ಸೂರಿ ಉತ್ತಮವಾದದ್ದೇ ನೀಡುತ್ತಾರೆ, ಅವರ ಪ್ರಸ್ತಾಪಕ್ಕೆ ನಾನು 'ನೋ' ಎನ್ನಲಾಗಲಿಲ್ಲ: ನವೀನ್

ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ ಸೂರಿ ಮತ್ತೊಂದು ಅಚ್ಚರಿಗೆ ಕಾರಣವಾಗಿದ್ದಾರೆ. ತಮ್ಮ ಮುಂದಿನ ಚಿತ್ರ "ಸೂರಿ ಪಾಪ್ಕಾರ್ನ್ ಮಂಕಿ ಟೈಗರ್" ಗಾಗಿ ಸ್ಯಾಂಡಲ್ ವುಡ್ ನಟ, ನಿರ್ಮಾಪಕ.....
ನವೀನ್
ನವೀನ್
Updated on
ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ ಸೂರಿ ಮತ್ತೊಂದು ಅಚ್ಚರಿಗೆ ಕಾರಣವಾಗಿದ್ದಾರೆ. ತಮ್ಮ ಮುಂದಿನ ಚಿತ್ರ "ಸೂರಿ ಪಾಪ್ಕಾರ್ನ್ ಮಂಕಿ ಟೈಗರ್" ಗಾಗಿ ಸ್ಯಾಂಡಲ್ ವುಡ್ ನಟ, ನಿರ್ಮಾಪಕ ನವೀನ್ ಅನ್ನು ಮತ್ತೆ ತೆರೆ ಮೇಲೆ ತೋರಿಸಲು ಸಜ್ಜಾಗಿದ್ದಾರೆ.
ಕೆಪಿ ಶ್ರೀಕಾಂತ್ ನಿರ್ಮಾಣದ "ಸೂರಿ ಪಾಪ್ಕಾರ್ನ್...." ನಲ್ಲಿ ತಮಿಳಿನ "ಕಾದಲೇ ಏನ್ ಕಾದಲೇ" ಕನ್ನಡದ "ನಾಯಕ" ದಂತಹಾ ಚಿತ್ರಗಳಲ್ಲಿ ನಟಿಸಿದ್ದ "ರೋಮಿಯೋ", "ಚೆಡ್ಡಿ ದೋಸ್ತ್" ಚಿತ್ರಗಳನ್ನು ನಿರ್ಮಿಸಿದ್ದ ನವೀನ್ ಮತ್ತೆ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದಲ್ಲಿ ಅವರೊಬ್ಬ ಪ್ರತಿನಾಯಕನ ಪಾತ್ರಧಾರಿಯಾಗಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ.
ಧನಂಜಯ್ ನಾಯಕನಾಗಿರುವ ಈ ಚಿತ್ರಕ್ಕೆ ಸೂರಿ ಹೆಚ್ಚಾಗಿ ಹೊಸ ಮುಖಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ನಿವೇದಿತಾ, ಅಮೃತಾ, ಸಪ್ತಮಿ ಹಾಗೂ ಅಮಿತ್ ಸೇರಿದ್ದಾರೆ.
