ನಿಶ್ವಿಕಾ ನಾಯ್ಡು
ನಿಶ್ವಿಕಾ ನಾಯ್ಡು

'ಜಂಟಲ್ ಮ್ಯಾನ್' ಗೆ ನಿಶ್ವಿಕಾ ನಾಯ್ಡು ನಾಯಕಿ!

ನಿರ್ದೇಶಕ ಗುರು ದೇಶಪಾಂಡೆ ಅವರ ಚೊಚ್ಚಲ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರ "ಜಂಟಲ್ ಮ್ಯಾನ್" ಗೆ ನಾಯಕಿ ಸಿಕ್ಕಿದ್ದಾಳೆ.
Published on
ಬೆಂಗಳೂರು: ನಿರ್ದೇಶಕ ಗುರು ದೇಶಪಾಂಡೆ ಅವರ ಚೊಚ್ಚಲ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರ "ಜಂಟಲ್ ಮ್ಯಾನ್" ಗೆ ನಾಯಕಿ ಸಿಕ್ಕಿದ್ದಾಳೆ. ನಿಶ್ವಿಕಾ ನಾಯ್ಡು ಜಂಟಲ್ ಮ್ಯಾನ್  ನಾಯಕಿಯಾಗಿ ಆಯ್ಕೆಯಾಗಿದ್ದಾರೆ.ಜಗದೀಶ್ ಕುಮಾರ್ ಹಂಪಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ನಿಶ್ವಿಕಾ ನಾಯ್ಡು ಗುರು ದೇಶಪಾಂಡೆ ಸಹಯೋಗದಲ್ಲಿ ಇದು ಎರಡನೇ ಬಾರಿಗೆ ಅಭಿನಯಕ್ಕಿಳಿದಿದ್ದಾರೆ.ಇದಕ್ಕೆ ಮುನ್ನ ಶ್ರೇಯಸ್ ಮಂಜು ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ "ಪಡ್ಡೆಹುಲಿ" ಚಿತ್ರಕ್ಕೆ ಸಹ ಅವರು ಸಹಿ ಹಾಕಿದ್ದರು. ನಿಶ್ವಿಕಾ ಅವರ ವೃತ್ತಿಪರತೆ, ಬದ್ದತೆಗಳು ತಮಗೆ ಇಷ್ಟವಾಗಿದ್ದು ಇದಕ್ಕಾಗಿ ಆಕೆಗೆ ಇನ್ನೊಂದು ಅವಕಾಶ ನೀಡುತ್ತಿರುವುದಾಗಿ ನಿರ್ಮಾಪಕ ಗುರು ಹೇಳಿದ್ದಾರೆ.
"ಪಡ್ಡೆಹುಲಿಯಲ್ಲಿನ ನಿಶ್ವಿಕಾ ಅಭಿನಯ ನನಗೆ ಇಷ್ಟವಾಗಿತ್ತು ಹೀಗಾಗಿ ನಾನು ಜಂಟಲ್ ಮ್ಯಾನ್ ಚಿತ್ರದ ನಾಯಕಿಯಾಗಿ ಅವರನ್ನೇ ಆಯ್ಕೆ ಮಾಡಿದೆ.ಅಲ್ಲದೆ ಅವರಿಗೆ ಕನ್ನಡ ಭಾಷೆಯ ಮೇಲೆ ಪ್ರಭುತ್ವವಿದೆ. ಇದು ಅತ್ಯಂತ ಮುಖ್ಯ ಸಂಗತಿಯಾಗುತ್ತದೆ" ಗುರು ಹೇಳುತ್ತಾರೆ.
ಇದೀಗ ಜಂಟಲ್ ಮ್ಯಾನ್ ಪ್ರಮುಖ ಪಾತ್ರಗಳಿಗಾಗಿ ನಟ ನಟಿಯರ ಆಯ್ಕೆ ಪೂರ್ಣವಾಗಿದ್ದು ಇದೇ ಅಕ್ಟೋಬರ್ 25ರಿಂದ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಇದೆ. ಅಲ್ಲದೆ ಗರಿಷ್ಠ 25 ದಿನಗಳಲ್ಲಿ ಚಿತ್ರೀಕರಣ ಸಂಪೂರ್ಣಗೊಳಿಸುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಲಿದ್ದು ಸುಧಾಕರ್ಛಾಯಾಗ್ರಹಣವಿದೆ.ತಬಲ ನಾಣಿ, ಅರುಣಾ ಬಾಲರಾಜ್, ಸಾಧು ಕೋಕಿಲಾ ಮತ್ತಿತರರು ತೆರೆ ಹಂಚಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com