#Me Too ಆರೋಪ ಸಾಬೀತಾದವರೊಂದಿಗೆ ಕೆಲಸ ಮಾಡದಿರಲು 11 ಮಹಿಳಾ ನಿರ್ದೇಶಕಿಯರ ನಿರ್ಧಾರ

ಲೈಂಗಿಕ ಕಿರುಕುಳವನ್ನು ಹಂಚಿಕೊಳ್ಳುವ ಮಹಿಳೆಯರೊಂದಿಗೆ ಕೈ ಜೋಡಿಸಿರುವ ಬಾಲಿವುಡ್ ನ ಮಹಿಳಾ ನಿರ್ದೇಶಕಿಯರು ಆರೋಪ ಕೇಳಿಬಂದಿರುವವರ ಜೊತೆ ಕೆಲಸ ಮಾಡದಿರಲು ನಿರ್ಧರಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಲೈಂಗಿಕ ಕಿರುಕುಳವನ್ನು ಹಂಚಿಕೊಳ್ಳುವ  ಮಹಿಳೆಯರೊಂದಿಗೆ ಕೈ ಜೋಡಿಸಿರುವ  ಬಾಲಿವುಡ್ ನ ಮಹಿಳಾ ನಿರ್ದೇಶಕಿಯರು ಆರೋಪ ಸಾಬೀತಾದವರೊಂದಿಗೆ  ಕೆಲಸ ಮಾಡದಿರಲು ನಿರ್ಧರಿಸಿದ್ದಾರೆ.

ನಂದಿತಾ ದಾಸ್,  ಮೇಘ್ನಾ ಗುಲ್ಜರ್,  ಗೌರಿ ಸಿಂಧೆ, ಕಿರಣ್ ರಾವ್,  ರೀಮಾ ಕಾಗ್ಟಿ, ಮತ್ತು ಜೊಯಾ ಆಖ್ತರ್ ಸೇರಿದಂತೆ ಸುಮಾರು 11  ಮಹಿಳಾ ಚಿತ್ರ  ನಿರ್ದೇಶಕಿಯರು  #MeToo ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಹಿಳೆ ಹಾಗೂ ಚಿತ್ರ ನಿರ್ದೇಶಕಿಯರಾಗಿ ಎಲ್ಲರೂ ಒಗ್ಗಟ್ಟಿನಿಂದ   #MeToo ಅಭಿಯಾನವನ್ನು ಬೆಂಬಲಿಸುತ್ತೇವೆ. ಲೈಂಗಿಕ ಕಿರುಕುಳ ಬಗ್ಗೆ ಪ್ರಾಮಾಣಿಕವಾಗಿ ಮುಂದೆ ಬಂದಿರುವ ಮಹಿಳೆಯರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು, ಧೈರ್ಯದಿಂದ ಬದಲಾವಣೆಗಾಗಿ ಕ್ರಾಂತಿಯ ಆರಂಭಕ್ಕೆ ಮುಂದಾಗಿರುವ ಮಹಿಳೆಯರಿಗೆ ಗೌರವ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.

ಕೆಲಸ ಮಾಡುವ ಎಲ್ಲಾ ಸ್ಥಳಗಳಲ್ಲಿ ಸಮಾನ ವಾತವಾರಣ ಹಾಗೂ ಸುರಕ್ಷತೆ  ನಿರ್ಮಾಣದ ಬಗ್ಗೆ ಈ ಮೂಲಕ ಅರಿವು ಮೂಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆರೋಪ ಕೇಳಿಬಂದವರ ಜೊತೆ ಕೆಲಸ ಮಾಡದಿರಲು ನಿರ್ಧರಿಸಿರುವುದಾಗಿ ಮಹಿಳಾ ನಿರ್ದೇಶಕಿಯರು ಹೇಳಿದ್ದಾರೆ.

#MeToo ಅಭಿಯಾನದಲ್ಲಿ ನಟರಾದ ನಾನಾ ಪಾಟೇಕರ್, ರಜತ್ ಕಾಪೂರ್, ಸುಭಾಷ್ ಕಾಪೂರ್, ಅಲೋಕ್ ನಾಥ್, ಸುಭಾಷ್ ಘಾಯ್,  ವಿಕಾಸ್ ಬಹ್ಲಾ,  ಕೈಲಾಶ್ ಖೇರ್, ಸಜ್ಜಿದ್ ಖಾನ್ ,  ಮುಕೇಶ್ ಚಾಹರ್ಬ, ಗಾಯಕ ರಘು ದೀಕ್ಷಿತ್, ಮತ್ತು ತಮಿಳು ಸಾಹಿತಿ ವೈರಾಮುತ್ತು ವಿರುದ್ಧ ಲೈಂಗಿಕ ಕಿರುಕುಳ  ಆರೋಪ ಕೇಳಿಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com