ಬೆಂಗಳೂರು: ವಿ ಪ್ರಿಯಾ ನಿರ್ದೇಶನದಲ್ಲಿ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಅಭಿನಯದ ಸಿನಿಮಾ ಶೂಟಿಂಗ್ ಮುಗಿದಿದ್ದು, ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ, ಕಥೆಗೆ ಹೊಂದುವಂತ ಟೈಟಲ್ ಗಾಗಿ ಸಿನಿಮಾ ತಂಡ ಹುಡುಕಾಟ ನಡೆಸಿತ್ತು. ಈಗ ಚಿತ್ರಕ್ಕೆ ಆದಿ ಲಕ್ಷ್ಮಿ ಪುರಾಣ ಎಂದು ಹೆಸರಿಡಲಾಗಿದೆ, ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ನಟಿಸಿದ್ದಾರೆ, ಇಬ್ಬರು ಜೊತೆಯಾಗಿ ಮೊದಲ ಬಾರಿಗೆ ಅಭಿನಯಿಸಿದ್ದಾರೆ.