ದ ವಿಲನ್ ಚಿತ್ರದ ಮುಹೂರ್ತ ಸಂದರ್ಭ
ದ ವಿಲನ್ ಚಿತ್ರದ ಮುಹೂರ್ತ ಸಂದರ್ಭ

'ದ ವಿಲನ್' ಹೀರೋಯಿನ್ ಆಮಿ ಜಾಕ್ಸನ್ ಮೇಲೆ ನಿರ್ದೇಶಕ ಪ್ರೇಮ್ ಗೆ ಬೇಸರ!

ಜೋಗಿ ಪ್ರೇಮ್ ಅವರ ಬಹು ನಿರೀಕ್ಷಿತ ಚಿತ್ರ ದ ವಿಲನ್ ಬಿಡುಗಡೆಗೆ ದಿನ ಸನ್ನಿಹಿತವಾಗಿದೆ. ಶಿವರಾಜ್ ಕುಮಾರ್...
Published on

ಜೋಗಿ ಪ್ರೇಮ್ ಅವರ ಬಹು ನಿರೀಕ್ಷಿತ ಚಿತ್ರ 'ದ ವಿಲನ್ ' ಬಿಡುಗಡೆಗೆ ಸನ್ನಿಹಿತವಾಗಿದೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ನಾಯಕ ನಟರಾಗಿ ನಟಿಸಿರುವ ಚಿತ್ರ ವಿಜಯದಶಮಿ ದಿನ ಅಕ್ಟೋಬರ್ 18ರಂದು ಬಿಡುಗಡೆಯಾಗಲಿದೆ. ಚಿತ್ರದ ಹಾಡುಗಳು ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ.

ಇವೆಲ್ಲದರ ಮಧ್ಯೆ ಚಿತ್ರದ ನಿರ್ದೇಶಕ ಪ್ರೇಮ್ ಇನ್ನೊಂದು ವಿಷಯಕ್ಕೆ ಬೇಸರಗೊಂಡಿದ್ದಾರೆ. ಅದು ಚಿತ್ರದ ನಾಯಕಿ ಆಮಿ ಜಾಕ್ಸನ್ ಪ್ರಚಾರಕ್ಕೆ ಬರುತ್ತಿಲ್ಲ ಎಂದು. ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ನಟಿಸುತ್ತಿರುವ ಆಮಿ ಜಾಕ್ಸನ್ ಈ ಚಿತ್ರದ ಟೀಸರ್ ಲಾಂಚ್ ವೇಳೆ ಹಾಜರಿರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರ ಅನುಪಸ್ಥಿತಿ ನಿರ್ದೇಶಕ ಪ್ರೇಮ್ ಗೆ ಇರಿಸುಮುರುಸು ತಂದಿದೆ. ಚಿತ್ರದ ಸ್ಟಾರ್ ನಟರೇ  ಪ್ರಚಾರದಲ್ಲಿ ಭಾಗಿಯಾಗುತ್ತಿರುವಾಗ ಈಕೆ ಮಾತ್ರ ಏಕೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ, ಪ್ರತಿಕ್ರಿಯೆಗೂ ಸಿಗುತ್ತಿಲ್ಲ ಎಂದು ನಿರ್ದೇಶಕರನ್ನು ಕೇಳುತ್ತಿದ್ದಾರಂತೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರೇಮ್, ''ನನಗೆ ಆಕೆಯ ಕೆಲಸದ ಮೇಲೆ ಗೌರವವಿದೆ. ಚಿತ್ರದಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲದಿರುವುದರಿಂದ ಮಾತನಾಡಲು ಕಷ್ಟವಾಗುತ್ತಿದೆ. ಹಾಗೆಂದು ಚಿತ್ರದ ಪ್ರೊಮೋಷನ್ ವಿಚಾರಕ್ಕೆ ಬಂದಾಗ ರಜನಿಕಾಂತ್, ಅಮಿತಾಬ್ ಬಚ್ಚನ್ ರಂತಹ ಸೂಪರ್ ಸ್ಟಾರ್ ಗಳೇ ಕೆಲವು ಜವಾಬ್ದಾರಿಗಳನ್ನು ಹೊರುತ್ತಾರೆ. ಆದರೆ ಇಲ್ಲಿ ಆಮಿ ಜಾಕ್ಸನ್ ಅವರು ಉಪಸ್ಥಿತರಿರುವುದು ಬಿಡಿ, ಕಾರ್ಯಕ್ರಮಕ್ಕೆ ಅವರು ಬರುತ್ತಾರೆಯೇ ಇಲ್ಲವೇ ಎಂದು ಕೇಳಿದರೆ ಅವರಿಂದ ಉತ್ತರ ಬರಲು ಸಮಯ ಹಿಡಿಯುತ್ತದೆ'' ಎನ್ನುತ್ತಾರೆ.

