ಕನ್ನಡ ಚಿತ್ರೋದ್ಯಮದಲ್ಲಿ ಸ್ಥಳೀಯ ನಾಯಕಿಯರ ಕೊರತೆ: ಅಪೂರ್ವ

ಕಳೆದ ಎರಡು ವರ್ಷಗಳ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ನಾಯಕ, ನಿರ್ದೇಶಕನಾಗಿ ಕಾಣಿಸಿಕೊಂಡಿದ್ದ "ಅಪೂರ್ವ" ಚಿತ್ರದಲ್ಲಿ ನಟಿಸಿದ್ದ ಆಶಾ ಇದೀಗ ಮತ್ತೆ ಬೆಳ್ಳಿ ಪರದೆಯಲ್ಲಿ ಅದೃಷ್ಟ ಪರೀಕ್ಷೆಗೆ....
ಅಪೂರ್ವ
ಅಪೂರ್ವ
Updated on
ಬೆಂಗಳೂರು: ಕಳೆದ ಎರಡು ವರ್ಷಗಳ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ನಾಯಕ, ನಿರ್ದೇಶಕನಾಗಿ ಕಾಣಿಸಿಕೊಂಡಿದ್ದ "ಅಪೂರ್ವ" ಚಿತ್ರದಲ್ಲಿ ನಟಿಸಿದ್ದ ಆಶಾ ಇದೀಗ ಮತ್ತೆ ಬೆಳ್ಳಿ ಪರದೆಯಲ್ಲಿ ಅದೃಷ್ಟ ಪರೀಕ್ಷೆಗೆ ಸಿದ್ದವಾಗಿದ್ದಾರೆ. ಈ ಭಾರಿ ಅವರು "ವಿಕ್ಟರಿ 2" ಮೂಲಕ ಮತ್ತೆ ಕನ್ನಡ ಚಿತ್ರಪ್ರೇಮಿಗಳ ಮನಗೆಲ್ಲಲು ಸಿದ್ದವಾಗಿದ್ದಾರೆ.
"ನಾನು ನನ್ನ ವಿದ್ಯಾಭ್ಯಾಸ ಸಂಪೂರ್ಣಗೊಳಿಸುವುದಕ್ಕಾಗಿ ಈ ಎರಡು ವರ್ಷಗಳ ಬ್ರೇಕ್ ಪಡೆದಿದ್ದೆ. ಇದು ನನ್ನ ಆದ್ಯತೆಯಾಗಿತ್ತು. ಹಾಗೆಯೇ ಉದ್ಯಮದಲ್ಲಿ ಯಾವುದೇ ಗಾಡ್ ಫಾದರ್ ಗಳಿಲ್ಲದೆ ನಾನು ಹೊಸದಾಗಿ ಆಗಮಿಸಿದ್ದರಿಂದ ನನ್ನ ದಾರಿಯನ್ನು ನಾನೇ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು" ಅವರು ಹೇಳಿದ್ದಾರೆ.
ಅಪೂರ್ವ ನಟನೆ ಕುರಿತಂತೆ ಬಹಳ ದೊಡ್ಡ ಕನಸು ಕಂಡಿದ್ದರೂ ಸಹ ಅವರು ಯಾವುದೇ ನೃತ್ಯಾಭ್ಯಾಸವಾಗಲಿ, ನಟನೆ ಕುರಿತ ತರಬೇತಿಗಾಗಲಿ ಹೋಗಲಿಲ್ಲ."ನಾನು ನನ್ನನ್ನು ಎಂದಿಗೂ ಹೀರೋಯಿನ್ ಎಂದೇ ಕಎದುಉಕೊಳ್ಳುತ್ತೇನೆ. ಅಂದಹಾಗೆ ನನ್ನ ಶಾಲೆ, ಕಾಲೇಜು ದಿನಗಳಲ್ಲಿ ಸಹ ನನ್ನನ್ನು ನನ್ನ ಸಹಪಾಠಿಗಳು ಹೀರೋಯಿನ್ ಎಂದೇ ಕರೆಯುತ್ತಿದ್ದರು" ಅಪೂರ್ವ ಎನ್ನುವ ಹೆಸರಲ್ಲಿ ಪ್ರಸಿದ್ದರಾದ ನಟಿ ಹೇಳಿದ್ದಾರೆ.
