾಫೆ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿರುವುದು ನನಗೆ ನೋವು ತಂದಿದೆ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ಬೇಡ. ಕೂಚು ಮಾತುಕತೆ ನಡೆಸಿ ಚರ್ಚಿಸೋಣ, ಆಗನತ್ಯವಾಗಿ ವಿವಾದ ಸೃಷ್ಟಿಸುವುದು ಬೇಡ ಎಂದು ಸಿಎಂ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com