ಆಮಿ ಜಾಕ್ಸನ್ ಅವರು ಈ ಹಿಂದೆ ತಮಿಳು ಮತ್ತು ತೆಲುಗಿನಲ್ಲಿ ಕೂಡ ನಟಿಸಿದ್ದಾರೆ. ಕನ್ನಡ ಚಿತ್ರದ ಬಗ್ಗೆ ಪರಭಾಷೆ ನಟಿಯ ಈ ಧೋರಣೆ ಸಹಿಸುವುದಿಲ್ಲ. ಒಂದು ಪ್ರಾಜೆಕ್ಟ್ ನಲ್ಲಿ ಭಾಗಿಯಾದ ಪ್ರತಿಯೊಬ್ಬ ನಟರೂ ಕೂಡ ಚಿತ್ರದ ಪ್ರಚಾರದ ಜವಾಬ್ದಾರಿ ತೆಗೆದುಕೊಳ್ಳಬೇಕು. ಆಮಿ ಅವರು ಬಾಲಿವುಡ್, ಹಾಲಿವುಡ್ ಮತ್ತು ಬೇರೆ ಭಾಷೆಯ ಚಿತ್ರಗಳಿಗೂ ಹೀಗೆಯೇ ಮಾಡುತ್ತಾರೆಯೇ ಹಾಗಾದರೆ ಒಪ್ಪಿಕೊಳ್ಳೋಣ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಪ್ರೇಮ್.

ಆಮಿ ಅವರ ಬ್ಯುಸಿ ಶೆಡ್ಯೂಲ್ ಗೆ ಶಿವಣ್ಣ ಮತ್ತು ಸುದೀಪ್ ಅವರು ಕೂಡ ತಮ್ಮ ಡೇಟ್ ಗಳನ್ನು ಹೊಂದಾಣಿಕೆ ಮಾಡಿಕೊಂಡು ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು , ಆದರೆ ಯಾರೊಬ್ಬರೂ ಆರೋಪ ಮಾಡಲಿಲ್ಲ. ದ ವಿಲನ್ ಆಮಿ ಅವರ ಮೊದಲ ಕನ್ನಡ ಚಿತ್ರವಾಗಿರುವುದರಿಂದ ಕನ್ನಡದ ಪ್ರೇಕ್ಷಕರು ಅವರ ಅನುಭವಗಳನ್ನು ಕೇಳಲು ಕಾತರರಾಗಿರುತ್ತಾರೆ. ಒಂದಷ್ಟು ಮಾಧ್ಯಮ ಸಂವಾದಗಳಲ್ಲಿ ಭಾಗವಹಿಸಿದರ ಮೂಲಕವಾದರೂ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗಬೇಕು. ಚಿತ್ರ ಬಿಡುಗಡೆಗೆ ಇನ್ನೆರಡು ವಾರಗಳೇ ಬಾಕಿಯಿರುವುದರಿಂದ ಚಿತ್ರದ ಪ್ರಚಾರಕ್ಕೆ ಬರುವ ಯಾವ ಸೂಚನೆಯನ್ನೂ ಅವರು ನೀಡಿಲ್ಲ. ಇದು ನಿಜಕ್ಕೂ ಬೇಸರವನ್ನುಂಟುಮಾಡಿದೆ ಎಂದು ಪ್ರೇಮ್ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com