ಸೈಮಾ ಪ್ರಶಸ್ತಿ ಸ್ವೀಕರಿಸಿದ ಪುನೀತ್ ಹಾಗೂ ಶಾನ್ವಿ ಶ್ರೀವಾಸ್ತವ
ಸಿನಿಮಾ ಸುದ್ದಿ
ಸೈಮಾ ಪ್ರಶಸ್ತಿ 2018: ರಾಜಕುಮಾರ ಶ್ರೇಷ್ಠ ಚಿತ್ರ, ಪುನೀತ್, ಶಾನ್ವಿ ಅತ್ಯುತ್ತಮ ನಟ-ನಟಿ
018ನೇ ಸಾಲಿನ ಸೈಮಾ ಪ್ರಶಸ್ತಿ ಪುರಸ್ಕಾರ ಸಮಾರಂಭ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್(ಸೈಮಾ ಅವಾರ್ಡ್)....
ದುಬೈ: 2018ನೇ ಸಾಲಿನ ಸೈಮಾ ಪ್ರಶಸ್ತಿ ಪುರಸ್ಕಾರ ಸಮಾರಂಭ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್(ಸೈಮಾ ಅವಾರ್ಡ್) ಪ್ರಧಾನ ಕಾರ್ಯಕ್ರಮದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟ ನಟಿಯರು ಪಾಲ್ಗೊಂಡಿದ್ದರು
ಇನ್ನು ಪುನೀತ್ ರಾಜ್ ಕುಮಾರ್ ಅಭಿನಯದ ಯಶಸ್ವಿ ಚಿತ್ರ ರಾಜಕುಮಾರ ಅತ್ಯುತ್ತಮ ಚಿತ್ರ ಸೇರಿದಂತೆ ಐದು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.
ರಾಜಕುಮಾರ ಚಿತ್ರದ ಅಭಿನಯಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದರೆ ಶಾನ್ವಿ ಶ್ರೀವಾಸ್ತವ್ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ.
ಉಳಿದಂತೆ ಸೈಮಾ ಪ್ರಶಸ್ತಿ ಪುರಸ್ಕೃತ ಕನ್ನಡಿಗರ ಪಟ್ಟಿ ಇಲ್ಲಿದೆ-
ಅತ್ಯುತ್ತಮ ನಟ: ಪುನೀತ್ ರಾಜ್ ಕುಮಾರ್
ಅತ್ಯುತ್ತಮ ನಟಿ: ಶಾನ್ವಿ ಶ್ರೀವಾಸ್ತವ
ಅತ್ಯುತ್ತಮ ಚಿತ್ರ: ರಾಜಕುಮಾರ
ವಿಮರ್ಶಕರ ಅತ್ಯುತ್ತಮ ನಟಿ: ಶ್ರುತಿ ಹರಿಹರನ್
ಅತ್ಯುತ್ತಮ ನಿರ್ದೇಶಕ: ಸಂತೋಷ್ ಆನಂದ್ ರಾಮ್
ಅತ್ಯುತ್ತಮ ಛಾಯಾಗ್ರಾಹಕ: ಸಂತೋಷ್ ರೈ ಪತಾಜೆ
ಅತ್ಯುತ್ತಮ ಖಳನಟಿ: ಅಪೇಕ್ಷಾ ಪುರೋಹಿತ್
ಅತ್ಯುತ್ತಮ ಪೋಷಕ ನಟ: ಕಾಶೀನಾಥ್
ಅತ್ಯುತ್ತಮ ಪೋಷಕ ನಟಿ: ಭಾವನಾ ರಾವ್
ಅತ್ಯುತ್ತಮ ಉದಯೋನ್ಮುಖ ನಟ: ರಿಷಿ
ಅತ್ಯುತ್ತಮ ಉದಯೋನ್ಮುಖ ನಟಿ - ಏಕ್ತಾ ರಾಥೋಡ್
ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ - ತರುಣ್ ಸುಧೀರ್
ಅತ್ಯುತ್ತಮ ಸಂಗೀತ ನಿರ್ದೇಶಕ - ವಿ.ಹರಿಕೃಷ್ಣ
ಅತ್ಯುತ್ತಮ ಬಾಲ ನಟಿ: ಶಾಲ್ಘ ಸಾಲಿಗ್ರಾಮ
ಅತ್ಯುತ್ತಮ ಹಿನ್ನಲೆ ಗಾಯಕ - ರವಿ ಬಸ್ರೂರ್
ಅತ್ಯುತ್ತಮ ಹಿನ್ನಲೆ ಗಾಯಕಿ - ಅನುರಾಧಾ ಭಟ್
ಅತ್ಯುತ್ತಮ ಗೀತ ಸಾಹಿತ್ಯ - ಸಂತೋಷ್ ಆನಂದ್ ರಾಮ್
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