ಬೆಂಗಳೂರು: ನಟ ಅಚ್ಯುತ್ ಕುಮಾರ್ ಇದೀಗ ಅಡಿಗೆ ಮನೆ ಸೇರಿದ್ದಾರೆ. ಅವರು ವಿವಿಧ ಬಗೆಯ ಅಯ್ಯಂಗಾರ್ ಶೈಲಿಯ ಅಡಿಗೆ ತಯಾರಿಯ ತರಬೇತಿ ಹೊಂದುತ್ತಿದ್ದಾರೆ! ಅರೆ, ಇದೇನು ನಟ ಅಚ್ಯುತ್ ಈಗೇಕೆ ಅಡಿಗೆ ಕಲಿಯುತ್ತಾರೆ ಎಂದುಕೊಂಡಿರೆ? ಅವರ ಮುಂದಿನ ಚಿತ್ರ "ಭೀಮಸೇನ ನಳ ಮಹಾರಜ" ಕ್ಕಾಗಿ ಈ ತಯಾರಿ ಕಾರ್ತಿಕ್ ಸರಗೂರ್ ನಿರ್ದೇಶನದ "ಭೀಮಸೇನ..." ದಲ್ಲಿ ಅಚ್ಯುತ್ ಕುಮಾರ ಪ್ರಮುಖ ಪಾತ್ರಧಾರಿ.
ಅಚ್ಯುತ್ ಈ ಚಿತ್ರದಲ್ಲಿ ಐಯ್ಯಂಗಾರ್ ಬೇಕರಿ ಮಾಲೀಕರಾಗಿ ಕಾಣಿಸಿಕೊಳ್ಳುತ್ತಿದ್ದು ಚಿತ್ರವು ಅಡಿಗೆ ಮನೆ ಸುತ್ತಲಿನ ಕಥೆಯನ್ನೇ ಹೂಂದಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
"ಭೀಮಸೇನ... ಚಿತ್ರ ಐಯ್ಯಂಗಾರ್ ಬೇಕರಿಯ ಇತಿಹಾಸವನ್ನು ನಿರೂಪಿಸುತ್ತದೆ. ಅಚ್ಯುತ್ ಕುಮಾರ್ ಅವರ ಭಾಗದ ಚಿತ್ರೀಕರಣವನ್ನು ಕೆಜಿಎಫ್ ಫ್ಯಾಕ್ಟರಿ ಸಂಸ್ಥಾಪಕ ಜಾನ್ ಟೇಲರ್ ಗೆ ಸೇರಿದ್ದ 150 ವರ್ಷ ಹಳೆಯ ಐತಿಹಾಸಿಕ ಬಂಗಲೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಬ್ರಿಟಿಷ್ ಬ್ರ್ಯಾಂಡ್ ಎಂಬ ಇಂಪೀರಿಯಲ್ ಬೇಕರಿಯ ಇತಿಹಾಸವನ್ನು ಚಿತ್ರ ಒಳಗೊಂಡಿದೆ. ನಾನು ಈ ಸ್ಥಳಗಳಿಗೆ ತೆರಳಿದಾಗ ಆ ಕಾಲದ ಅಡಿಗೆ ಮನೆಗಳನ್ನು ಕಾಣಬೇಕಾಯಿತು, ಜತೆಗೆ ತಮಿಳು ಐಯ್ಯಂಆಗ್ರ್ನಂತೆ ಇರುವ ಪಾತ್ರಕ್ಕಾಗಿ ನಾನು ಅವರಂತೆಯೇ ಅಭಿನಯಿಸಬೇಕಾಗಿತ್ತು" ಅಚ್ಯುತ್ ಕುಮಾರ್ ಹೇಳಿದ್ದಾರೆ.
ಇನ್ನು ಚಿತ್ರದಕ್ಲ್ಲಿ ಅಚ್ಯುತ್ ಪಾತ್ರ "ಕಹಿ ಅನುಭವ" ನಿಡುವ ಫಾತ್ರವಾಗಿ ಬರುತ್ತದೆ."ಕುಟುಂಬದಲ್ಲಿ ತಂದೆಯ ಪಾತ್ರ ಸಾಕಷ್ಟು ತಪ್ಪು ಗ್ರಹಿಕೆಗೆ ಕಾರಣವಾಗುತ್ತದೆ. ಏಕೆಂಡರೆ ಅವರ ಮಾತು ಅಂತಿಮ ಎಂದೇ ಭಾವಿಸಲಾಗುವುದು.ಇದರಿಂದ ಚಿತ್ರದಲ್ಲಿ ನನ್ನ ಪಾತ್ರವನ್ನು ನನ್ನ ಮಗ "ಹಿಟ್ಲರ್" ಎಂದು ಬಾವಿಸುವಂತೆ ಹೆಣೆಯಲಾಗಿದೆ.ಎಂದು ಮಗನಿಗೆ ತಂದೆಯ ನಡೆಯ ಹಿಂದಿನ ಕಾರಣ ಅರಿವಾಗುತ್ತದೋ ಆ ದಿನ ತಂಡೆಯ ಜನ್ಮ ಸಾರ್ಥಕವಾಗುವುದು, ಇದು "ಭೀಮ ಸೇನ..." ಚಿತ್ರದ ಪ್ರಮುಖ ಆಸಕ್ತಿದಾಯಕ ಭಾಗವಾಗಿದೆ.ನಿರ್ದೇಶಕರು ಒಳ್ಳೆಯ ನಿರೂಪಣೆ ಮೂಲಕ ಇದನ್ನು ಕಟ್ಟಿಕೊತ್ಟಿದ್ದ್ದಾರೆ."ಅಚ್ಯುತ್ ವಿವರಿಸಿದ್ದಾರೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ಎಂ ರಾವ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಅರವಿಂದ್ ಅಯ್ಯರ್, ಪ್ರಿಯಾಂಕಾ ತಿಮ್ಮೇಶ್, ಅರೊಹಿ ನಾರಾಯಣ್ ಇನ್ನೂ ಮೊದಲಾದವರು ಚಿತ್ರದಲ್ಲಿ ಪಾತ್ರವಹಿಸಿದ್ದಾರೆ. ಚರಣ್ ರಾಜ್ ಸಂಗೀತ, ರವೀಂದ್ರನಾಥ್ ಛಾಯಾಗ್ರಹಣವಿದೆ.