"ವಿಕ್ಟರಿ-2" ಅಪುರ್ವ ಅವರ ಪಾಲಿಗೆ ಪ್ರಥಮ ಕಮರ್ಷಿಯಲ್ ಚಿತ್ರವಾಗಿದೆ. "ಈ ಪಾತ್ರ ಅಪೂರ್ವ ಪಾತ್ರಕ್ಕಿಂತ ಭಿನ್ನವಾಗಿದೆ. ನನ್ನ ಪರಿಚಯದ ನಿರ್ಮಾಪಕರೊಬ್ಬರು ನನಗೆ ಕರೆ ಮಾಡಿ ವಿಕ್ಟರಿ 2 ಚಿತ್ರಕ್ಕೆ ನನ್ನನ್ನು ಆಹ್ವಾನಿಸಿದ್ದರು. ಬಳಿಕ ಚಿತ್ರದ ನಿರ್ದೇಶಕರು ನನ್ನನ್ನು ಸಂಪರ್ಕಿಸಿದ್ದರು. ಈ ಚಿತ್ರದ ಬಗ್ಗೆ ನನಗೆ ದೊಡ್ಡ ನಿರೀಕ್ಷೆ ಇದೆ.ಪ್ರಾಯಶಃ, ಈ ಚಿತ್ರದ ಕಥೆ ಹಾಗೂ ಪಾತ್ರಧಾರಿಗಳ ಕಾರಣದಿಂದ ಈ ನಿರೀಕ್ಷೆ ಹುಟ್ಟಿರಬಹುದು. ನನಗೆ ಈ ಚಿತ್ರ ಇನ್ನೊಂದು ಬ್ರೇಕ್ ನೀಡಲಿದೆ ಎಂದು ನಾನು ಭಾವಿಸಿದ್ದೇನೆ"ಅಪೂರ್ವ ಹೇಳಿದ್ದಾರೆ.
ಚಿತ್ರೀಕರಣದ ಪ್ರಾರಂಬದಲ್ಲಿ ಶರಣ್ ಹಾಗೂ ರವಿಶಂಕರ್ ಅವರಂತಹಾ ನಟರನ್ನು ಎದುರಿಆಲು ಸ್ವಲ್ಪ ಹಿಂಜರಿಕೆ ಉಂತಾಗಿತ್ತು."ಅವರ ಮುಂದೆ ನಾನು ಸುದೀರ್ಘ ಡೈಲಾಗ್ ಡೆಲಿವರಿ ಂಆಡಬೇಕಾಗಿದ್ದು ಮೊದಲು ನನಗೆ ಇದು ಕಠಿಣ ಅನುಭವ ಎನಿಸಿದೆ.ಆದರೆ ನಿರ್ದೇಸಕ ಹರಿಶಂಕರ್ ನನಗೆ ಈ ನಿಟ್ಟಿನಲ್ಲಿ ಸಹಾಯಮಾಡಿದ್ದರು. ನನಗೆ ಭಯವನ್ನು ಹೋಗುವಂತೆ ಮಾಡಿ ಸೆಟ್ ನಲ್ಲಿ ನಾನು ಸ್ವಾಭಾವಿಕವಾಗಿರಲು ನೆರವಾದರು. ಕಡೆಗೆ ಶರನ್ ಹಾಗೂ ರವಿಶಂಕರ್ ತಾವು ಸಹ ಹಲವು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಹೊಸದಾಗಿ ಪ್ರವೇಶ ಮಾಡಿದ ಅನುಭವ ಹೊಂದಿದೆವು ಎಂದಾಗ ನನಗೆ ನಿಜಕೂ ಆಶ್ಚರ್ಯವಾಗಿತ್ತು" ನಟಿ ವಿವರಿಸಿದ್ದಾರೆ.
ಇನ್ನು ಅದೃಷ್ಟದ ಕುರಿತಂತೆ ಸಹ ಮಾತನಾಡಿದ ಅಪೂರ್ವ"ಕನ್ನಡದಲ್ಲಿ ಕನ್ನಡದ ಹೀರೋಯಿನ್ (ನಾಯಕಿ)ಗಳ ಕೊರತೆ ಇದೆ. ಬಹುತೇಕ ಚಿತ್ರಗಳಲ್ಲಿ ಹೊರರಾಜ್ಯದ ನಾಯಕ ನಟಿಯರು ಅಭಿನಯಿಸುವುದನ್ನು ಣಾವು ಕಾಣುತ್ತೇವೆ.ಈ ಸ್ಪರ್ಧಾತ್ಮಕ ಉದ್ಯಮದಲ್ಲಿ ನಾವು ನೆಲೆಯೂರಬೇಕಾದರೆ ನಾವು ಆಯ್ಕೆ ಮಾಡುವ ಕಥಾವಸ್ತು ಹಾಗೂ ತಂಡ ಮುಖ್ಯವೆನಿಸುತ್ತದೆ. ಆಗ ನಾವು ಉದ್ಯಮದಲ್ಲಿರುವವರು ಹಾಗೂ ಪ್ರೇಕ್ಷಕರ ಗಮನ ಸೆಳೆಯಬಲ್ಲೆವು" ಅವರುಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com