ಶಾನ್ವಿ ಶ್ರೀವಾಸ್ತವ
ಶಾನ್ವಿ ಶ್ರೀವಾಸ್ತವ

ಈ ಬಾರಿ 'ರವಿಚಂದ್ರ' ಸೆಟ್ ನಲ್ಲೇ ದೀಪಾವಳಿ ಹಬ್ಬ ಆಚರಣೆ: ಶಾನ್ವಿ ಶ್ರೀವಾಸ್ತವ

ಶಾನ್ವಿ ಶ್ರೀವಾಸ್ತವ ಪಾಲಿಗೆ ಈ ಸಾಲಿನ ದೀಪಾವಳಿ ಕೆಲಸದ ನಡುವೆ ಬಿಡುವಿಲ್ಲದ ದೀಪಾವಳಿ ಆಗಲಿದೆ. ಆಕೆ ಇದಾಗಲೇ "ಅವನೇ ಶ್ರೀಮನ್ನಾರಾಯಣ" ಮತ್ತು "ರವಿಚಂದ್ರ" ಚಿತ್ರಗಳ ಶೂಟಿಂಗ್ ನಲ್ಲಿ ಸಾಕಷ್ಟು....
Published on
ಬೆಂಗಳೂರು: ಶಾನ್ವಿ ಶ್ರೀವಾಸ್ತವ ಪಾಲಿಗೆ ಈ ಸಾಲಿನ ದೀಪಾವಳಿ ಕೆಲಸದ ನಡುವೆ ಬಿಡುವಿಲ್ಲದ ದೀಪಾವಳಿ ಆಗಲಿದೆ. ಆಕೆ ಇದಾಗಲೇ "ಅವನೇ ಶ್ರೀಮನ್ನಾರಾಯಣ" ಮತ್ತು "ರವಿಚಂದ್ರ" ಚಿತ್ರಗಳ ಶೂಟಿಂಗ್ ನಲ್ಲಿ ಸಾಕಷ್ಟು ಬ್ಯುಸಿ ಇದ್ದು ಕೈತುಂಬಾ ಕೆಲಸಗಳಿರುವ ಕಾರಣ ಈ ದೀಪಾವಳಿ ಅವರ ಪಾಲಿಗೆ ವಿಶಿಷ್ಟವಾಗಲಿದೆ.
"ರವಿಚಂದ್ರ"ದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಜತೆ ನಟಿಸುತಿರುವ ಶಾನ್ವಿ ಉಪೇಂದ್ರ ಜತೆ ತೆಗೆಸಿಕೊಂಡ ಸೆಲ್ಫಿಯನ್ನು ಅವರು ಇದಾಗಲೇ ಹಂಚಿಕೊಂಡಿದ್ದಾರೆ. "ಈ ಬಾರಿ ರವಿಚಂದ್ರ ಸೆಟ್ ನಲ್ಲೇ ದೀಪಾಅಳಿ ಆಚರಣೆಯಾಗಲಿದೆ. ಓಂ ಪ್ರಕಾಶ್ ರಾವ್ ನಿರ್ದೇಆನ, ನಿರ್ಮಾಪಕರಾದ ಆರ್.ಎಸ್. ಶ್ರೀನಿವಾಸ್ ಹಾಗೂ ತಂಡದ ಸದಸ್ಯರೊಡನೆ 30 ದಿನಗಳ ಸುದೀರ್ಘ ಚಿತ್ರೀಕರಣ ಷೆಡ್ಯೂಲ್ ಇರಲಿದ್" ಶಾನ್ವಿ ಹೇಳಿದ್ದಾರೆ.
ಇದಾಗಲೇ ಚಿತ್ರತಂಡ ಮೂರನೇ ಹಂತದ ಚಿತ್ರೀಕರಣ ಪ್ರಾರಂಭಿಸಿದ್ದು ಬೆಂಗಳೂರು, ಮೈಸೂರು, ಬಳ್ಳಾರಿ, ಸಂಡೂರು ಸೇರಿ ಅನೇಕ ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ."ನವೆಂಬರ್ ನಲ್ಲಿ ಈ ಎರಡೂ ಚಿತ್ರಗಳ ಚಿತ್ರೀಕರಣ ಮುಗಿಯುವುದಾಗಿ ನಾನು ಭಾವಿಸಿದ್ದೇನೆ. ನಾನೀಗಾಗಲೇ ನನ್ನ ಮುಂದಿನ ಯೋಜನೆಗಾಗಿ ಸ್ಕ್ರಿಪ್ಟ್ ಗಳ ಓದುವುದಕ್ಕೆ ಪ್ರಾರಂಭಿಸಿದ್ದೇನೆ" ನಟಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com