'ನಡುವೆ ಅಂತರವಿರಲಿ' ನಿತ್ಯಾ ಪಾತ್ರ ನನ್ನ ಸಾಮರ್ಥ್ಯ ಮೀರಿದ್ದು: ಐಶಾನಿ ಶೆಟ್ಟಿ

"ರಾಕೆಟ್" ಬಳಿಕ ಎರಡು ವರ್ಷಗಳ ಬಳಿಕ ನಟಿ ಐಶಾನಿ ಶೆಟ್ಟಿ "ನಡುವೆ ಅಂತರವಿರಲಿ" ಎನ್ನುವ ಕನ್ನಡದ ರೊಮ್ಯಾಂಟಿಕ್ ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಐಶಾನಿ ಶೆಟ್ಟಿ
ಐಶಾನಿ ಶೆಟ್ಟಿ
Updated on
ಬೆಂಗಳೂರು: "ರಾಕೆಟ್" ಬಳಿಕ ಎರಡು ವರ್ಷಗಳ ಬಳಿಕ ನಟಿ ಐಶಾನಿ ಶೆಟ್ಟಿ "ನಡುವೆ ಅಂತರವಿರಲಿ" ಎನ್ನುವ ಕನ್ನಡದ ರೊಮ್ಯಾಂಟಿಕ್ ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರ ತೆರೆಗೆ ಬರಲು ಸಿದ್ದವಾಗಿರುವ ಹಿನ್ನೆಲೆಯಲ್ಲಿ ನಟಿ ಐಶಾನಿ ತಮ್ಮನ್ನು ತಾವು ಮತ್ತೆ ಬೆಳ್ಳಿತೆರೆಯಲ್ಲಿ ಕಾಣಲು ಉತ್ಸುಕರಾಗಿದ್ದಾರೆ.
"ವಾಸು ಪ್ರಕಾರ, ರಾಕೆಟ್ ಚಿತ್ರಗಳಲ್ಲಿ ನಾನು ಅಭಿನಯಿಸುವ ವೇಳೆ ನಾನಿನ್ನೂ ಪಿಯು ವಿದ್ಯಾರ್ಥಿನಿಯಾಗಿದ್ದೆ.ಆದರೆ ನಾನು ಸಮೂಹ ಮಾದ್ಯಮ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಕಲಿಯುವಾಗ ನನಗೆ ಕಮರ್ಷಿಯಲ್ ಚಿತ್ರಗಳಲ್ಲಿ ಅಭಿನಯಿಸುವಷ್ಟು ಸಮಯಾವಕಾಶ ಸಿಗಲಿಲ್ಲ.ವಿದ್ಯಾಭ್ಯಾಸ ಹಾಗೂ ನಟನೆಯನ್ನು ಜತೆಯಾಗಿ ತೆಗೆದುಕೊಂಡು ಹೋಗುವುದು ಕಷ್ಟ ಹಾಗಾಗಿ ನಾನು ವಿದ್ಯಾಭ್ಯಾಸಕ್ಕೆ ಪ್ರಥಮ ಆದ್ಯತೆ ನೀಡಿದೆ." ಐಶಾನಿ ಹೇಳಿದ್ದಾರೆ.
"ನಡುವೆ ಅಂತರವಿರಲಿ" ಚಿತ್ರದಲ್ಲಿ ನಟಿಸಲು ಕರೆ ಬಂದಾಗ ಮಾತ್ರ ಐಶಾನಿಗೆ ಅದನ್ನು ವಿರೋಧಿಸಲು ಸಾಧ್ಯವಾಗಿರಲಿಲ್ಲ."ಕಥಾವಸ್ತು ಅತ್ಯಂತ ಆಕರ್ಷಕವಾಗಿತ್ತು. ಹೀಗಾಗಿ ನಾನು ಇಂತಹಾ ಚಿತ್ರದಿಂದ ದೂರವಿರಲು ಬಯಸಲಿಲ್ಲ"
ಆದರೆ ನಟಿ ತನ್ನ ಪಾತ್ರದ ಕುರಿತಂತೆ ತಿಳಿದುಕೊಳ್ಳುತ್ತಾ ಹೋದಂತೆ ಅದರಲ್ಲಿನ ಸಂಕೀರ್ಣತೆ ಆಕೆಗೆ ಅರಿವಾಗಿದೆ."ನಿತ್ಯಾಳ ಪಾತ್ರ ಸವಾಲಿನಿಂದ ಕೂಡಿತ್ತು.ಆದರೆ ಅಭಿನಯಿಸುವವರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಒದಗಿಸುವಂತಿತ್ತು. ನಡುವೆ..... ಚಿತ್ರ ಒಂದು ಭಾವನಾತ್ಮಕ ಪ್ರೇಮಕಥೆಯಾಗಿದ್ದು ಸಮಾಜಕ್ಕೆ ಅತ್ಯಂತ ಸಮೀಪವರ್ತಿಯಾಗಿದೆ ಎಂದು ಐಶಾನಿ ಹೇಳಿದ್ದಾರೆ. ಪಾತ್ರವು ತನ್ನ ವಯಸ್ಸಿಗೆ ತಕ್ಕಂತಿದೆ,  ಕಾಲೇಜು ವಿದ್ಯಾರ್ಥಿಯ ಮನಸ್ಥಿತಿಯನ್ನು ಗ್ರಹಿಸಲು ಸಾಧ್ಯವಾದಾಗಲೂ ಕಥೆಯಲ್ಲಿ ನ್ಬರುವ ಪರಿಸ್ಥಿತಿಗಳು ಬಹಳ ಸಂಕೀರ್ಣತೆಯಿಂದ ಕೂಡಿದೆ ಎಂದು ಅವರು ಹೇಳುತ್ತಾರೆ.