"ನಾನು ಮತ್ತೆ ನಟನಾ ಕ್ಷೇತ್ರಕ್ಕೆ ಬಂದಿದ್ದೇನೆ, ನನಗಿದು ಮತ್ತೆ ಹೊಸ ಅನುಭವ, ಭವಿಷ್ಯದಲ್ಲಿ ನಾನೇನಾಗುತ್ತೇನೆ ಎನ್ನುವುದು ತಿಳಿದಿಲ್ಲ. ಆದರೆ ನಾನೆಂದಿಗೂ ಉತ್ತಮ ನಟನಾಗಲು ಬಯಸುತ್ತೇನೆ.ನಾನೆಂದೂ ನಿರ್ಮಾಪಕನಾಗಲು ಬಯಸಿರಲಿಲ್ಲ. ಆದರೆ ಬದುಕು ಒಂದು ಅನಿರೀಕ್ಷಿತಗಳ ಆಗರವಾಗಿದ್ದು ಅದುವೇ ನನ್ನನ್ನು ನಿರ್ಮಾಪಕನನ್ನಾಗಿ ಮಾಡಿತು. ಸೂರಿ ತಮ್ಮ ಮುಂದಿನ ಚಿತ್ರಕ್ಕಾಗಿ ನನ್ನನ್ನು ಕೇಳಿದಾಗ ನಾನು "ಇಲ್ಲ" ಎನ್ನಲಾಗಲಿಲ್ಲ. ಅಲ್ಲದೆ ನಾನು ಮತ್ತೆ ಎರಡನೇ ಬಾರಿ ಆಲೋಚಿಸದೆ ಅವಕಾಶವನ್ನು ಒಪ್ಪಿಕೊಂಡಿದ್ದೆ" ನವೀನ್ ಹೇಳಿದ್ದಾರೆ.
"ಸೂರಿ ದಕ್ಷಿಣ ಭಾರತದ ಖ್ಯಾತ ನಿರ್ದೇಶಕರಾಗಿದ್ದು ಅವರು ಹೊಸ ಚಿತ್ರಗಳನ್ನು ನಿರ್ದೇಶಿಸುತ್ತಾರೆ ಎಂದರೆ ಅವರನ್ನು ಯಾರೂ ಪ್ರಶ್ನಿಸಲಾಗುವುದಿಲ್ಲ.ಏಕೆಂದರೆ ಸೂರಿ ಯಾವಾಗಲೂ "ಔಟ್ ಆಫ್ ದಿ ಬಾಕ್ಸ್" ಯೋಚಿಸುತ್ತಾರೆ ಎನ್ನುವುದು ಪ್ರತಿಯೊಬ್ಬರಿಗೆ ಗೊತ್ತು. ಹೀಗಾಗಿ ನನಗೆ ಸಹ ತಿಳಿದಿದೆ. ಸೂರಿ ಎಂದಿಗೂ ನಮಗೆ ಉತ್ತಮವಾದ ಅವಕಾಶವನ್ನೇ ಒದಗಿಸುತ್ತಾರೆ. ನಾನು ಅದಕ್ಕಾಗಿ ಹೆಚ್ಚು ತಲೆಕೆಡಿಸಿಕೊಳ್ಳದೆ ಸೂರಿಯೊಡನೆ ಒಂದಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದೇನೆ"
ಇಷ್ಟಕ್ಕೂ ನವೀನ್ ಗೆ ಚಿತ್ರದಲ್ಲಿ ತಮ್ಮ ಪಾತ್ರದ ಕುರಿತಂತೆ ಇನ್ನೂ ಪೂರ್ಣ ಚಿತ್ರಣ ಸಿಕ್ಕಿಲ್ಲ "ನಾನು ಈಗಲೇ ಏನನ್ನೂ ಹೇಳಲಾರೆ. ಆದರೆ ನಾನು ಸೂರಿಯೊಡನೆ ಕೆಲಸ ಮಾಡುವುದಕ್ಕೆ ನಿರ್ಧರಿಸಿದ್ದಾಗಿದೆ. ಟೀಂ ಇಂಡಿಯಾ ಕ್ರಿಕೆಟರ್ ಗಳಂತೆ ಮೈದಾನಕ್ಕೆ ಇಳಿದಿದ್ದೇನೆ. ಎಷ್ಟು ರನ್ ಬಾರಿಸುತ್ತೇನೆ, ಅಂತಿಮವಾಗಿ ಯಾವ ರೂಈಪ್ತಿಯ ಚಿತ್ರ ಮೂಡಿ ಬರಲಿದೆ ಗೊತ್ತಿಲ್ಲ. ಆದರೆ ಸೂರಿ ಎಂದಿಗೂ ಉತ್ತಮವಾದದ್ದನ್ನೇ ನೀಡುತ್ತಾರೆ ಎನ್ನುವುದು ನನ್ನ ಭರವಸೆ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com