ಫೈರ್ ಸಂಸ್ಧೆ ತೊರೆದ ಕಾರಣ ಬಹಿರಂಗ, ನಟ ಚೇತನ್ ವಿರುದ್ಧ ಮತ್ತೆ ಗುಡುಗಿದ ಪ್ರಿಯಾಂಕಾ ಉಪೇಂದ್ರ!

ನಟ ಚೇತನ್ ಒಬ್ಬ ಆ್ಯಕ್ಟಿವಿಸ್ಟ್ ಥರ ನಡೆದುಕೊಳ್ಳುತ್ತಿದ್ದರು. ಆತನ ಏಕಪಕ್ಷೀಯ ನಿರ್ಧಾರಗಳಿಂದ ಬೇರಸವಾಗಿ ಫೈರ್ ಸಂಸ್ಥೆಯಿಂದ ಹೊರ ಬಂದಿದ್ದಾಗಿ ನಟಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ...
ಪ್ರಿಯಾಂಕಾ ಉಪೇಂದ್ರ-ಚೇತನ್
ಪ್ರಿಯಾಂಕಾ ಉಪೇಂದ್ರ-ಚೇತನ್
Updated on
ಬೆಂಗಳೂರು: ನಟ ಚೇತನ್ ಒಬ್ಬ ಆ್ಯಕ್ಟಿವಿಸ್ಟ್ ಥರ ನಡೆದುಕೊಳ್ಳುತ್ತಿದ್ದರು. ಆತನ ಏಕಪಕ್ಷೀಯ ನಿರ್ಧಾರಗಳಿಂದ ಬೇರಸವಾಗಿ ಫೈರ್ ಸಂಸ್ಥೆಯಿಂದ ಹೊರ ಬಂದಿದ್ದಾಗಿ ನಟಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ. 
ಫೈರ್ ಸಂಸ್ಥೆ ಕೆಲಸ ಮಾಡುವ ರೀತಿ ನನಗೆ ಇಷ್ಟವಾಗುತ್ತಿರಲಿಲ್ಲ. ಚೇತನ್ ಅತಿರೇಕದ ನಡವಳಿಕೆ, ನಿರ್ಧಾರಗಳು ತೆಗೆದುಕೊಂಡು ನಾನು ವಿದೇಶದಲ್ಲಿ ಇರುವಾಗ ಫೈರ್ ತಂಡದಲ್ಲಿ ಬಹಳಷ್ಟು ಬದಲಾವಣೆ ಮಾಡಿದ್ದರು. ಇದು ನನಗೆ ಬಹಳ ನೋವು ತಂದಿತ್ತು. ಹೀಗಾಗಿ ನಾನು ಫೈರ್ ಸಂಸ್ಥೆಯಿಂದ ಹೊರ ಬಂದಿದ್ದೇನೆ ಎಂದು ಹೇಳಿದ್ದಾರೆ. 
ಶೃತಿಗೂ ಮುನ್ನ ಹಲವು ಮಹಿಳೆಯರು ಅನ್ಯಾಯದ ಬಗ್ಗೆ ಮಾತನಾಡಿದ್ದರು. ಆದರೆ ಅವರೆಲ್ಲನ್ನು ಬಿಟ್ಟು ಶೃತಿ ವಿಚಾರವೇ ಚೇತನ್ ಗೆ ದೊಡ್ಡದಾಗಿ ಕಾಣಿಸಿದೆ. ಇನ್ನು ಶೃತಿಗೆ ಆದ ಅನ್ಯಾಯದ ಕುರಿತು ಕಮಿಟಿಯಲ್ಲಿ ಚರ್ಚಿಸದೇ ನೇರವಾಗಿ ಮಾಧ್ಯಮಗಳ ಮುಂದೆ ಹೋಗಿದ್ದಾರೆ. ಸಂಸ್ಧೆಯಲ್ಲಿ ಏನೇ ನಡೆಯಬೇಕಾದರೂ ಚೇತನ್ ಉದ್ದೇಶದಂತೆ ನಡೆಯಬೇಕಾಗಿತ್ತು. ಇದರಿಂದ ನಾನು ಫೈರ್ ನಿಂದ ಹೊರಬಂದಿದ್ದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com