"ಚಿತ್ರವು ಸೂಕ್ಷ್ಮ ವಿಚಾರಗಳೊಡನೆ ವ್ಯವಹರಿಸುತ್ತದೆ.ಸಾಮಾನ್ಯವಾಗಿ ಎಲ್ಲಿಯೂ ಹೇಳಲಾರದ ವಿಚಾರವನ್ನು ಹೊಂದಿದೆ. ವಯಸ್ಸಿನ ಹುಡುಗಿಯರ್ನ್ನು ಹೇಗೆ ನಿಭಾಯಿಸಬೇಕು, ಅವಳನ್ನು ಅವಳೇ ಹೇಗೆ ಸಂಭಾಳಿಸಿಕೊಳ್ಳುತ್ತಾಳೆ ಎನ್ನುವುದು ಚಿತ್ರದಲ್ಲಿ ಪ್ರಧಾನವಾಗಿದೆ.ಹೀಗ್ಗಿಯೇ ನಾನು ಈ ಪಾತ್ರವನ್ನು ಅಭಿನಯಿಸುವ ಮುನ್ನ ಪಾತ್ರದ ಕುರಿತ ಸೈಕಾಲಜಿಯನ್ನು ಅರ್ಥೈಸಿಕೊಳ್ಳಬೇಕಾಗಿತ್ತು.ಚಿತ್ರದಲ್ಲಿನ ನನ್ನ ಪಾತ್ರ ನನ್ನ ನೈಜ ಸಾಮರ್ಥ್ಯಕ್ಕೆ ಮೀರಿದ್ದೆನ್ನುವುದು ನನ್ನ ಭಾವನೆ"
ನಿರ್ದೇಶಕ ರವೀನ್ ಕುಮಾರ್ ಐಶಾನಿಗೆ ತೊಂದರೆಯಾಗದಂತೆ ಶೂಟಿಂಗ್ ದಿನಗಳನ್ನಿತ್ಟಿದ್ದರು. ಕಾಲೇಜು ಸೆಮಿಸ್ಟರ್ ರಜಾದಿನಗಳನ್ನೇ ಶೂಟಿಂಗ್ ಡೇಟ್ ಆಗಿಸಿಕೊಂಡು ನಟಿ ಈ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ.
ಐಶಾನಿ ಹೇಳುವಂತೆ ನಡುವೆ ಅಂತರವಿರಲಿ ಚಿಒತ್ರ ಕೇವಲ ಸಾಮಾನ್ಯ ಕಮರ್ಷಿಯಲ್ ಚಿತ್ರ ಮಾತ್ರವಾಗಿರದೆ ಒಂದು ಕ್ಯೂಟ್ ಲವ್ ಸ್ಟೋರಿಯಾಗಿದೆ.
ಇನ್ನು ಸಂಪೂರ್ಣ ನಟನೆಗೆ ಮೀಅಲು
ಇದೀಗ ಐಶಾನಿ ತನ್ನ ಶಿಕ್ಷಣ ಸಂಪೂರ್ಣಗೊಳಿಸಿದ್ದು ಮುಂದೆ ತಾನು ಸಂಪೂರ್ಣವಾಗಿ ನಟನೆಗಳಲ್ಲಿಯೇ ತೊಡಗುತ್ತೇನೆ, ಇದನ್ನೇ ಗಂಭೀರವಾಗಿ ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com