ಶ್ರುತಿ ಹರಿಹರನ್ ಆರೋಪಕ್ಕೆ ಅರ್ಜುನ್ ಸರ್ಜಾ ತಿರುಗೇಟು
ಶ್ರುತಿ ಹರಿಹರನ್ ಆರೋಪಕ್ಕೆ ಅರ್ಜುನ್ ಸರ್ಜಾ ತಿರುಗೇಟು

#MeToo: ಶ್ರುತಿ ಹರಿಹರನ್ ಆರೋಪಕ್ಕೆ ಅರ್ಜುನ್ ಸರ್ಜಾ ತಿರುಗೇಟು, ನಟಿ ವಿರುದ್ಧ ಮಾನನಷ್ಟ ಮೊಕದ್ದಮೆ!

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ಅವರ ಆರೋಪ ಸುಳ್ಳು, ಎಂದು.....
Published on
ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ಅವರ ಆರೋಪ ಸುಳ್ಳು, ಎಂದು ಬಹುಭಾಷಾ ನಟ ಅರ್ಜುನ್ ಸರ್ಜಾ ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದು "ಅವರು(ಶ್ರುತಿ) ಏಕೆ ಹೀಗೆ ಹೇಳಿದ್ದಾರೆ ನನಗೆ ತಿಳಿದಿಲ್ಲ.ನಾನೆಂದೂ ಈ ರೀತಿ ಮಾಡಿಲ್ಲ.ಸುಮ್ಮನೆ ತಬ್ಬಿಕೊಳ್ಳುವುದಕ್ಕೆ ಪ್ರಯತ್ನಿಸಿರಲಿಲ್ಲ.ಅಂತಹಾ ಅಗತ್ಯ ನನಗೆ ಇಲ್ಲ" ಅವರು ಹೇಳಿದ್ದಾರೆ.
"ಶ್ರುತಿ ಆರೋಪದಿಂದ ನನಗೆ ಬಹಳ ನೋವಾಗಿದೆ. ಇದುವರೆಗೆ ನಾನು 60 ರಿಂದ 70 ನಟಿಯರ ಜೊತೆ ಅಭಿನಯಿಸಿದ್ದೇನೆ.ಯಾರೊಬ್ಬರೂ ಈ ರೀತಿ ಮಾತನಾಡಲಿಲ್ಲ.ನಾನೆಂದೂ ಇಂತಹಾ ಚೀಪ್ ಮೆಂಟಾಲಿಟಿಯನ್ನು ಬೆಳೆಸಿಕೊಳ್ಳಲಿಲ್ಲ. ಇದು ನನಗೆ ಅಗತ್ಯವೂ ಇಲ್ಲ.
"ಮೀಟೂ ಅಭಿಯಾನದ ಬಗ್ಗೆ ನನಗೆ ಗೌರವವಿದೆ.ಆದರೆ ಇಂತಹಾ ದೊಡ್ಡ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ.ಶ್ರುತಿಯವರ ಮಾತಿಗೆ ಯಾವುದೇ ಆಧಾರವಿದೆಯೆ? ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ" ಅರ್ಜುನ್ ಸರ್ಜಾ ಹೇಳಿದ್ದಾರೆ.
"ಇನ್ನು ಈಕೆ ಹೇಳಿರುವುದು ಸುಮಾರು ಒಂದೂವರೆ ವರ್ಷದ ಹಿಂದಿನ ಕಥೆ.ಆಗಲೂ ನಾನು ಅವರ ಬಗ್ಗೆ ಒಂದೇ ಮಾತು ಹೇಳಿದ್ದೆ. ಅವರು ಚೆನ್ನಾಗಿ ಅಭಿನಯಿಸುತ್ತಾರೆ, ಕನ್ನಡ, ತಮಿಳು ಚೆನ್ನಾಗಿ ಮಾತನಾಡಬಲ್ಲರು ಎಂದಿದ್ದೆ. ಚಿತ್ರ ಮುಗಿದ ಬಳಿಕ ನನ್ನೊಡನೆ ಇನ್ನೊಂದು ಚಿತ್ರದಲ್ಲಿ ಅಭಿನಯಿಸುವ ಇರಾದೆ ವ್ಯಕ್ತಪಡಿಸಿದ್ದರು. ಇದಕ್ಕೆ ಸಹ ನಾನು ಖಂಡಿತವಾಗಿ ಆಗಲಿ ಎಂದು ಒಪ್ಪಿಗೆ ಸೂಚಿಸಿದ್ದೆ
"ಆದರೆ ಇಷ್ಟು ವರ್ಷದ ಬಳಿಕ ನನ್ನ ಮೇಲೆ ಆರೋಪ ಮಾಡಿರುವುದು ನನಗೆ ಆಘಾತಕ್ಕೆ ಕಾರಣವಾಗಿದೆ.ಕ್ಯಾಮರಾ ಎದುರು ಶೂಟಿಂಗ್ ನಡೆವಾಗ ಸುಮಾರು 200-250 ಜನ ಇರುತ್ತಾರೆ. ಅವರೆಲ್ಲರೆದುರು ನಾನು ಹಾಗೆ ವರ್ತಿಸಲು ಸಾಧ್ಯವೆ? ಒಂದು ವೇಳೆ ಶ್ರುತಿ ಆರೋಪಕ್ಕೆ ನಾನೇನೂ ಪ್ರತಿಕ್ರಯಿಸದೆ ಹೋದಲ್ಲಿ ಮೌನಂ ಸಮ್ಮತಿ ಲಕ್ಷಣಂ ಎಂದಾಗಲಿದ್ದು ಇದಾಗಬಾರದೆನ್ನುವ ಏಕೈಕ ಕಾರಣಕ್ಕೆ ನಾನಿಂದು ಮಾತನಾಡುತ್ತಿದ್ದೇನೆ" ನಟ ಸರ್ಜಾ ಹೇಳಿದರು.
"ವಿಸ್ಮಯ" ಚಿತ್ರದ ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ನನಗೆ ಲೈಂಗಿಕ ಕಿರುಕುಳ ನೀಡಿದ್ದರು. ಪದೇ ಪದೇ ಡಿನ್ನರ್ ಗೆ ಹೋಗೋಣ ಎಂದು ನಟ ಅರ್ಜುನ್ ಸರ್ಜಾ  ಪೀಡಿಸುತ್ತಿದ್ದರು ಎಂದು ಶ್ರುತಿ ಹರಿಹರನ್ ಆರೋಪಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com