ನಡುವೆ ಅಂತರವಿರಲಿ
ನಡುವೆ ಅಂತರವಿರಲಿ

ಕಾಲೇಜು ವಿದ್ಯಾರ್ಥಿಗಳ ಮನಸ್ಸಿನಲ್ಲಿರುವ ಗೊಂದಲ ನನ್ನಲ್ಲೂ ಇದೆ: ಪ್ರಖ್ಯಾತ್ ಪರಮೇಶ್

22 ವರ್ಷದ ಪ್ರಖ್ಯಾತ್ ಪರಮೇಶ್, ನಾಯಕನಾಗಿ ತಾವು ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ’ನಡುವೆ ಅಂತರವಿರಲುಇ’ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
Published on
ಬೆಂಗಳುರು: 22 ವರ್ಷದ ಪ್ರಖ್ಯಾತ್ ಪರಮೇಶ್, ನಾಯಕನಾಗಿ ತಾವು ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ’ನಡುವೆ ಅಂತರವಿರಲಿ’ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಪ್ರಖ್ಯಾತ್ ಗೆ ಕಾಲೇಜು ವಿದ್ಯಾಭ್ಯಾಸ ಹಾಗು ಶೂಟಿಂಗ್ ಎರಡರ ನಡುವೆ ಸಾಮರಸ್ಯ ಸಾಧಿಸುವ ಸವಾಲಿದೆ. ರವೀನ್ ಕುಮಾರ್ ನಿರ್ದೇಶನದ ಈ ಚಿತ್ರದ ಮೂಲಕ ಚಿತ್ರೋದ್ಯಮದಲ್ಲಿ ಗಟ್ಟಿ ನೆಲೆಯೂರುವ ವಿಶ್ವಾಸದಲ್ಲಿ ಪ್ರಖ್ಯಾತ್ ಇದ್ದಾರೆ. ಐಷಾನಿ ಶೆಟ್ಟಿ ನಾಯಕಿಯಾಗಿರುವ ಈ ಚಿತ್ರದಲ್ಲಿ ಪ್ರಖ್ಯಾತ್ ತಮ್ಮ ಕಾಲೇಜು ಸಹಪಾಠಿಗಳು, ಗುರುಗಳ ಬೆಂಬಲ ಬಯಸಿದ್ದಾರೆ.
"ನಾನೊಂದು ಹೊಸ ಪ್ರಯತ್ನದಲ್ಲಿದ್ದೇನೆ, ಎಲ್ಲರೂ ನನ್ನನ್ನು ತೆರೆ ಮೇಲೆ ಕಾಣಲು ಬಹಳವೇ ಆಸಕ್ತಿಯನ್ನು ತೋರುತ್ತಿದ್ದಾರೆ. ನನ್ನ ಚಿತ್ರದ ಕುರಿತು ನಾನು ನನ್ನ ಉಪನ್ಯಾಸಕರಿಗೆ ಹೇಳಿದಾಗಲೂ ಅವರಿಗೆ ಸಹ ನನ್ನ ಚೊಚ್ಚಲ ಚಿತ್ರ ನೋಡುವ ಕುತೂಹಲ ಇಮ್ಮಡಿಸಿದೆ" ಪ್ರಖ್ಯಾತ್ ಹೇಳಿದ್ದಾರೆ.
ಕಾಲೇಜು ವೇದಿಕೆಗಳಲ್ಲಿ ಅವರು ತೋರಿದ ಪ್ರತಿಭೆ ಅವರಿಗೆ ಚಿತ್ರರಂಗಕ್ಕೆ ಬರಲು ಸಹಕಾರ ನೀಡಿದೆ.ಕಲೆಯ ಸೂಕ್ಷ್ಮತೆಯನ್ನು ಕಲಿಯಲು ನನಗೆ ಇದರಿಂದ ಬಹಳ ಅನುಕೂಲವಾಯಿತು ಎಂದು ಅವರು ವಿಚರಿಸಿದ್ದಾರೆ. "ನಾನು ಚಿತ್ರರಂಗ ಪ್ರವೇಶಿಸಬೇಕು ಎನ್ನುವುದು ನನಗೆಂದೂ ಆದ್ಯತೆಯಾಗಿರಲಿಲ್ಲ.ಆದರೆ ನಿರ್ದೇಶಕ ಮಂಜು ಮಂದಯ್ಯ ಈ ಚಿತ್ರಕ್ಕೆ ವಿದ್ಯಾರ್ಥಿಯ ಪಾತ್ರಧಾರಿಯಾಗಿ ನನ್ನನ್ನು ಆಯ್ಕೆ ಮಾಡಿದ್ದರು.ನನಗೆ ’ಇಲ್ಲ’ ಎನ್ನಲಾಗಲಿಲ್ಲ"
"ನಾನು ನನ್ನದೇ ವಯೋಮಾನದ ಯುವಕನ ಪಾತ್ರ ಮಾಡುತ್ತಿರುವಾಗ ನನ್ನ ವಯಸ್ಸಿನ ಇತರರ ಮನಸ್ಸಿನಲ್ಲಿರುವ ಭಾವನೆ, ಅವರು ಎದುರಿಸುತ್ತಿರುವ ಸಮಸ್ಯೆಗಳ ಅರಿವು ನನಗಿರುತ್ತದೆ.ಚಿತ್ರದಲ್ಲಿ ವಿದ್ಯಾರ್ಥಿಗಳ ಮೈಂಡ್ ಸೆಟ್ ಗಳನ್ನು ತೋರಿಸಲಾಗಿದೆ." ಪ್ರಖ್ಯಾತ್ ಹೇಳುತ್ತಾರೆ.
ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯ ಎದುರಾದಾಗ ನಾನು ಸಹ ಗೊಂದಲಕ್ಕೊಳಗಾಗುತ್ತೇನೆ. ಎಂದರೆ ಆ ಪಾತ್ರದಲ್ಲಿನ ನಾಯಕನಿಗೆ ನನಗೆ ತುಸು ಸಾಮ್ಯತೆ ಇದೆ."ಹೊಸಬರು ಕ್ಯಾಮರಾ ಮುಂದೆ ನಟಿಸುವಾಗೆಲ್ಲಾ ಅವರಲ್ಲಿ ಎಲ್ಲಿಲ್ಲದ ಆನಂದ, ಪ್ರೀತಿ ಉಂಟಾಗುತ್ತದೆ. ಕ್ಯಾಮರಾ ಹಾಗೂ ಚಿತ್ರರಂಗದ ಬಗ್ಗೆ ಅಪಾರ ಕಲ್ಪನೆಗಳು ಮೂಡುತ್ತದೆ. ಆದರೆ ಪ್ರೇಕ್ಷಕರು ನಮ್ಮನ್ನು (ಹೊಸ ಮುಖ) ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಚಿತ್ರ ಬಿಡುಗಡೆಯ ಬಳಿಕವೇ ತಿಳಿಯಲಿದೆ.ಈ ಚಿತ್ರ ಬಿಡುಗಡೆಯಾದ ಬಳಿಕ ನಾನು ನೃತ್ಯಾಭ್ಯಾಸದಲ್ಲಿ ನಿರತನಾಗುವವನಿದ್ದೇನೆ, ಜತೆಗೆ ದಿನನಿತ್ಯ ಜಿಮ್ ಗೆತೆರಳಲು ಪ್ರಾರಂಭಿಸಬೇಕಿದೆ" ಪ್ರಖ್ಯಾತ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com